Advertisement

1.30 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ

03:11 PM Sep 02, 2022 | Team Udayavani |

ಆಳಂದ: ತಾಲೂಕಿನ ಗಡಿಯಲ್ಲಿರುವ ಖಜೂರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು. ಈ ದ್ವಿಪಥ ರಸ್ತೆ ಕಾಮಗಾರಿಗೆ 2021-22ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ 1.30ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಖಜೂರಿ ಗ್ರಾಮದಿಂದ ಕ್ರಾಸ್‌ ವರೆಗಿನ ಮುಖ್ಯ ರಸ್ತೆ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಖಜೂರಿ ಗ್ರಾಮಕ್ಕೆ ಈ ಅವ ಧಿಯಲ್ಲಿ ಸುಮಾರು 10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಗ್ರಾಮದಲ್ಲಿ ಶಾಲಾ ಕೋಣೆಗಳ ನಿರ್ಮಾಣ, ಜಲಜೀವನ ಮಿಷನ್‌ ಕಾಮಗಾರಿ, ಆಸ್ಪತ್ರೆ ಕಾಂಪೌಂಡ್‌ ನಿರ್ಮಾಣ, ಸಂಪರ್ಕ ರಸ್ತೆಗಳು, ಸಿಸಿ ರಸ್ತೆಗಳು, ಗ್ರಂಥಾಲಯ ಕಟ್ಟಡ, ಪೈಪಲೈನ್‌ ಕಾಮಗಾರಿ, ಘನ ತ್ಯಾಜ್ಯ ವಿಲೇವಾರಿ ಘಟಕ, ಆಸ್ಪತ್ರೆಯಲ್ಲಿ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ, ಶವ ಪರೀಕ್ಷಾ ಕೊಠಡಿ ಕಾಮಗಾರಿ, ತಡೋಳಾ ರಸ್ತೆ, ಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಖಜೂರಿ ಗ್ರಾಮಕ್ಕೆ ನನ್ನ ಶಾಸಕತ್ವದ ಅವ ಧಿಯಲ್ಲಿ ಅತೀ ಹೆಚ್ಚು ಅನುದಾನ ನೀಡಿದ್ದೇನೆ. ಈ ಹಿಂದೆ ಗ್ರಾಮವನ್ನು ಸುವರ್ಣ ಗ್ರಾಮವನ್ನಾಗಿ ಆಯ್ಕೆ ಮಾಡಿ ಗ್ರಾಮದ ಪ್ರತಿ ಮೂಲೆಯಲ್ಲೂ ಕಾಮಗಾರಿ ಮಾಡಿಸಿದ್ದೇನೆ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷ ಮಂಜುನಾಥ ಬಂಗರಗೆ, ತಾ.ಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ಬಿಜೆಪಿ ಜಿಲ್ಲಾ ಗ್ರಾಮಾಂತ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಶಿವಲಿಂಗಪ್ಪ ಬಂಗರಗೆ, ತಡಕಲ್‌ ಗ್ರಾಪಂ ಮಾಜಿ ಅಧ್ಯಕ್ಷ ಶಿವಪುತ್ರ ಬೆಳ್ಳೆ, ಶ್ರೀಮಂತ ನಾಮಣೆ, ಸಿದ್ದರಾಮ ಬನಶೆಟ್ಟಿ, ಮಹಿಬೂಬ್‌ ಶೇಖ್‌, ಅಶೋಕ ಹೊಸಮನೆ, ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷ ಉದಯಕುಮಾರ ಕಂದಗೂಳೆ, ಸಂಗಯ್ಯ ಮಠಪತಿ, ಗಾಂಧಿ  ಘಂಟೆ, ರಾಜಶೇಖರ ಗುರುಬಸಗೊಳ, ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಕುಮಾರ ಬಂಡೆ, ಪ್ರತಾಪ ವಾಡೆ, ತಿಪ್ಪಣ್ಣ ಬಂಡೆ, ಶರಣಪ್ಪ ಹೊಸಮನೆ, ಆಳಂದ ಗ್ರಾಪಂ ಮಾಜಿ ಅಧ್ಯಕ್ಷ ಪ್ರಫುಲ್‌ ಬಾಬಳಸುರೆ, ಶಿವಪ್ಪ ಘಂಟೆ, ಶಿವಪ್ರಕಾಶ ಹೀರಾ, ಜಿಪಂ ಕಿರಿಯ ಅಭಿಯಂತರ ಸಂದೀಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next