ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸಾ ವ್ಯವಸ್ಥೆಗೆ10ಕೋಟಿ ರೂ. ಸೋಮವಾರ ಬಿಡುಗಡೆ ಮಾಡಲಾಗುವುದು ಎಂದುಉಪ ಮುಖ್ಯಮಂತ್ರಿ ಡಾ.ಆಶ್ವತ್ಥ್ ನಾರಾಯಣ್ ಪ್ರಕಟಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೊರೊನಾಚಿಕಿತ್ಸಾ ವ್ಯವಸ್ಥೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ವಿವಿಧ ಹಂತಗಳಲ್ಲಿಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎಸ್‌ಡಿಆರ್‌ಎಫ್ ನಿಧಿಯಲ್ಲಿ ವಿವಿಧ ಜಿಲ್ಲೆಗಳಿಗೆ ಒಟ್ಟು260ಕೋಟಿ ಬಿಡುಗಡೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತದಿಂದ ಬಂದಿರುವ ಪ್ರಸ್ತಾವೆನ ಆಧರಿಸಿ ಹಾಸನ ಜಿಲ್ಲೆಗೆ ಮಾತ್ರ ಸೋಮವಾರವೇ10ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಭರವಸೆ: ಆಮ್ಮಜನಕ ಬೇಡಿಕೆ ಪೂರೈಕೆಗೆ ಗಮನಹರಿಸಲಾಗಿದೆ.ಒಮ್ಮೆಲೇ ಬಳಕೆ ಹೆಚ್ಚಿದ ಕಾರಣ ಉತ್ಪಾದನೆ, ಸರಬರಾಜು,ಬಳಕೆಯಲ್ಲಿ ಸಮಸ್ಯೆ ತಲೆದೋರಿತ್ತು. ಪ್ರಸ್ತುತ ಬೇಡಿಕೆಗೆ ಸಮಾನಾಗಿಪೂರೈಕೆಯಾಗುತ್ತಿದೆ. ಮಂದಿನ ದಿನಗಳಲ್ಲಿ ಜಿಲ್ಲೆಗೆ ಇನ್ನಷ್ಟುಆಮ್ಲಜನಕ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬಿಲ್ ಪಡೆದ ಪ್ರಕರಣಗಳಿದ್ದರೆ ಕ್ರಮ ಕೈಗೊಂಡು ಆಡಿಟರ್ ಮಾಡಿಸಿ ವಾಪಸ್ ಕೊಡಿಸಿ ಎಂದು ಜಿಲ್ಲಾಧಿಕಾರಿಗೆ ತಾಕೀತು ಮಾಡಿದರು. ಕೊರೊನಾ ಲಸಿಕೆ ಡೋಸ್ ಬಾಕಿ ಇರುವವರಿಗೆ ನಿಗದಿತಸಮಯದೊಳಗೆ ಲಸಿಕೆ ಪೂರೈಸಲಾಗುವುದು. ಉಳಿದ ಹೆಚ್ಚುಜನಸಂಪರ್ಕಹೊಂದಿರುವ17ವರ್ಗಗಳಿಗೆ ಆದ್ಯತೆಮೇರೆಗೆಲಸಿಕೆನೀಡಲಾಗುವುದು ಎಂದರು.50ವೆಂಟಿಲೇಟರ್: ಜಿಲ್ಲಾಉಸ್ತುವಾರಿ ಸಚಿವ ಕೆ.ಗೋಪಾಲಯ್ಯಮಾತನಾಡಿ, ಜಿಲ್ಲೆಯಲ್ಲಿ ಚಿಕಿತ್ಸಾ ಕೊರತೆಗಳನ್ನು ಪರಿಹರಿಸಬೇಕು.
ಜಿಲ್ಲೆಗೆ4ರಿಂದ 5 ಕೆ.ಎಲ್ ಹೆಚ್ಚುವರಿ ಆಮ್ಮಜನಕ ನಿಗದಿಮಾಡಬೇಕು. ತುರ್ತಾಗಿ 50 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿ ಎಂದು ಮನವಿ ಮಾಡಿದರು.ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ,ಕೆ.ಎಂ.ಶಿವಲಿಂಗೇಗೌಡ, ಸಿ.ಎನ್ ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ಪ್ರೀತಂಜೆ.ಗೌಡಹಾಗೂವಿಧಾನಪರಿಷತ್‌ಸದಸ್ಯಎಂ.ಎ.ಗೋಪಾಲಸ್ವಾಮಿ ಮಾತನಾಡಿದರು.