Advertisement

ಹಿಪ್ಪರಗಿ ಜಲಾಶಯದಿಂದ 0.3 ಟಿಎಂಸಿ ನೀರು ಹೊರಕ್ಕೆ

05:12 PM May 02, 2020 | Suhan S |

ಬನಹಟ್ಟಿ: ಹಿಪ್ಪರಗಿ ಜಲಾಶಯದಿಂದ ಜಮಖಂಡಿ ಹಾಗೂ ಅಥಣಿ ಸುತ್ತಲಿನ ಗ್ರಾಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕಪಡಸಲಗಿ ಬ್ಯಾರೇಜ್‌ವರೆಗೆ ಶುಕ್ರವಾರ ಬೆಳಗ್ಗೆ 0.3 ಟಿಎಂಸಿ ನೀರನ್ನು ಬಿಡುಗಡೆಗೊಳಿಸಲಾಗಿದೆ.

Advertisement

ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ತೇರದಾಳ ಶಾಸಕ ಸಿದ್ದು ಸವದಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಹಿಪ್ಪರಗಿ ಜಲಾಶಯದ ಅಧಿ ಕಾರಿಗಳ ಸಮ್ಮುಖದಲ್ಲಿ ನೀರು ಬಿಡುಗಡೆಗೊಳಿಸಿದರು.

0.95 ಮೀ.ನಷ್ಟು ಎತ್ತರದ ನೀರು ಹೊರಹಾಕುವಲ್ಲಿ ಕಾರಣವಾಗಲಿದ್ದು, 21 ಗಂಟೆಗಳವರೆಗೆ ಪ್ರತಿ ಗಂಟೆಗೆ ಮೂರು ಸಾವಿರ ಕ್ಯೂಸೆಕ್‌ನಂತೆ ಗೇಟ್‌ ನಂ.12ರಿಂದ ನೀರನ್ನು ಬಿಡಲಾಗುತ್ತಿದೆ. ಹಿಪ್ಪರಗಿಯಲ್ಲಿ 2.65 ಟಿಎಂಸಿ ನೀರಿನ ಪ್ರಮಾಣವಿದ್ದು, ಅದರಲ್ಲಿ 0.3 ಟಿಎಂಸಿ ನೀರು ಬಿಡುಗಡೆಗೊಳಿಸಿದೆ. 2.35 ಟಿಎಂಸಿ ನೀರು ಉಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next