ಲಡಾಕ್: ಶನಿವಾರ ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಹಠಾತ್ ಪ್ರವಾಹ ಉಂಟಾದ ಪರಿಣಾಮ ಐವರು ಯೋಧರು ಹುತಾತ್ಮರಾಗಿವುದಾಗಿ ವರದಿಯಾಗಿದೆ.
ಈ ಘಟನೆಯು ಲೇಹ್‌ನಿಂದ 148 ಕಿಲೋಮೀಟರ್ ದೂರದಲ್ಲಿರುವ ಪೂರ್ವ ಲಡಾಕ್‌ನ ದೌಲತ್ ಓಲ್ಡಿ ಪ್ರದೇಶದಲ್ಲಿ ನಡೆದಿದ್ದು, ಬೆಳಗಿನ ಜಾವಾ ಒಂದು ಗಂಟೆಯ ವೇಳೆಗೆ ಸಮರಾಭ್ಯಾಸ ನಡೆಸುತ್ತಿದ್ದ ಸಮಯದಲ್ಲಿ ನದಿ ದಾಟುತ್ತಿದ್ದ ವೇಳೆ ಹಠಾತ್ ಪ್ರವಾಹ ಉಂಟಾಗಿದೆ ಪರಿಣಾಮ T-72 ಟ್ಯಾಂಕ್‌ನಲ್ಲಿ ಓರ್ವ ಜೆಸಿಒ ಮತ್ತು ನಾಲ್ವರು ಜವಾನರು ಸೇರಿದಂತೆ ಐವರು ಯೋಧರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಐವರು ಯೋಧರ ದೇಹಗಳನ್ನು ಹೊರತೆಗೆಯಲಾಗಿದೆ.
ಘಟನೆ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಸೇನಾ ತರಬೇತಿ ಸಮಯದಲ್ಲಿ ನಡೆದ ಹಠಾತ್ ದುರಂತದಿಂದ ಯೋಧರು ಹುತಾತ್ಮರಾಗಿರುವ ವಿಚಾರ ತಿಳಿದು ದುಃಖವಾಗಿದೆ, ದೇಶಕ್ಕೆ ನಮ್ಮ ಧೀರ ಸೈನಿಕರ ಅನುಕರಣೀಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಗಲಿದ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಲಡಾಖ್ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಶುಕ್ರವಾರ, ಶಿಮ್ಲಾ, ಕುಲು ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದ ವರದಿಯಾಗಿದೆ.
ಇದನ್ನೂ ಓದಿ: Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ