Advertisement

1,312 ಮಕ್ಕಳಿಗೆ 1 ಕೋ. ರೂ ಮೊತ್ತದ ಚೆಕ್‌ ವಿತರಣೆ

12:15 AM Jun 18, 2024 | Team Udayavani |

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಬೃಹತ್‌ ಸಮಾಜ ಕಲ್ಯಾಣ ಕಾರ್ಯಕ್ರಮ ಸೋಮವಾರ ನಗರದ ಪುರಭವನದಲ್ಲಿ ಜರಗಿತು.

Advertisement

ಮುಖ್ಯ ಅತಿಥಿಯಾಗಿದ್ದ ಎಂಆರ್‌ಜಿ ಗ್ರೂಪ್‌ ಚೇರ್ಮನ್‌ ಕೆ. ಪ್ರಕಾಶ್‌ ಶೆಟ್ಟಿ ಮಾತನಾಡಿ, ಜನಸೇವೆಯೇ ಜನಾರ್ದನನ ಸೇವೆ ಎನ್ನುವ ಸಂಕಲ್ಪವನ್ನು ಮಾಡಿಕೊಂಡು 2018ರಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇಂಥ ಅರ್ಥಪೂರ್ಣ ಕಾರ್ಯಕ್ರಮ ಮುಂದಕ್ಕೂ ನಡೆಯಬೇಕು ಎಂದರು.

ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಬೃಹತ್‌ ಐಟಿ ಸಂಸ್ಥೆ
ಅಶಕ್ತರು, ನೊಂದವರು ಸಂಕುಚಿತ ಮನೋಭಾವನೆ ಬಿಟ್ಟು ಹೊರಬನ್ನಿ. ನಾವು ದುಡಿದ ಅಲ್ಪಭಾಗವನ್ನು ಸಮಾಜಕ್ಕೆ ದಾನ ಮಾಡುತ್ತೇವೆ. ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಬೃಹತ್‌ ಐಟಿ ಸಂಸ್ಥೆ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಮೂಲಕ 60,000ಕ್ಕೂ ಹೆಚ್ಚು ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಹಾಕಿಕೊಂಡಿದ್ದೇನೆ. ಯಾರೂ ಕೆಲಸ ಇಲ್ಲ ಎಂದು ಊರು ಬಿಟ್ಟು ಹೋಗಬೇಡಿ ಎಂದರು.

ತಾಯ್ನಾಡಲ್ಲೇ ಉದ್ಯಮ: ಕೆ.ಎಂ. ಶೆಟ್ಟಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿ.ಕೆ. ಗ್ರೂಪ್‌ ಆಫ್‌ ಕಂಪೆನೀಸ್‌ ಸಿಇಒ ಕೆ.ಎಂ.ಶೆಟ್ಟಿ ಮಧ್ಯಗುತ್ತು ಅವರು, ಉದ್ಯಮ ಸ್ಥಾಪನೆಗೆ ಸರಕಾರದ ಸಹಕಾರ ಅಗತ್ಯ. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯಮಿಗಳು ಉದ್ಯಮ ಸ್ಥಾಪನೆಗೆ ಮುಂದಾಗಲಿದ್ದಾರೆ ಎಂದರು.

ಒಕ್ಕೂಟದ ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಇನ್ನು ಮುಂದಿನ ದಿನಗಳಲ್ಲೂ ಸಂಘಟನೆ ಇದೇ ರೀತಿ ಅರ್ಥಪೂರ್ಣ ಕಾರ್ಯಕ್ರಮ ಕೈಗೊಳ್ಳಲಿ ಎಂದರು.

Advertisement

ಕ್ಯಾ| ಬ್ರಿಜೇಶ್‌ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಅಭಿವೃದ್ಧಿಗೆ ವಿಶೇಷ ಯೋಜನೆ: ಚೌಟಬಳಿಕ ಮಾತಾಡಿದ ಬ್ರಿಜೇಶ್‌ ಚೌಟ, ಜಿಲ್ಲೆಯ ಅಭಿವೃದ್ಧಿಗೆ ತನ್ನದೇ ಆದ 9 ಕಾರ್ಯಸೂಚಿಯನ್ವಯ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತೇನೆ. ಜಿಲ್ಲೆಯನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಕಟಿಬದ್ಧನಾಗಿದ್ದೇನೆ ಎಂದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಂಟರು ತಮ್ಮ ಸ್ವಂತ ಬಲದಿಂದ ಬೆಳೆದು ಬಂದು ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಬಂಟರು ಯಶಸ್ವಿ ಉದ್ಯಮಿಗಳಾಗಿದ್ದಾರೆ. ದೇಶ ರಕ್ಷಣೆಯ ವಿಷಯ ಬಂದಾಗಲೂ ಮುಂಚೂಣಿ ಯಲ್ಲಿರುವವರು ಬಂಟರು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಸಮಾಜಮುಖೀ ಕಾರ್ಯಕ್ರಮಗಳನ್ನು ನಿರಂತವಾಗಿ ನಡೆಸಲು ದಾನಿಗಳ ಸಹಾಯ ಬೇಕು. ಸಮಾಜ ಕಲ್ಯಾಣ ಕಾರ್ಯಕ್ರಮದಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ ಎಂದುಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್‌ ಭೋಜ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಚೇರ್ಮನ್‌ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ರಾಜೇಶ್‌ ಎನ್‌. ಶೆಟ್ಟಿ, ಅರವಿಂದ್‌ ಆನಂದ್‌ ಶೆಟ್ಟಿ, ಬೆಳ್ಳಾಡಿ ಅಶೋಕ್‌ ಎಸ್‌. ಶೆಟ್ಟಿ, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಭಾಸ್ಕರ್‌ ಶೆಟ್ಟಿ ಕಾಶ್ಮೀರ, ಎ. ಸದಾನಂದ ಶೆಟ್ಟಿ, ಅಜಿತ್‌ ಕುಮಾರ್‌ ರೈ ಮಾಲಾಡಿ, ಡಾ| ಪಿ.ವಿ. ಶೆಟ್ಟಿ, ಪಟ್ಲ ಸತೀಶ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಇನ್ನಂಜೆ ಶಶಿಧರ್‌ ಶೆಟ್ಟಿ, ದಯಾಚರಣ್‌ ಶೆಟ್ಟಿ, ಶ್ರೀಧರ್‌ ಶೆಟ್ಟಿ, ಗಿರೀಶ್‌ ಶೆಟ್ಟಿ ತೆಳ್ಳಾರ್‌, ರವೀಂದ್ರ ಶೆಟ್ಟಿ ಉಳಿದೊಟ್ಟು, ಆದರ್ಶ ಶೆಟ್ಟಿ, ಸುಧಾಕರ್‌ ಪೂಂಜ, ನಾಗೇಶ್‌ ಹೆಗ್ಡೆ, ಪುರುಷೋತ್ತಮ್‌ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳೂ¤ರು ಮೋಹನ್‌ ದಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಹಾಸ್‌ ಡಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಡಾ| ಮಂಜುಳಾ ಶೆಟ್ಟಿ, ರಾಜೇಶ್ವರಿ ಡಿ. ಶೆಟ್ಟಿ ಸುರತ್ಕಲ್‌, ಬಾಲಕೃಷ್ಣ ಆಳ್ವ ಕೊಡಾಜೆ, ಆರ್‌ಜೆ ನಯನಾ, ಭಾಗ್ಯರಾಜ್‌ ಶೆಟ್ಟಿ ಸಹಕರಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್‌, ನಿತೇಶ್‌ ಶೆಟ್ಟಿ ಎಕ್ಕಾರ್‌, ಪ್ರಿಯಾ ಹರೀಶ್‌ ಶೆಟ್ಟಿ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿವೇತನ ವಿತರಣೆ
ಮಂಗಳೂರು ವಿವಿ ಗೌರವ ಡಾಕ್ಟರೆಟ್‌ ಪದವಿ ಪಡೆದ ಡಾ| ಕೆ.ಪ್ರಕಾಶ್‌ ಶೆಟ್ಟಿ, ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಮಧ್ಯಗುತ್ತು, ಲೆಫ್ಟಿನೆಂಟ್‌ ಸಾತ್ವಿಕ್‌ ರೈ ಕಾಸರಗೋಡು ಅವರನ್ನು ಸಮ್ಮಾನಿಸಲಾಯಿತು. ಇದೇ ವೇಳೆ ಸಮಾಜ ಕಲ್ಯಾಣ ಕಾರ್ಯಕ್ರಮದಂಗವಾಗಿ 1,312 ಮಕ್ಕಳಿಗೆ ಸುಮಾರು 1 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next