Advertisement

ಗಣ್ಯರಿಂದ ಮಾರ್ಕಂಡೇಯ ಶ್ರೀ ಅಂತಿಮ ದರ್ಶನ

02:42 PM Nov 07, 2021 | Team Udayavani |

ಹಿರಿಯೂರು: ತಾಲೂಕಿನ ಕೋಡಿಹಳ್ಳಿಆದಿಜಾಂಬವ ಮಾದಿಗ ಮಠದ ಶ್ರೀಮಾರ್ಕಂಡೇಯ ಮುನಿದೇಶಿ ಕೇಂದ್ರ ಸ್ವಾಮೀಜಿಅವರ ಅಂತ್ಯಕ್ರಿಯೆ ಶನಿವಾರ ಧಾರ್ಮಿಕವಿ ಧಿವಿಧಾನಗಳೊಂದಿಗೆ ಮಠದ ಆವರಣದಲ್ಲಿ ನೆರವೇರಿತು.

Advertisement

ಗುರುವಾರ ಸಂಜೆ ಶ್ರೀ ಗಳ ಆರೋಗ್ಯದಲ್ಲಿಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆಕರೆದೊಯ್ಯುವ ಮಾರ್ಗ ಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

ಶುಕ್ರವಾರಮಠದ ಆವರಣದಲ್ಲಿ ಶ್ರೀಗಳ ಪಾರ್ಥಿವ ಶರೀರದಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಮಠದ ಕಿರಿಯ ಶ್ರೀ ಷಡಕ್ಷರ ಮುನಿದೇಶಿಕೇಂದ್ರ ಸ್ವಾಮೀಜಿ, ಡಾ| ಬಸವಮೂರ್ತಿಮಾದಾರ ಚೆನ್ನಯ್ಯ ಸ್ವಾಮೀಜಿ, ಡಾ| ಶಿವಮೂರ್ತಿಮುರುಘಾ ಶ್ರೀ, ಡಾ|ಸಿದ್ದರಾಜು ಸ್ವಾಮೀಜಿ, ಬಸವಹರಳಯ್ಯ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮೀಜಿ,ಸಚಿವ ಗೋವಿಂದ ಕಾರಜೋಳ, ಶಾಸಕರಾದಕೆ.ಪೂರ್ಣಿಮಾ, ಟಿ.ರಘುಮೂರ್ತಿ, ಜಿ.ಎಚ್‌.ತಿಪ್ಪಾರೆಡ್ಡಿ, ಮಾಜಿ ಸಚಿವ ಡಿ.ಸುಧಾಕರ್‌, ಎಚ್‌.ಆಂಜನೇಯ, ಮಾಜಿ ಶಾಸಕರಾದ ರಾಜೇಶ್‌,ಬಿ.ಜಿ.ಗೋವಿಂದಪ್ಪ, ತಿಮ್ಮರಾಯಪ್ಪ, ಜೆಡಿಎಸ್‌ಜಿಲ್ಲಾಧ್ಯಕ್ಷ ಡಿ.ಯಶೋಧರ್‌, ಗೊಲ್ಲ ಸಂಘದರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್‌, ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌, ನರಸಿಯಪ್ಪ, ಜಿಪಂ.ಮಾಜಿ ಸದಸ್ಯರಾದ ಗೀತಾ, ಜಗದೀಶ್‌, ಬಿಜೆಪಿಮಂಡಲ ಅಧ್ಯಕ್ಷ ವಿಶ್ವನಾಥ್‌, ಕಾಂಗ್ರೆಸ್‌ ಮುಖಂಡಜಿ.ಎಸ್‌.ಮಂಜುನಾಥ್‌ ಹಾಗೂ ಮಠಾ ಧೀಶರು,ನೂರಾರು ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳಅಂತಿಮ ದರ್ಶನ ಪಡೆದರು. ಶ್ರೀಗಳ ಅಂತ್ಯಕ್ರಿಯೆವಿ ಧಿವಿಧಾನಗಳೊಂದಿಗೆ ಗುರು ಸ್ವಾಮಿಯವರುನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next