Advertisement

ಬಿಬಿಸಿ ಕಚೇರಿಗಳಲ್ಲಿ ಮೂರನೇ ದಿನವೂ ಮುಂದುವರಿದ ಸಮೀಕ್ಷೆ ಕಾರ್ಯ

09:18 PM Feb 16, 2023 | Team Udayavani |

ನವದೆಹಲಿ/ಮುಂಬೈ: ಬಿಬಿಸಿಯ ಮುಂಬೈ ಮತ್ತು ನವದೆಹಲಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಕೈಗೊಂಡಿರುವ ಸಮೀಕ್ಷೆ ಮೂರನೇ ದಿನವಾದ ಗುರುವಾರವೂ ಮುಂದುವರಿದಿತ್ತು. ಇದೇ ವೇಳೆ ತಮ್ಮ ಎಲೆಕ್ಟ್ರಾನಿಕ್‌ ವಸ್ತುಗಳಿಂದ ಯಾವುದೇ ಡೇಟಾವನ್ನು ಡಿಲೀಟ್‌ ಮಾಡದಂತೆ ಬಿಬಿಸಿ ಉದ್ಯೋಗಿಗಳಿಗೆ ತೆರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಸಮೀಕ್ಷೆ ಕಾರ್ಯಕ್ಕೆ ಬಿಬಿಸಿ ಉದ್ಯೋಗಿಗಳು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಚೇರಿಯಲ್ಲೇ ಉಳಿದರು:

ಸಮೀಕ್ಷೆ ಹಿನ್ನೆಲೆಯಲ್ಲಿ ದೆಹಲಿಯ ಬಿಬಿಸಿ ಕಚೇರಿಯ ಕನಿಷ್ಠ 10 ಮಂದಿ ಉದ್ಯೋಗಿಗಳು ಎರಡು ದಿನಗಳಿಂದ ಮನೆಗೆ ತೆರಳದೇ ಕಚೇರಿಯಲ್ಲೇ ಉಳಿದಿದ್ದಾರೆ. ಅವರಿಗೆ ಅಲ್ಲಿಯೇ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಎಂದಿನಂತೆ ಬಿಬಿಸಿ ಪ್ರಸಾರ ಕಾರ್ಯ ಮುಂದುವರಿದಿದೆ. ಮುಂದಿನ ಆದೇಶದ ವರೆಗೆ 2 ಕಚೇರಿಗಳಲ್ಲಿರುವ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next