Advertisement

ಕಾಯ್ದೆ ಉಲ್ಲಂಘನೆ : ಎಚ್‌ಡಿಎಫ್ಸಿಗೆ 10 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

10:29 PM May 28, 2021 | |

ನವದೆಹಲಿ: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಆದ ಎಚ್‌ಡಿಎಫ್ಸಿ ಸಂಸ್ಥೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 10 ಕೋಟಿ ರೂ.ಗಳ ದಂಡ ವಿಧಿಸಿದೆ.

Advertisement

1949ರ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ದಂಡವನ್ನು ವಿಧಿಸಲಾಗಿದೆ. ಬ್ಯಾಂಕಿನ ಥರ್ಡ್‌ ಪಾರ್ಟಿ ನಾನ್‌-ಫಿನಾನ್ಶಿಯಲ್‌ ಉತ್ಪನ್ನಗಳ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲವಾರು ಲೋಪಗಳಾಗಿರುವ ಬಗ್ಗೆ ದೂರುಗಳು ಬಂದಿದ್ದವು.

ಬ್ಯಾಂಕಿನ ಆಟೊಮೊಬೈಲ್‌ ಸಾಲ ನೀಡುವಿಕೆಯಲ್ಲಿ ಕೆಲವಾರು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಕಾರಣದಿಂದಾಗಿ ದಂಡ ವಿಧಿಸಲಾಗಿದೆ. ಆದರೆ, ತನ್ನ ಈ ಕ್ರಮದಿಂದ ಬ್ಯಾಂಕಿನ ಗ್ರಾಹಕರ ಮೇಲೆ ಹಾಗೂ ಗ್ರಾಹಕರು-ಎಚ್‌ಡಿಎಫ್ಸಿ ನಡುವಿನ ಒಪ್ಪಂದಗಳ ಮೇಲೆ ಯಾವುದೇ ದುಷ್ಪರಿಣಾಮ ಇರುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 52253 ಜನರು ಗುಣಮುಖ; 22823 ಪಾಸಿಟಿವ್ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next