Advertisement

ಪಣಜಿ: ಜುವಾರಿ ಸೇತುವೆಯ ಕಾಮಗಾರಿ ಪೂರ್ಣ, ಅಧಿಕಾರಿಗಳಿಂದ ಸೇತುವೆಯ ಭಾರ ಪರೀಕ್ಷೆ

04:22 PM Dec 01, 2022 | Team Udayavani |

ಪಣಜಿ: ರಾಜ್ಯದ ಮಹತ್ವಾಕಾಂಕ್ಷೆಯ ಜುವಾರಿ ಸೇತುವೆಯ ಒಂದು ಬದಿಯ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ಸೇತುವೆಯನ್ನು ಶೀಘ್ರದಲ್ಲಿಯೇ ಸಂಚಾರಕ್ಕೆ ಮುಕ್ತಗೊಳಿಸಲು ಸೇತುವೆಯ ಮೇಲೆ ಭಾರದ ಪರೀಕ್ಷೆಯನ್ನು ಬುಧವಾರ ನಡೆಸಲಾಯಿತು, ಇದನ್ನು ರಾಜ್ಯ ಲೋಕೋಪಯೋಗಿ ಸಚಿವ ನೀಲೇಶ್ ಕಬ್ರಾಲ್ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ನೀಲೇಶ್ ಕಬ್ರಾಲ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸಂಚಾರಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಲೋಡ್ ಪರೀಕ್ಷೆ ಬುಧವಾರ ಮಧ್ಯಾಹ್ನದಿಂದ 24 ಗಂಟೆಗಳ ಕಾಲ ಈ ಕೇಬಲ್ ಸೇತುವೆಯ ಮೇಲೆ 32 ಟನ್ ತೂಕದ ಒಂದು ಟ್ರಕ್ ಸೇರಿದಂತೆ ಸತತವಾಗಿ 4 ಟ್ರಕ್‍ಗಳನ್ನು ಇರಿಸಲಾಗುತ್ತದೆ.

ಪರಿಶೀಲನೆಯ ಸಂದರ್ಭದಲ್ಲಿ, ಲೋಕೋಪಯೋಗಿ ಸಚಿವ ನಿಲೇಶ್ ಕ್ಯಾಬ್ರಾಲ್ ಮಾಹಿತಿ ನೀಡಿ- ಅಸ್ತಿತ್ವದಲ್ಲಿರುವ ಹಳೆಯ ಜುವಾರಿ ಸೇತುವೆಯನ್ನು ಉತ್ತರ ಗೋವಾದಿಂದ ದಕ್ಷಿಣ ಗೋವಾಕ್ಕೆ ಸಂಚಾರಕ್ಕೆ ಸಂಪೂರ್ಣವಾಗಿ ಸಮರ್ಪಿಸಲಾಗುವುದು ಮತ್ತು ಹೊಸ ಜುವಾರಿ ಸೇತುವೆಯನ್ನು ಭಾರೀ ವಾಹನಗಳಿಲ್ಲದೆ ದಕ್ಷಿಣ ಗೋವಾದಿಂದ ಉತ್ತರ ಗೋವಾಕ್ಕೆ ಸಂಚಾರಕ್ಕೆ ಬಳಸಲಾಗುವುದು ಎಂದು ಹೇಳಿದರು.

ಪ್ರಧಾನ ಟ್ರಾಫಿಕ್ ಜಂಕ್ಷನ್‍ಗಳಲ್ಲಿ ಹೈಟೆಕ್ ಟ್ರಾಫಿಕ್ ದ್ವೀಪಗಳನ್ನು ಸ್ಥಾಪಿಸಲು ಪ್ರಸ್ತಾಪಿಸುವ ಫೈಲ್‍ಗೆ ಸಹಿ ಹಾಕಲಾಗುವುದು ಎಂದು ಕ್ಯಾಬ್ರಾಲ್ ಹೇಳಿದರು. ಸಂಚಾರ ಮತ್ತು ನಿಯಮ  ಉಲ್ಲಂಘಿಸುವವರನ್ನು ನಿಯಂತ್ರಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುವುದು. ಜುವಾರಿ ಸೇತುವೆಯನ್ನು ದಕ್ಷಿಣ ಗೋವಾದಲ್ಲಿ ಸಂಚಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 17ರಲ್ಲಿರುವ ಜುವಾರಿ ಸೇತುವೆ ದುರ್ಬಲಗೊಂಡು ಅಪಾಯಕಾರಿಯಾಗಿದ್ದರಿಂದ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ.  ಡಿಸೆಂಬರ್ 11 ರಂದು ಗೋವಾಕ್ಕೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸೇತುವೆಯನ್ನು ಉದ್ಘಾಟಿಸುವ ನಿರೀಕ್ಷೆಯಿದೆ. ನಂತರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಚಿವ ನೀಲೇಶ್ ಕಾಬ್ರಾಲ್ ಮಾಹಿತಿ ನೀಡಿದರು.

ಇದನ್ನೂ ಓದಿ: ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಶಿಬಿರ; ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ  

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next