Advertisement

Panaji: ಅಕ್ರಮ ಮನೆಗಳ ತೆರವು…. ಸೂರು ಕಳೆದುಕೊಂಡ ಕನ್ನಡಿಗರ ಕುಟುಂಬ, ಪುನರ್ವಸತಿಯ ಭರವಸೆ

02:59 PM Apr 15, 2024 | Team Udayavani |

ಪಣಜಿ: ಉತ್ತರ ಗೋವಾ ಕೋಮುನಿದಾದ್ ಆಡಳಿತಾಧಿಕಾರಿಗಳು ಹೈಕೋರ್ಟ್ ನಿರ್ದೇಶನದಂತೆ ಸಾಂಗೋಲ್ಡಾದ ಕೋಮುನಿದಾದ್ ಜಮೀನಿನಲ್ಲಿ ಎಲ್ಲಾ 22 ಅಕ್ರಮ ಮನೆಗಳನ್ನು ನೆಲಸಮಗೊಳಿಸಿ ಎರಡು ದಿನ ಕಳೆದಿದೆ. ಮೊದಲ ದಿನ 15 ಮನೆಗಳನ್ನು ನೆಲಸಮಗೊಳಿಸಿದೆ ಅಧಿಕಾರಿಗಳು, ಎರಡನೇ ದಿನವಾದ ಶನಿವಾರ ಉಳಿದ ಏಳು ಮನೆಗಳನ್ನು ಜೆಸಿಬಿ ಸಹಾಯದಿಂದ ತೆರವುಗೋಲಿಸಲಾಗಿದೆ. ಇಲ್ಲಿ ಹಲವು ಕನ್ನಡಿಗರ ಮನೆಗಳಿದ್ದು, ಈ ಕನ್ನಡಿಗರು ಮತ್ತೆ ನಿರಾಶ್ರಿತರಾಗಿದ್ದಾರೆ.

Advertisement

ಹಂತ ಹಂತವಾಗಿ ಮನೆಗಳ ತೆರವು…
ಗೋವಾ ಸರ್ಕಾರವು ಗೋವಾದ ವಾಸ್ವೋ ಬೈನಾ ಬೀಚ್ ಪರಿಸರದಲ್ಲಿ 2004 ರಿಂದ ಹಂತ ಹಂತವಾಗಿ 2012 ರ ವರೆಗೆ ಸಾವಿರಾರು ಕನ್ನಡಿಗರ ಮನೆಗಳನ್ನು ತೆರವುಗೊಳಿಸಿತ್ತು. ಈ ಕನ್ನಡಿಗರಿಗೆ ಇದುವರೆಗೂ ಯಾವುದೇ ಶಾಶ್ವತ ಪುನರ್ವಸತಿ ಕಲ್ಪಿಸಿಲ್ಲ. ಕರ್ನಾಟಕ ಸರ್ಕಾರ ಕೂಡ ಈ ನಿರಾಶ್ರಿತರಿಗೆ ಕೇವಲ ಭರವಸೆ ನೀಡಿತ್ತೇ ಹೊರತು ಇದುವರೆಗೂ ಯಾವುದೇ ಪುನರ್ವಸತಿ ಕಲ್ಪಿಸಿಕೊಡದುರುವುದು ಖೇದಕರ ಸಂಗತಿ. ಇದೀಗ ಮತ್ತೆ ಹತ್ತಾರು ಕನ್ನಡಿಗರ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿವೆ.

ಸ್ಥಳೀಯ ಶಾಸಕ ಕೇದಾರ್ ನಾಯ್ಕ್ ಶನಿವಾರ ಮಧ್ಯಾಹ್ನ ಇಲ್ಲಿ ನಿರಾಶ್ರಿತರನ್ನು ಭೇಟಿ ಮಾಡಿದರು. ಸಾಂಗೊಲ್ಡಾದ ಸರ್ವೆ ನಂ.81/1ರಲ್ಲಿನ ಈ 22 ಮನೆಗಳನ್ನು ಕೆಡವಲು ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶದ ನಂತರ, ಅಪರ ಜಿಲ್ಲಾಧಿಕಾರಿಗಳು ಈ ನಿರ್ಮಾಣಗಳನ್ನು ತೆಗೆದುಹಾಕಲು ಆದೇಶಿಸಿದ್ದರು.

ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಬೆಳಗ್ಗೆ 9.30ಕ್ಕೆ ಪೊಲೀಸ್ ತಂಡ ಹಾಗೂ ಅತಿಕ್ರಮಣ ತೆರವು ತಂಡ ಸ್ಥಳಕ್ಕೆ ಆಗಮಿಸಿತು. ಉಳಿದ ಏಳು ಮನೆಗಳನ್ನು ಸಹ ಕಾರ್ಮಿಕರು ಮತ್ತು ಜೆಸಿಬಿ ಸಹಾಯದಿಂದ ಕೆಡವಲಾಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಕಾಮಗಾರಿ ಪೂರ್ಣಗೊಂಡಿತು. ಪೊಲೀಸರ ಸಮ್ಮುಖದಲ್ಲಿ ಧ್ವಂಸ ಪ್ರಕ್ರಿಯೆ ನಡೆಸಲಾಯಿತು.

ಮುಖ್ಯಮಂತ್ರಿ ಭೇಟಿ; ಆದರೆ ಸ್ಪಷ್ಟ ಭರವಸೆಯಿಲ್ಲ…
ನಿರಾಶ್ರಿತರನ್ನು ಭೇಟಿಯಾದ ನಂತರ ಶಾಸಕ ಕೇದಾರ್ ನಾಯ್ಕ್ ರವರಿಗೆ ಮನೆ ಕಳೆದುಕೊಂಡ ನಿರಾಶ್ರಿತರು ಇದುವರೆಗೂ ಸರಕಾರದ ಪ್ರತಿನಿಧಿಯಾಗಲಿ ಬಂದಿಲ್ಲ ಎಂದು ಬೇಸರ ಹೊರಹಾಕಿದರು. ಹೈಕೋರ್ಟ್ ಸೂಚನೆಯಂತೆ ಮನೆಗಳನ್ನು ಕೆಡವಲು ತೀರ್ಮಾನಿಸಲಾಗಿದೆ ಎಂದು ಕೇದಾರ್ ನಾಯ್ಕ್ ಹೇಳಿದ್ದಾರೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ನಿಮ್ಮ ಶಾಶ್ವತ ಪುನರ್ವಸತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ ಎಂದರು.

Advertisement

ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಲಭ್ಯವಿರುವ ಆಯ್ಕೆಗಳ ಬಗ್ಗೆ ಚರ್ಚಿಸುತ್ತೇವೆ. ಅದರಂತೆ ನಿಮ್ಮ ಐವರು ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಐವರು ಸದಸ್ಯರನ್ನು ಮುಖ್ಯಮಂತ್ರಿ ಬಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಶಾಸಕರು ಭರವಸೆ ನೀಡಿದರು. ಅದರಂತೆ ಸಂಜೆ ಮುಖ್ಯಮಂತ್ರಿ ಜತೆ ಸಭೆ ನಡೆಸಲಾಯಿತಾದರೂ, ಆದಾಗ್ಯೂ, ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ನಿರಾಶ್ರಿತ ಕುಟುಂಬಗಳಿಗೆ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next