Advertisement
“ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಒಬ್ಬರಿಗೆ ರಾಷ್ಟ್ರೀಯ ಧ್ವಜ ಹಿಡಿದು ಉದ್ಘಾಟನಾ ಕಾರ್ಯಕ್ರಮದಲ್ಲಿ ತಂಡವನ್ನು ಮುನ್ನಡೆಸುವ ಗೌರವ ಸಿಗಬಹುದು. ಇದನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಈ ರೀತಿ ಒಂದು ಯೋಚನೆಯಂತೂ ಇದೆ. ಲಿಂಗ ತಾರತಮ್ಯವನ್ನು ಪರಿಹರಿಸಲು ಇದೊಂದು ಸೂಕ್ತ ನಡೆ ಎಂಬ ಚಿಂತನೆ ನಮ್ಮದು’ ಎಂದು ಬಾತ್ರಾ ತಿಳಿಸಿದ್ದಾರೆ.
ಜುಲೈ 23ರಂದು ಟೋಕಿಯೊದಲ್ಲಿ ಆರಂಭವಾಗುವ ಈ ಒಲಿಂಪಿಕ್ಸ್ ಕೂಟದಲ್ಲಿ 100ಕ್ಕೂ ಅಧಿಕ ಆ್ಯತ್ಲೀಟ್‌ಗಳು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಧ್ವಜ ಗೌರವ ಯಾರಿಗೆ ಸಿಗಲಿದೆ ಎಂಬುದೊಂದು ಕುತೂಹಲ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ತಾರೆ ಅಭಿನವ್ ಬಿಂದ್ರಾ ಧ್ವಜಧಾರಿಯಾಗಿದ್ದರು.