Advertisement

ಮಂಗಳೂರು/ಉಡುಪಿ : ಇಂದಿನಿಂದ ಎಲ್ಲೆಡೆ ದೀಪಾವಳಿ ಸಂಭ್ರಮ

10:07 AM Oct 24, 2022 | Team Udayavani |

ಮಂಗಳೂರು/ಉಡುಪಿ: ದೀಪಗಳ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲು ಕರಾವಳಿಯಲ್ಲೆಡೆ ಸಕಲ ತಯಾರಿ ನಡೆಸಲಾಗಿದೆ.

Advertisement

ನರಕಚತುರ್ದಶಿಯ ಅಭ್ಯಂಜನ ದೊಂದಿಗೆ ಆರಂಭಗೊಳ್ಳುವ ದೀಪಾವಳಿ ಸಂಭ್ರಮ ಮೂರು ದಿನಗಳ ಕಾಲ ಆಚರಿಸಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ.

ಮನೆ-ಮನೆಗಳಲ್ಲಿ ವಿವಿಧ ಬಣ್ಣ-ವಿನ್ಯಾಸಗಳ ಗೂಡುದೀಪಗಳು ಶೋಭಿಸುತ್ತಿವೆ. ಮನೆಯ ಆವರಣದಲ್ಲಿ ಹಣತೆಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸಲಾಗುತ್ತದೆ. ಜತೆಗೆ ಪಟಾಕಿ ಸಿಡಿಸಿ ದೀಪಾವಳಿಗೆ ಹೊಸ ಮೆರುಗು ದೊರೆಯಲಿದೆ. ಬಂಧು-ಬಳಗದವರು ಸಿಹಿತಿಂಡಿ ವಿತರಿಸಿ ಶುಭಾಶಯ ಕೋರಲಾಗುತ್ತಿದೆ.

ತುಳುನಾಡಿನಲ್ಲಿ ದೀಪಾವಳಿಯನ್ನು ವೈಶಿಷ್ಟÂಪೂರ್ಣವಾಗಿ ಆಚರಿಸಲಾಗುತ್ತಿದೆ. ಗೋ ಪೂಜೆ, ಲಕ್ಷ್ಮೀ ಪೂಜೆ ಸಹಿತ ವಿವಿಧ ಆಚರಣೆಗಳು ನಡೆಯಲಿದೆ. ಅಂಗಡಿ, ಕಟ್ಟಡ, ಮನೆಗಳಿಗೂ ದೀಪಾಲಂಕಾರ ಮಾಡಲಾಗಿದೆ. ಹೊಸ ಉಡುಗೆಗಳನ್ನು ತೊಟ್ಟು ದೀಪಾವಳಿ ಸಡಗರದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿವಿಧ ಅಂಗಡಿಗಳಲ್ಲಿ ಹೂ ಹಣ್ಣು, ಗೂಡುದೀಪ, ಪಟಾಕಿ ಖರೀದಿ ಜೋರಾಗಿತ್ತು.

Advertisement

ಗರಿಗೆದರಿದ ಸಂಭ್ರಮ
ಉಡುಪಿ: ಜಿಲ್ಲೆಯ ವಿವಿಧೆಡೆ ದೀಪಾವಳಿ ಸಂಭ್ರಮ ಗರಿಗೆದರಿದೆ. ವಿವಿಧ ಕೊಡುಗೆಗಳ ಮೂಲಕ ಮಾಲ್‌, ಮಳಿಗೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಪಟಾಕಿ ಅಂಗಡಿಗಳು ಅಲ್ಲಲ್ಲಿ ತಲೆಎತ್ತಿವೆ.

ಅ.23ರಿಂದ ಅಧಿಕೃತವಾಗಿ ದೀಪಾವಳಿ ಆಚರಣೆಗಳು ನಡೆಯಲಿವೆ. ವಾರಾಂತ್ಯದ ರಜೆಯ ಜತೆಗೆ ಹಬ್ಬದ ರಜೆ ಸೇರಿಕೊಂಡಿರುವುದರಿಂದ ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚಿದೆ.

ಕಳೆದ ಎರಡು ವರ್ಷ ಕೊರೊನಾದಿಂದ ದೀಪಾವಳಿ ಸಂಭ್ರಮಕ್ಕೂ ಧಕ್ಕೆಯಾಗಿತ್ತು. ಈ ಬಾರಿ ಯಾವುದೇ ನಿರ್ಬಂಧ ಇಲ್ಲದೇ ಇರುವುದರಿಂದ ಹಬ್ಬದ ಆಚರಣೆ ಜೋರಾಗಿಯೇ ನಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next