Advertisement

ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ

05:35 PM Feb 10, 2021 | Team Udayavani |

ಬೀದರ: ನಗರದ ಗುರುನಾನಕ ಪಬ್ಲಿಕ್‌ ಶಾಲೆಯಲ್ಲಿ ಪಾಲಕರನ್ನು ಗೌರವಿಸಿ, ಸಂಸ್ಕೃತಿಯನ್ನು ಉಳಿಸಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯ ಪಾದಗಳನ್ನು ತೊಳೆದು, ಪುಷ್ಪವನ್ನು ಅರ್ಪಿಸಿ ನಮಿಸಿದರು.

Advertisement

ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್‌ ಅಧ್ಯಕ್ಷತೆ ವಹಿಸಿ, ಮಕ್ಕಳು ಮೊಬೈಲ್‌ ನೊಂದಿಗೆ ಹೆಚ್ಚಿನ ನಂಟು ಹೊಂದಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮಕ್ಕಳು ಸನ್ಮಾರ್ಗದಲ್ಲಿ ಸಾಗಿಸುವ ಕರ್ತವ್ಯ ಪಾಲಕರ ಮತ್ತು ಶಿಕ್ಷಕರ ಮೇಲಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳನ್ನು ಬಾಲ್ಯದಲ್ಲಿಯೇ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು. ಒಬ್ಬ ಒಳ್ಳೆಯ ನಾಗರಿಕನಾಗಲು ಬೇಕಾದ ಗುಣಗಳನ್ನು ಬೆಳೆಸಬೇಕು. ಮನೆ ಮತ್ತು ಶಾಲೆ ಎರಡರಲ್ಲೂ ಉತ್ತಮ ವಾತಾವರಣ ನಿರ್ಮಿಸಬೇಕು. ದಿನನಿತ್ಯ ಪಾಲಕರಿಗೆ ವಂದಿಸಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಕರೆ ಕೊಟ್ಟರು.

ಇದನ್ನೂ ಓದಿ :ಲೇಬರ್‌ ಸರ್ಕಲ್‌ ಅಭಿವೃದ್ಧಿಗೆ ಹೈಟೆಕ್‌ ಪ್ಲ್ಯಾನ್‌

ಪಾಲಕರ ಪ್ರತಿನಿಧಿ ಮಾತನಾಡಿ, ಮಕ್ಕಳನ್ನು ಒಳ್ಳೆಯ ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಶಾಲೆಗಳು ಪ್ರಮುಖ ಪಾತ್ರವಹಿಸುತ್ತಿವೆ. ಇಂತಹ ಸಂಸ್ಕೃತಿ ಕೇವಲ ನಮ್ಮ ದೇಶದಲ್ಲಿಯೇ ಇದೆ ಮತ್ತು ಮಕ್ಕಳ ಭವಿಷ್ಯತ್ತಿನ ಅಡಿಪಾಯ ಈ ಶಾಲೆಯಲ್ಲಿ ಗಟ್ಟಿಯಾಗಿ ಮೂಡುತ್ತಿದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಡಾ| ಎಸ್‌. ಬಲಬೀರಸಿಂಗ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next