Advertisement

Sandalwood: ʼಫೈರ್‌ ಫ್ಲೈʼ ತಂಡ ಸೇರಿದ ಶೀತಲ್‌ ಶೆಟ್ಟಿ

01:09 PM Jun 12, 2024 | Team Udayavani |

ಶಿವರಾಜ್‌ ಕುಮಾರ್‌ ಅವರ ಪುತ್ರಿ ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿವೇದಿತಾ ಒಡೆತನದ ಶ್ರೀಮುತ್ತು ಸಿನಿ ಸರ್ವೀಸಸ್‌ನಡಿ ಮೂಡಿ ಬಂದಿರುವ “ಫೈರ್‌ ಫ್ಲೈ’ ಚಿತ್ರಕ್ಕೀಗ ನಿರೂಪಕಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್‌ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟನೆ ಬಿಟ್ಟು ನಿರ್ದೇಶನಕ್ಕಿಳಿದಿದ್ದ ಶೀತಲ್‌ ಇದೀಗ ಮತ್ತೂಮ್ಮೆ ನಟನೆಯತ್ತ ಕಂಬ್ಯಾಕ್‌ ಮಾಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಶೀತಲ್‌, ವಂಶಿ ಸೆಟ್‌ಗೆ ಚೆನ್ನಾಗಿ ತಯಾರಾಗಿ ಬಂದರು. ಅವರು ತಮ್ಮ ನಟರಿಂದ ಏನನ್ನು ಬಯಸುತ್ತಾರೆ ಎಂಬುದು ಅವರಿಗೆ ತಿಳಿದಿದೆ ಮತ್ತು ಚೊಚ್ಚಲ ನಿರ್ದೇಶಕರಂತೆ ಕಾಣುವುದಿಲ್ಲ. ಅವರ ಕಥೆ ಮತ್ತು ಪಾತ್ರದ ನಿರೂಪಣೆಯಿಂದ ಹಿಡಿದು ಎಲ್ಲಾ ಕಲಾವಿದರನ್ನು ಸರಾಗವಾಗಿ ನಿಭಾಯಿಸುವವರೆಗೆ ಅವರು ಗಮನಿಸಬೇಕಾದ ಉತ್ತಮ ಪ್ರತಿಭೆ. ಚಿತ್ರೀಕರಣದ ಸಮಯದಲ್ಲಿ, ಅವರ ಪೂರ್ವ-ಯೋಜನೆ ಮತ್ತು ಯುವ ತಾಂತ್ರಿಕ ತಂಡವು ಅವರು ಪ್ರತಿಭಾವಂತ ಜನರ ಗುಂಪಾಗಿ ನನ್ನನ್ನು ನಂಬು ವಂತೆ ಮಾಡಿತು. ನಾನು ಇತ್ತೀಚೆಗೆ ಚಿತ್ರಕ್ಕೆ ಡಬ್ಬಿಂಗ್‌ ಮಾಡಿದ್ದೇನೆ. ಸಿನಿಮಾ ಸುಂದರವಾಗಿ ಬಂದಿದೆ’ ಎಂದಿದ್ದಾರೆ.

ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾ ಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next