ದಾವಣಗೆರೆ: ಬೆಂಗಳೂರಿನಿಂದ ದೆಹಲಿಯವರೆಗೂಹಾನಗಲ್ಲ ಉಪಚುನಾವಣೆಯ ಸೋಲಿನ ಕಹಿಬಿಜೆಪಿಯವರನ್ನು ಕಾಡುತ್ತಿದೆ. ಹೀಗಾಗಿ ಅವರುಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಅವರು ಇದೇ ರೀತಿ ಕಾಂಗ್ರೆಸ್ ನಾಯಕರತೇಜೋವಧೆ ಮಾಡುವ ಹೇಳಿಕೆಗಳನ್ನು ನೀಡಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟನಡೆಸಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರಡಿ.ಬಸವರಾಜ್ ಎಚ್ಚರಿಕೆ ನೀಡಿದರು.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಹಾನಗಲ್ ಉಪಚುನಾವಣೆಯಲ್ಲಿನಸೋಲು ಸಹಿಸಿಕೊಳ್ಳಲಾಗದೆ ಬಿಜೆಪಿಯವರುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದಲಿತರವಿರುದ್ಧ ಎತ್ತಿಕಟ್ಟಿ ರಾಜ್ಯದ ಜನರ ಗಮನಬೇರೆಡೆ ಸೆಳೆಯಲು ಮುಂದಾಗಿದ್ದಾರೆ ಎಂದರು.
ಬೆಂಗಳೂರಿನ ವಿಧಾನಸೌಧಕ್ಕೆ ಬೀಗಜಡಿದು ಇಡೀ ಬಿಜೆಪಿ ಸರ್ಕಾರವೇ ಹಾನಗಲ್‌ಉಪಚುನಾವಣೆಯಲ್ಲಿ ಮುಳುಗಿತ್ತು. ಆದರೆ,ಹಾನಗಲ್ಲ ಮತದಾರರು ಬಿಜೆಪಿಗೆ ಸರಿಯಾದ ಪಾಠಕಲಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಆಗಿಲ್ಲ.ಇದಕ್ಕೆಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳೇ ಕಾರಣ ಎಂದರು.ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದಯಾವುದೇ ಮೂಲೆಯಲ್ಲಿ ಸ್ಪರ್ಧಿಸಿದರೂ ಅವರನ್ನುನಾವು ಸೋಲಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಕೇವಲ ಶಿವಮೊಗ್ಗಕ್ಷೇತ್ರಕ್ಕೆ ಸೀಮಿತವಾಗಿರುವ ಕೆ.ಎಸ್.ಈಶ್ವರಪ್ಪ, ನೈಜನಾಯಕನಾಗಿದ್ದರೆ ಶಿವಮೊಗ್ಗ ಬಿಟ್ಟು ರಾಜ್ಯದ ಬೇರೆಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದು ತೋರಿಸಲಿ ಎಂದುಬಸವರಾಜ್ ಸವಾಲು ಹಾಕಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಾಜಕುಮಾರ್‌ಮಾತನಾಡಿ, ಸಿದ್ದರಾಮ್ಯಯ್ಯ ಅವರು ತಮ್ಮಅವಧಿಯಲ್ಲಿ ದಲಿತ ಶಾಸಕರಿಗೆ ಮಂತ್ರಿ ಹೆಚ್ಚುಮಂತ್ರಿ ಸ್ಥಾನ ನೀಡಿದ್ದಾರೆ. ಅವರು ದಲಿತವಿರೋಧಿಯಾಗಿದ್ದರೆ ದಲಿತರಿ ಹೆಚ್ಚೆಚ್ಚು ಮಂತ್ರಿಗಿರಿನೀಡುತ್ತಿರಲಿಲ್ಲ.
ಬಿಜೆಪಿಯವರು ವಿನಾಕಾರಣಸಿದ್ದರಾಮಯ್ಯ ಅವರ ಮೇಲೆ ದಲಿತ ವಿರೋಧಿಎಂಬ ಭಾವನೆ ಮೂಡುವಂತೆ ಮಾಡುತ್ತಿದ್ದಾರೆ.ಬಿಜೆಪಿಗೆ ದಲಿತರ ಮೇಲೆ ನಿಜವಾಗಿಯೂ ಕಾಳಜಿಇದ್ದರೆ ಅವರು ದಲಿತರಿಗಾಗಿ ಏನೆಲ್ಲ ಸೌಲಭ್ಯನೀಡಿದ್ದಾರೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿಎಂದು ಆಗ್ರಹಿಸಿದರು.ಮಹಾನಗರ ಪಾಲಿಕೆ ಹಿರಿಯಸದಸ್ಯ ಕೆ. ಚಮನಸಾಬ್ ಮಾತನಾಡಿ, ಸಿದ್ದರಾಮಯ್ಯಅವರು ದಲಿತರಿಗೆ ನೀಡಿದಷ್ಟು ಸೌಲಭ್ಯವನ್ನು ಬೇರೆಯಾರೂ ನೀಡಿಲ್ಲ.
ಅವರು ಗುತ್ತಿಗೆಯಲ್ಲಿ ದಲಿತರಿಗೆಮೀಸಲಾತಿ, ಸರ್ಕಾರದ ಅನುದಾನದಲ್ಲಿ 24.5ರಷ್ಟುಮೀಸಲಾತಿ ನೀಡಿದ್ದಾರೆ. ಈ ಕುರಿತು ಕಾನೂನು ಸಹಮಾಡಿದ್ದಾರೆ. ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿಇದ್ದರೆ ತಮ್ಮ ಸರ್ಕಾರವಿರುವ ರಾಜ್ಯಗಳಲ್ಲಿ ಇಂಥಕಾನೂನು ಜಾರಿಗೆ ತರಲಿ ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಇನ್ನೋರ್ವ ಸದಸ್ಯಗಡಿಗುಡಾಳ್ ಮಂಜುನಾಥ್ ಮಾತನಾಡಿ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತೇಜೋವಧೆ ಮಾಡಲು ಬಿಜೆಪಿ ಅವರ ವಿರುದ್ಧಇಲ್ಲಸಲ್ಲದ ಆರೋಪ ಮಾಡುತ್ತಿದೆ. ಬಿಜೆಪಿಯುದಲಿತರ ವಿಚಾರದಲ್ಲಿ ಕೇವಲ ಆಶ್ವಾಸನೆ ನೀಡುತ್ತಬಂದಿದೆಯೇ ಹೊರತು ಯಾವುದೇ ಸೌಲಭ್ಯನೀಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಜಿಲ್ಲಾಘಟಕದ ಪ್ರಮುಖರಾದ ಎಲ್.ಎಂ.ಎಚ್.ಸಾಗರ್,ಮಹಮ್ಮದ್ ಜಿಕ್ರಿಯಾ, ಆರ್.ಬಿ.ಜೆಡ್. ಬಾಷಾಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.