ಹೊಸದಿಲ್ಲಿ: ಝೈಡಸ್ ಕ್ಯಾಡಿಲಾ ಕಂಪೆನಿಯು ತನ್ನ ಕೊರೊನಾ ಲಸಿಕೆಯ ದರವನ್ನು ಡೋಸ್‌ಗೆ 265 ರೂ.ಗೆ ಇಳಿಸಲು ಕೊನೆಗೂ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರದೊಂದಿಗೆ ಈ ಕುರಿತು ಮಾತುಕತೆ ಮುಂದುವರಿದಿದ್ದು, ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಈ ಕಂಪೆನಿಯ ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಈಗಾಗಲೇ ಭಾರತದ ಔಷಧ ಮಹಾನಿರ್ದೇಶನಾಲಯ ಅನುಮತಿ ನೀಡಿದೆ.
ಆದರೆ ಇದು ಸೂಜಿರಹಿತ ಲಸಿಕೆಯಾಗಿದ್ದು, ಅದನ್ನು ಜೆಟ್ ಅಪ್ಲಿಕೇಟರ್ ಮೂಲಕ ನೀಡಲಾಗುತ್ತದೆ.
ಇದನ್ನೂ ಓದಿ:ಜಮ್ಮು- ಕಾಶ್ಮೀರ: 3 ವಾರದಲ್ಲಿ 25 ಶಂಕಿತರ ಬಂಧನ: ಎನ್‌ಐಎ
ಈ ಅಪ್ಲಿಕೇಟರ್‌ಗೆ ತಲಾ 93 ರೂ. ವೆಚ್ಚವಾಗುವ ಕಾರಣ, ಒಂದು ಡೋಸ್ ಲಸಿಕೆಗೆ ಒಟ್ಟಾರೆ 358 ರೂ. ನಿಗದಿಪಡಿಸುವುದಾಗಿ ಕಂಪೆನಿ ಹೇಳಿದೆ ಎಂದೂ ಮೂಲಗಳು ತಿಳಿಸಿವೆ.