Advertisement
ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ಹೆಚ್ಚಾಗಿತ್ತು. ಇದನ್ನು ನಿಯಂತ್ರಿಸುವ ಸವಾಲು ಎದುರಾಗಿದೆ. ನಮ್ಮ ಜಿಲ್ಲೆಯಲ್ಲದೆ, ಬೇರೆ ಜಿಲ್ಲೆಯ ಸೋಂಕಿತರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.
Related Articles
Advertisement
ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸಲು ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೇಗಿದೆ? :
ಕೋವಿಡ್ ಸೋಂಕಿನ ಎರಡನೇ ಅಲೆಯು ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ನಿಭಾಯಿಸುತ್ತಿರುವುದು ಸಮಾಧಾನ ತಂದಿದೆ. ಸೋಂಕು ನಿಯಂತ್ರಿಸಲು ಅಗತ್ಯವಾಗಿ ಬೇಕಾಗಿದ್ದ ಅನುದಾನ10ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿತು. ಅಲ್ಲದೆ, ಅದಕ್ಕೂ ಮುನ್ನ ತಾಲೂಕಿನ ಎಲ್ಲ ತಾಲೂಕು ಆಡಳಿತಗಳಿಂದ50 ರಿಂದ1 ಲಕ್ಷ ರೂ.ವರೆಗೆ ತೆಗೆದುಕೊಂಡು ಚಿಕಿತ್ಸೆಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ಕೇಂದ್ರ ತೆರೆದು ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಿ, ಕ್ರಮ ವಹಿಸಲಾಯಿತು.
ಪ್ರಸ್ತುತ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆಯಾ? ಹೌದು, ಪ್ರಸ್ತುತ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಮೊದಲು2 ಸಾವಿರದಷ್ಟು ಪ್ರಕರಣ ದಾಖಲಾಗುತ್ತಿದ್ದವು. ಈಗ 500ಕ್ಕೆ ಇಳಿದಿರುವುದು ಸಮಾಧಾನ ತಂದಿದೆ. ಸೋಂಕು ಹೆಚ್ಚಾಗುತ್ತಿದ್ದಂತೆ ಮೊರಾರ್ಜಿ,ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಇತರೆ ವಸತಿ ಶಾಲೆಗಳು ಹಾಗೂ ನವೋದಯ ಶಾಲೆಗಳಲ್ಲಿಕ್ವಾರಂಟೈನ್
ಕೇಂದ್ರಗಳನ್ನು ತೆರೆದು ಸೋಂಕಿತರುಕಂಡು ಬಂದ ತಕ್ಷಣ ಅವರನ್ನು ಕ್ವಾರಂಟೈನ್ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ, ಗುಣಮಟ್ಟದಊಟ, ತಿಂಡಿ, ಬಿಸಿ ನೀರು ವ್ಯವಸ್ಥೆ ಜೊತೆಗೆ ಶುಚಿತ್ವಕ್ಕೆ ಒತ್ತು ನೀಡಲಾಗುತ್ತಿದೆ. ಎಲ್ಲ ತಾಲೂಕುಗಳಲ್ಲಿಯೂ ಬೆಡ್‌ಗಳ ಸಂಖ್ಯೆ ಹೆಚ್ಚಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಸಮಾಧಾನ ತಂದಿದೆ.
ಸ್ಥಳೀಯ ಶಾಸಕರು ಹಾಗೂಅಧಿಕಾರಿಗಳ ಸಹಕಾರ ಹೇಗಿದೆ?
ಸ್ಥಳೀಯ ಶಾಸಕರು ತಮ್ಮಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಿ ಅದರಂತೆಕೆಲಸ ನಿರ್ವಹಿಸಲಾಗುತ್ತಿದೆ. ಯಾವ ತಾಲೂಕಿನಲ್ಲಿ ಸೌಲಭ್ಯದಕೊರತೆ ಇದ್ದರೆ ತಕ್ಷಣ ತಿಳಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆಸಮಸ್ಯೆ ಇರುವ ತಾಲೂಕುಗಳಿಗೆ ಅಗತ್ಯ ಸೌಲಭ್ಯಕಲ್ಪಿಸಲಾಗಿದೆ. ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸೋಂಕು ಹತೋಟಿಗೆ ಬರುತ್ತಿದೆ.
ಆಕ್ಸಿಜನ್ ಕೊರತೆ ನೀಗಿಸಲು ಏನು ಕ್ರಮ?
ಜಿಲ್ಲೆಯಲ್ಲಿ ಮೊದಲು ಆಕ್ಸಿಜನ್‌ಕೊರತೆ ಇತ್ತು.ಕೊರತೆ ನೀಗಿಸಲು ಹಗಲು-ರಾತ್ರಿ ಶ್ರಮಿಸಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿದ್ದಕೆಲವು ಸಮಸ್ಯೆಗಳನ್ನು ನಿವಾರಿಸಿ, ಎಲ್ಲ ಸೋಂಕಿತರ ವಾರ್ಡ್‌ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಸೋಂಕಿತರ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ. ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆಕಾಡುತ್ತಿತ್ತು. ಇದಕ್ಕಾಗಿ ಮೈಸೂರಿಗೆ ಹೋಗಿ ಆಕ್ಸಿಜನ್‌ತುಂಬಿಸಿಕೊಂಡು ಬರಲು ಅಧಿಕಾರಿಗಳು ಶ್ರಮ ವಹಿಸಿದ್ದಾರೆ. ಈಗ ಆಕ್ಸಿಜನ್‌ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.
– ಎಚ್.ಶಿವರಾಜು