ಕೋಹಳ್ಳಿ: ಗ್ರಾಮದ ದ್ರಾಕ್ಷಿ ಬೆಳೆಗಾರ ಸಂಗಪ್ಪ ದುರ್ಗಪ್ಪ ಡಂಬಳಿ ಎಂಬುವರ ತೋಟದಲ್ಲಿನ ಸುಮಾರು 750 ದ್ರಾಕ್ಷಿ ಗಿಡಗಳು ತಾವಾಗಿಯೇ ದಿನದಿಂದ ದಿನಕ್ಕೆ ಒಣಗುತ್ತಿವೆ. ಈ ಸಮಸ್ಯೆ ಕುರಿತು ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಬುಧವಾರ ತೋಟಗಾರಿಕೆ ಇಲಾಖೆಯ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ ಮತ್ತು ಮಹಾವೀರ ಕಾಗವಾಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ತೋಟಗಾರಿಕೆ ಇಲಾಖೆ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ ಮಾತನಾಡಿ, ದ್ರಾಕ್ಷಿ ಬೆಳೆಗೆ ನೀರು, ಮಣ್ಣು, ಔಷಧಗಳ ಸಮಸ್ಯೆಯಾದರೇ ತಕ್ಷಣ ಬೇರೆ ಉಪಾಯ ಮಾಡಬಹುದು, ಆದರೆ ಯಾವ ರೋಗ ಬಂದಿದೆ ಎಂಬುದು ಕಾಣದ ಹಾಗೆ ಗಿಡಗಳು ದಿನದಿಂದ ದಿನಕ್ಕೆ ತುದಿಯಿಂದ ತಳದವರೆ ತಾವಾಗಿಯೇ ಒಣಗುತ್ತಿದೆ. ಇಲಾಖೆಗೆ ಇದು ಒಂದು ಹೊಸ ಸಮಸ್ಯೆಯಾಗಿದೆ.
ಇದನ್ನೂ ಓದಿ;ಪಶ್ಚಿಮಬಂಗಾಳ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸುಕುಮಾರ್ ವಿಧಿವಶ
ಸಂಶೋಧನೆಯಿಂದ ಮಾತ್ರ ಇದಕ್ಕೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿದೆ. ಸಂಶೋಧನೆಗೆ ಬಾಗಲಕೋಟೆ ಜಿಲ್ಲೆಯ ವಿಶ್ವವಿದ್ಯಾಲಯವನ್ನು ಸಂಪರ್ಕಿಸಲಾಗುವುದು ಎಂದರು. ಸಮಸ್ಯೆಗೆ ಪರಿಹಾರ ದೊರಕುವವರೆಗೆ ಗಿಡ ಕಡಿಯದಂತೆ ಅವರು ರೈತರನ್ನು ಕೋರಿದರು. ದ್ರಾಕ್ಷಿ ಬೆಳೆಗೆ ಸೂಕ್ತ ಪರಿಹಾರ ಮತ್ತು ವಿಮಾ ಹಣ ಬರಲಿದೆ. ಇದರ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ
ನೀಡಲಾಗುವುದು ಎಂದು ತಿಳಿಸಿದರು.