Advertisement
ಜಪಾನ್ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರಿಂದು “ಭಾರತ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಅತ್ಯದ್ಬುತ ಪ್ರಗತಿಯನ್ನು ಸಾಧಿಸಿದೆ’ ಎಂದು ಹೇಳಿದರು
Related Articles
Advertisement
ಭಾರತದಲ್ಲಿನ ಇಂಟರ್‌ನೆಟ್ ಸೇವಾ ರಂಗ 2022ರೊಳಗ್ಗೆ 76.4 ಬಿಲಿಯ ಡಾಲರ್ ತಲುಪಲಿದ್ದು ಆ ಮೂಲಕ ಶೇ.44ರ ಪ್ರಗತಿಯನ್ನು ದಾಖಲಿಸಲಿದೆ; ಪ್ರಕೃತ ಇದು 33.8 ಬಿಲಿಯ ಡಾಲರ್ ಇದೆ ಎಂದು ಭಾರತದ ಇಂಟರ್‌ನೆಟ್ ಮತ್ತು ಮೊಬೈಲ್ ಅಸೋಸಿಯೇಶನ್ ವರದಿ ತಿಳಿಸಿದೆ.
“ಭಾರತ ಇಂದು ಡಿಜಿಟಲ್ ಮೂಲ ಸೌಕರ್ಯದಲ್ಲಿ ಅತ್ಯಪಾರ ಪ್ರಗತಿಯನ್ನು ಕಾಣುತ್ತಿದೆ. ಬ್ರಾಡ್ ಬ್ಯಾಂಡ್ ಸಂಪರ್ಕ ಇಂದು ದೇಶದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳನ್ನು ತಲುಪುತ್ತಿದೆ; ಪ್ರಕೃತ ಭಾರತದಲ್ಲಿ ನೂರು ಕೋಟಿಗೂ ಅಧಿಕ ಮೊಬೈಲ್ ಫೋನ್‌ಗಳು ಕ್ರಿಯಾಶೀಲವಾಗಿವೆ’ ಎಂದು ಪ್ರಧಾನಿ ಭಾರತೀಯ ಬಾಹುಳ್ಯವನ್ನು ಉದ್ದೇಶಿಸಿ ಹೇಳಿದರು.