Advertisement

ಮನುಷ್ಯನ ಹೃದಯದ ಜಾಗಕ್ಕೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದವ ನಿಧನ

09:45 PM Mar 09, 2022 | Team Udayavani |

ವಾಷಿಂಗ್ಟನ್‌ : ಮನುಷ್ಯನ ಹೃದಯದ ಜಾಗಕ್ಕೆ ಹಂದಿಯ ಹೃದಯವನ್ನು ಕಸಿ ಮಾಡಿಸಿಕೊಂಡಿದ್ದ ಅಮೆರಿಕದ ಮೇರಿಲ್ಯಾಂಡ್‌ನ‌ ವ್ಯಕ್ತಿ ಮಂಗಳವಾರ ಸಾವನ್ನಪ್ಪಿದ್ದಾರೆ. ಜ.7ರಂದು ಆಪರೇಷನ್‌ ಮಾಡಿಸಿಕೊಂಡಿದ್ದ 57 ವರ್ಷದ ಡೇವಿಡ್‌ ಬೆನಟ್‌ 2 ತಿಂಗಳ ಕಾಲ ಹಂದಿಯ ಹೃದಯದ ಸಹಾಯದಿಂದಲೇ ಉಸಿರಾಟ ನಡೆಸಿದ್ದಾರೆ.

Advertisement

ಆಪರೇಷನ್‌ ಮಾಡಿರುವ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರವು ಡೇವಿಡ್‌ ಅವರ ಸಾವಿಗೆ ನಿಖರ ಕಾರಣವನ್ನು ಕೊಟ್ಟಿಲ್ಲ. ಹಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದಾಗಿ ತಿಳಿಸಿದೆ.

ಮನುಷ್ಯನ ಹೊರೆತು ಬೇರೆ ಪ್ರಾಣಿಯ ಹೃದಯದ ಸಹಾಯದಿಂದ ಹೆಚ್ಚು ದಿನಗಳ ಕಾಲ ಬದುಕಿದ ವ್ಯಕ್ತಿ ಎನ್ನುವ ಖ್ಯಾತಿಗೆ ಡೇವಿಡ್‌ ಭಾಜೀನರಾಗಿದ್ದಾರೆ. ಈ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಬಾಲಕಿಯೊಬ್ಬಳು ಮಂಗದ ಹೃದಯ ಕಸಿ ಮಾಡಿಸಿಕೊಂಡು 21 ದಿನ ಬದುಕಿದ್ದಳು.

ಇದನ್ನೂ ಓದಿ :ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಲ್ಟಿಯಾದ ವಾಹನ : 15 ಮಂದಿಗೆ ಗಂಭೀರ ಗಾಯ

Advertisement

Udayavani is now on Telegram. Click here to join our channel and stay updated with the latest news.

Next