ಗುವಾಹಾಟಿ: ಅಸ್ಸಾಂ ಸಿಎಂ ಹಿಮಾಂತ ಶರ್ಮಾ ಬಿಸ್ವಾ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ವಿವಿಧ ಸಂದರ್ಭಗಳಲ್ಲಿ ಪಕ್ಷದ ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದಾರೆ ಎಂಬ ಆರೋಪ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರದ್ದು. ಈ ಹಿನ್ನೆಲೆ ಯಲ್ಲಿ ಅಸ್ಸಾಂನ ಕಾಮರೂಪ್ ಜಿಲ್ಲೆಯ ಸ್ಥಳೀಯ ಕೋರ್ಟ್ ಒಂದರಲ್ಲಿ ಅವರು, ಮುಖ್ಯಮಂತ್ರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾವೆ ಹೂಡಿದ್ದಾರೆ. ಅಸ್ಸಾಂ ಸಿಎಂ ನೀಡಿದ ಹೇಳಿಕೆಯಿಂದ ಕಾಂಗ್ರೆಸ್‌ನ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತ್ರಿವಳಿ ತಲಾಕ್ ಜಾರಿಗೆ ಕಾಂಗ್ರೆಸ್ ಯತ್ನ
ಕಾಂಗ್ರೆಸ್ ಚುನಾವಣ ಪ್ರಣಾಳಿಕೆಯಲ್ಲಿ ವಿದೇಶಿ ಪ್ರಭಾವ ಎದ್ದು ಕಾಣುತ್ತಿದೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ. ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ವಿದೇಶೀ ಸಂಸ್ಥೆಯನ್ನು ಕಾಂಗ್ರೆಸ್ ಬಳಕೆ ಮಾಡಿರುವ ಶಂಕೆ ಇದೆ ಎಂದು ಆರೋಪಿ ಸಿದ್ದಾರೆ.
ಸದ್ಯ ರದ್ದಾಗಿರುವ ತ್ರಿವಳಿ ತಲಾಖ್ ಮರು ಜಾರಿ ಮಾಡುವ ಬಗ್ಗೆ ಅದು ವಾಗ್ಧಾನ ಮಾಡಿದೆ. ಇದರ ಜತೆಗೆ ಚುನಾಯಿತ ರಾಜ್ಯ ಸರಕಾರವನ್ನು ಕಿತ್ತು ಹಾಕುವ ಅಂಶವನ್ನೂ ಅದು ಪ್ರಸ್ತಾವಿಸಿದೆ. ಮೋದಿ ಸರಕಾರ ಜಾರಿ ಮಾಡಿರುವ ಹೊಸ ಪಿಂಚಣಿ ವ್ಯವಸ್ಥೆ ಬದಲಾಗಿ ಹಳೆಯ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದರು. ಇದಲ್ಲದೆ ನ್ಯೂಯಾರ್ಕ್ ಮತ್ತು ಥೈಲ್ಯಾಂಡ್‌ಗಳ ಚಿತ್ರಗಳನ್ನು ಪ್ರಣಾಳಿಕೆಯಲ್ಲಿ ಬಳಸಿಕೊಂಡು ದೇಶದ ವರ್ಚಸ್ಸು ತಗ್ಗಿಸುವ ಕೆಲಸದಲ್ಲಿ ತೊಡಗಿದೆ. ಎಂದೂ ದೂರಿದ್ದಾರೆ ಅಸ್ಸಾಂ ಸಿಎಂ.