Advertisement

ಕೋವಿಡ್‌ ಲಸಿಕೆ ಕಡ್ಡಾಯ ಪಡೆಯಿರಿ

03:27 PM Nov 05, 2021 | Adarsha |

ಭದ್ರಾವತಿ: ಕೊರೊನಾ ಸೋಂಕುಸಂಪೂರ್ಣ ನಿರ್ಮೂಲನೆಯಾಗಬೇಕಾದರೆ ಪ್ರತಿಯೊಬ್ಬರೂ ಕೋವಿಡ್‌ಲಸಿಕೆಯನ್ನು ಕಡ್ಡಾಯವಾಗಿಹಾಕಿಸಿಕೊಳ್ಳಬೇಕು ಎಂದು ಜಿಪಂಸಿಇಒ ಎಂ.ಎಲ್‌. ವೈಶಾಲಿ ಹೇಳಿದರು.ತಾಲೂಕಿನ ದೊಣಬಘಟ್ಟಗ್ರಾಮದಲ್ಲಿ ಆಜಾದಿ ಕಾ ಅಮೃತ್‌ಮಹೋತ್ಸವದ ಅಂಗವಾಗಿ ಜಿಪಂ, ಸ್ವತ್ಛ ಭಾರತ್‌ ಮಿಷನ್‌,ಯೂನಿಸೆಫ್‌ ಹಾಗೂ ಆರೋಗ್ಯನಿರ್ವಹಣಾ ಮತ್ತು ಸಂಶೋಧನಾಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ್ದಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದ ಅವರು, ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಮೊದಲನೇಡೋಸ್‌ ಹಾಕಲಾಗಿದೆ.

Advertisement

ಆದರೆ ಕೆಲವುಕಾರಣಗಳಿಂದ ಎರಡನೇ ಡೋಸ್‌ಎಲ್ಲರಿಗೂ ಹಾಕಲಾಗಿಲ್ಲ. ಗ್ರಾಮಾಂತರಪ್ರದೇಶದ ಜನರು ಕಡ್ಡಾಯವಾಗಿಎರಡನೇ ಡೋಸ್‌ ಹಾಕಿಸಿಕೊಳ್ಳಬೇಕುಹಾಗೂ ಮುಂಜಾಗ್ರಯಾಗಿಮಾಸ್ಕ್ ಧರಿಸಿ ಸಾಮಾಜಿಕ ಅಂತರಕಾಯ್ದುಕೊಳ್ಳಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದ ಶಾಸಕ ಬಿ.ಕೆ.ಸಂಗಮೇಶ್ವರ್‌, ಗ್ರಾಪಂ ಆಡಳಿತಸರ್ಕಾರಿ ಯೋಜನೆಗಳನ್ನು ಜನರಿಗೆತಲುಪಿಸುವಲ್ಲಿ ಪ್ರಾಮಾಣಿಕಪ್ರಯತ್ನ ಮಾಡಿ ಗುರಿ ಸಾಧಿ ಸಬೇಕು ಎಂದರು.

ತಾಪಂ ಇಒ ರಮೇಶ್‌,ದೊಣಬಘಟ್ಟ ಗ್ರಾಪಂ ಅಧ್ಯಕ್ಷಖಲೀಲ್‌ ಸಾಬ್‌ ಮಾತನಾಡಿದರು.ತಾಲೂಕು ಆರೋಗ್ಯಾ ಧಿಕಾರಿಡಾ| ಅಶೋಕ್‌, ಗ್ರಾಪಂ ಉಪಾಧ್ಯಕ್ಷೆಹಾಲಮ್ಮ, ಕಾರ್ಯದರ್ಶಿ ಗೌರಮ್ಮ,ಅಭಿವೃದ್ಧಿ ಅಧಿ ಕಾರಿ ರಾಜಪ್ಪ,ಯುನಿಸೆಫ್‌ ಮುಖ್ಯಸ್ಥೆ ಸವಮಿನಿ,ಕರ್ನಾಟಕ ಕನಸ್ಟ್ರಕ್ಷನ್‌ ವರ್ಕರ್ಸ್‌ಸೆಂಟ್ರಲ್‌ ಯೂನಿಯನ್‌ ಜಿಲ್ಲಾದ್ಯಕ್ಷಸುಂದರ್‌ಬಾಬು, ತಾಲೂಕುಅಧ್ಯಕ್ಷ ಚಂದ್ರಶೇಖರ್‌, ತಾಂತ್ರಿಕಸಲಹೆಗಾರ ಮನೋಹರ್‌, ತಾಲೂಕುಕಾರ್ಯಾಧ್ಯಕ್ಷ ಅಭಿಲಾಷ್‌ ಇತರರುಇದ್ದರು. ವೇದಿಕೆ ಕಾರ್ಯಕ್ರಮಕ್ಕೂಮುನ್ನ ಜಾಮಿಯಾ ಮಸೀದಿಯಿಂದಸರ್ಕಾರಿ ಪಪೂ ಕಾಲೇಜುಆವರಣದವರೆಗೆ ಜಾಗೃತಿ ಜಾಥಾನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next