Advertisement

ಕಾಫಿ ಉದ್ಯಮದಿಂದ 1.12ಲಕ ಕೋಟಿ ತೆರಿಗೆ

04:25 PM May 08, 2022 | Team Udayavani |

ಸಕಲೇಶಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲಾಗುವುದು ಎಂದು ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಜ್ವಲ್‌ ರೇವಣ್ಣ ಭರವಸೆ ನೀಡಿದರು.

Advertisement

ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃ ತ್ವದ ಕಾಫಿಟೆಕ್‌ ಎಕ್ಸ್‌ಫೋ 3ನೇ ದಿನ ಶನಿವಾರ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಒಟ್ಟು 715 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಕಾಫಿ ಉದ್ಯಮದಿಂದ ಸರ್ಕಾರಕ್ಕೆ 1.12 ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹವಾಗುತ್ತಿದೆ. ಇಷ್ಟೊಂದು ತೆರಿಗೆ ಕಟ್ಟುವ ಬೆಳೆಗಾರರು ತಮ್ಮ ಸಮಸ್ಯೆ ಈಡೇರಿಕೆಗಾಗಿ ಮನವಿ ಮಾಡಬೇಕಿಲ್ಲ, ಬದಲಾಗಿ ಆಗ್ರಹಿಸಬೇಕು ಎಂದರು.

ಬಡ್ಡಿ ರಹಿತ ಸಾಲಕ್ಕೆ ಮನವಿ: ಲೋಕಸಭೆಯ ಪತ್ರಿಯೊಂದು ಅಧಿವೇಶನದಲ್ಲೂ ಕಾ ಕಾಫಿ ಬೆಳೆಗಾರರ ಸಮಸ್ಯೆ ವಿವರಿಸುವ ಪ್ರಯತ್ನ ನಾನು ಮಾಡಿದ್ದೇನೆ. ಆದರೆ, ನನ್ನ ಪ್ರಯತ್ನ ಯಶಸ್ವಿಯಾಗಿಲ್ಲ. ಕೇಂದ್ರ ವಾಣಿಜ್ಯ ಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ್ದು ಕಾಫಿ ಬೆಳೆಗಾರರಿಗೆ ಐದು ಸಾವಿರ ಕೋಟಿ ಮೀಸಲಿಟ್ಟು ಏಳು ವರ್ಷದವರಗೆ ಬಡ್ಡಿ ರಹಿತ ಸಾಲ ನೀಡುವಂತೆ ಮನವಿ ಮಾಡಿದ್ದೆನೆ. ಆದರೆ, ಕೇಂದ್ರ ಸರ್ಕಾರ ನನ್ನ ಮನವಿಗೆ ಸ್ಪಂದಿಸಿಲ್ಲ. ಆದ್ದರಿಂದ, ಮುಂದಿನ ಬಾರಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕಾಫಿ ಬೆಳೆಗಾರರ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಅಕ್ರಮ ಸಾಗುವಳಿಗೆ ಗುತ್ತಿಗೆ ತ್ವರಿತಗೊಳಿಸಿ: ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಒತ್ತುವರಿ ಭೂಮಿ ಯನ್ನು ಗುತ್ತಿಗೆ ಆಧಾರದ ಲ್ಲಿ ಸಾಗುವಳಿದಾರರಿಗೆ ನೀಡುವ ಬಿಜೆಪಿ ಸರ್ಕಾರದ ಭರವಸೆ ಕಾರ್ಯಗತಗೊಳಿಸದಿದ್ದರೆ ಕಾಫಿ ಬೆಳೆಗಾರರು ತಿರುಗಿ ಬೀಳುವುದರಲ್ಲಿ ಯಾವುದೆ ಅನುಮಾನವಿಲ್ಲ. ಒತ್ತುವರಿ ಭೂಮಿ ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದರು.

3 ಜಿಲ್ಲೆಯಲ್ಲಿ ಒಂದು ಕೋಟಿಗೂ ಹೆಚ್ಚು ಕಾರ್ಮಿಕರು: ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಒಂದು ಕೋಟಿಗೂ ಅಧಿಕ ಕಾರ್ಮಿಕರಿಗೆ ಕೆಲಸ ದೊರೆತಿದೆ. ಆದ್ದರಿಂದ, ಕಾಫಿ ಬೆಳೆ ಕೃಷಿ ಕೈಗಾರಿಕೆ ಎಂದು ಘೋಷಿಸಿ. ಆ ಮೂಲಕ ಕೈಗಾರಿಕೆಗಳಿಗೆ ದೊರಕುವ ಸಕಲ ಸೌಕರ್ಯ ಕಾಫಿ ಬೆಳೆಗಾರರಿಗೆ ನೀಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

Advertisement

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿ ಸಿ ದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ಪ, ಬಾಳ್ಳುಜಗನ್ನಾಥ್‌, ಎಚ್‌ಡಿಪಿಎ ಅಧ್ಯಕ್ಷ ಸುಬ್ರ ಮಣ್ಯ, ಜೆಡಿಎಸ್‌ ಮುಖಂಡ ಬಿ.ಎ.ಜಗನ್ನಾಥ್‌, ಶೈಲಪ್ರಕಾಶ್‌, ಮದನಪುರ ರಾಜೀವ್‌ ಮುಂತಾ ದವರಿ ದ್ದರು.

Advertisement

Udayavani is now on Telegram. Click here to join our channel and stay updated with the latest news.

Next