Advertisement

Waqf ತಿದ್ದುಪಡಿ ಕುರಿತ ಜೆಪಿಸಿಗೆ 1.2 ಕೋಟಿ ಪ್ರತಿಕ್ರಿಯೆಗಳು

01:10 AM Sep 24, 2024 | Team Udayavani |

ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆ 2024ರ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ಪರ ವಿರೋಧ ಅಭಿಪ್ರಾಯಗಳುಳ್ಳ 1.2 ಕೋಟಿ ಪ್ರತಿಕ್ರಿಯೆಗಳು ಇಮೇಲ್‌ ಮೂಲಕ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಎಲ್ಲ ಇಮೇಲ್‌ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ, ಮಸೂದೆಯ ಪರ ಮತ್ತು ವಿರುದ್ಧ ಅಭಿಪ್ರಾಯ ಹೊತ್ತ ಇಮೇಲ್‌ಗ‌ಳನ್ನು ವರ್ಗೀಕರಿಸಿ ಸಂಬಂಧಿತ ದಾಖಲೆಗಳನ್ನು ವ್ಯವಸ್ಥಿತವಾಗಿ ಶೇಖರಿಸಲು ಲೋಕಸಭಾ ಸಚಿವಾಲಯವು 15 ಹೆಚ್ಚುವರಿ ಸಿಬಂದಿಯನ್ನು ಜೆಪಿಸಿಗೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next