Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

08:54 PM Jan 13, 2021 | Adarsha |

ಭದ್ರಾವತಿ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯವರು ಮಿನಿ ವಿಧಾನ ಸೌಧದ ಮುಂದೆ ಸೋಮವಾರ ಪ್ರತಿಭಟನಾ ಧರಣಿ ಸತ್ಯಾಗ್ರಹ ಆರಂಭಿಸಿದರು.

Advertisement

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ಎನ್‌. ರಾಜು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಭವನದ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ 5.50 ಕೋಟಿ ಹಣವನ್ನು ಮುಖ್ಯಮಂತ್ರಿಗಳು ಶೀಘ್ರವಾಗಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಂಡು ಭವನವನ್ನು ಮುಖ್ಯಮಂತ್ರಿ ಯಡಿಯುರಪ್ಪನವರೇ ಉದ್ಘಾಟಿಸಬೇಕು. ಹೊಳೆಹೊನ್ನೂರಿನ ಕಲ್ಲಾಪುರ ಗ್ರಾಮ, ರಂಗಾಪುರ ಗ್ರಾಮಗಳಲ್ಲಿ ನವೆಂಬರ್‌ 1ರಲ್ಲಿನ 74 ಎಕರೆ 14 ಗುಂಟೆ ಕಂದಾಯ ಜಮೀನನ್ನು ಸಾಗುವಳಿ ಮಾಡಿದ ಕಾರಣಕ್ಕೆ ಜೈಲಿಗೆ ಹೋದ 24 ಕುಟುಂಬಗಳಿಗೆ ಆ ಜಮೀನನ್ನು ರಾಜ್ಯ ಸರ್ಕಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಪ್ರತಿಭಟನೆಯಲ್ಲಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಕರ್‌ ,ಬ್ರಹ್ಮಲಿಂಗಯ್ಯ, ಸುಬ್ಬೇಗೌಡ ಹಾಗೂ ರೈತಸಂಘದ ಮುಖಂಡರಾದ ಯಶವಂತರಾವ್‌ ಘೋರ್ಪಡೆ,ವೀರೇಶ್‌, ಕರವೇ ಅಧ್ಯಕ್ಷ ಗಿರೀಶ್‌  ಲತಾ, ಗಂಗಾಧರ, ಲಕ್ಷಿ¾àಕಾಂತ, ಹನುಮಮ್ಮ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next