Advertisement

ಫೇಸ್‌ಬುಕ್‌ ಜುಕರ್‌ಬರ್ಗ್‌ ರಾಜಕೀಯ ಪ್ರವೇಶ?

03:45 AM Jan 05, 2017 | Team Udayavani |

ವಾಷಿಂಗ್ಟನ್‌: ವಿಶ್ವದ ಜನಪ್ರಿಯ ಆನ್‌ಲೈನ್‌ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ? 2017ರಲ್ಲಿ ತಾವು ಸಾಗಲಿರುವ ಹಾದಿಯ ಕುರಿತು ಅವರು ನೀಡಿರುವ ಚಿತ್ರಣ ಇಂಥದ್ದೊಂದು ಚರ್ಚೆಗೆ ಕಾರಣವಾಗಿದೆ. 2016ರಲ್ಲಿ ಮ್ಯಾಂಡರೀನ್‌ ಭಾಷೆ ಕಲಿತೆ, 25 ಪುಸ್ತಕಗಳನ್ನು ಓದಿದೆ, ಸಣ್ಣ ಮನೆಯೊಂದನ್ನು ಕಟ್ಟಿಕೊಂಡಿದ್ದೇನೆ. ಆದರೆ 2017ರಲ್ಲಿ ಅಮೆರಿಕದ ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸುವ ಆಸೆ ನನ್ನದು. ಈ ಸಂವಾದದ ವೇಳೆ ಜನ ಹೇಗೆ ಬದುಕುತ್ತಿದ್ದಾರೆ, ಹೇಗೆ ಕೆಲಸ ಮಾಡುತ್ತಿದ್ದಾರೆ, ಭವಿಷ್ಯದ ಬಗ್ಗೆ ಅವರ ಕಲ್ಪನೆಗಳು ಏನಿದೆ ಎಂಬುದನ್ನೆಲ್ಲಾ ತಿಳಿಯುವ ಆಸೆ ನನ್ನದು ಎಂದು ಜುಕರ್‌ಬರ್ಗ್‌ ಹೇಳಿದ್ದಾರೆ. ಇದು ಅವರ ರಾಜಕೀಯ ಪ್ರವೇಶದ ಮುನ್ಸೂಚನೆ ಇದ್ದರೂ ಇರಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next