Advertisement

ಜಿಪಂ ಚುನಾವಣೆಯಲ್ಲಿ ಬಿಜೆಪಿ ಮತ ಗಳಿಕೆ ಹೆಚ್ಚಳ

04:03 PM Feb 28, 2017 | Team Udayavani |

ಸೊಲ್ಲಾಪುರ: ಕಳೆದ 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊರೆತಿದ್ದ ಮತಗಳಕ್ಕಿಂತಲೂ ಈಗಿನ ಜಿಪಂ ಚುನಾವಣೆಯಲ್ಲಿ ಬಿಜೆಪಿಗೆ ದೊರೆತಿರುವ ಮತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ ತಿಳಿಸಿದರು. ಅಕ್ಕಲಕೋಟದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

Advertisement

ಕಳೆದ ಜಿಪಂ ಚುನಾವಣೆಯಲ್ಲಿ ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಕೂಡ ಬಿಜೆಪಿಯ ಒಬ್ಬ ಅಭ್ಯರ್ಥಿಯೂ ಆಯ್ಕೆಯಾಗಿರಲಿಲ್ಲ. ಆದರೆ ಈ ಬಾರಿ ಅಕ್ಕಲಕೋಟ ವಿಧಾನಸಭಾ ಮತಕೇತ್ರದಲ್ಲಿ ಮೂವರು ಅಭ್ಯರ್ಥಿಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಕಳೆದ ಚುನಾವಣೆಯಲ್ಲಿ ಐವರು ತಾಪಂ ಸದಸ್ಯರು ಆಯ್ಕೆಯಾಗಿದ್ದರು.

ಆದರೆ ಈ ಬಾರಿ ನಡೆದ ಚುನಾವಣೆಯಲ್ಲಿ ಆರು ಸದಸ್ಯರನ್ನು ಆಯ್ಕೆ ಮಾಡಿ ಮುನ್ನಡೆ ಸಾಧಿಸಿದ್ದೇವೆ ಎಂದು ತಿಳಿಸಿದರು. ಅಕ್ಕಲಕೋಟ ತಾಪಂ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ ಇನ್ನೂ ಮೂವರು ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಕುರನೂರ ತಾಪಂ ಅಭ್ಯರ್ಥಿ ಕೇವಲ 82 ಮತಗಳಿಂದ ಪರಾಭವಗೊಂಡಿದ್ದಾರೆ.

ಅಲ್ಲದೆ ಕಾಂಗ್ರೆಸ್‌ ಹಿಡಿತದಲ್ಲಿದ್ದ ಸಲಗರ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ವಲ್ಪ ಮತಗಳಿಂದ ಪರಾಭವಗೊಂಡಿದ್ದಾರೆ. ಮುಗಳಿ ತಾಪಂ ಬಿಜೆಪಿ ಅಭ್ಯರ್ಥಿ ಬರೀ 59 ಮತಗಳಿಂದ ಪರಾಭವಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯವಿರುವ ತೋಳನೂರ ಭಾಗದಲ್ಲಿ ಬಿಜೆಪಿಯ  ತಾಪಂ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಆ ಭಾಗದಲ್ಲೂ ಈಗ ಬಿಜೆಪಿ ಬೇರು ವ್ಯಾಪಿಸಿದೆ.

ನಾಗಣಸೂರ ಜಿಪಂ ಬಿಜೆಪಿ ಅಭ್ಯರ್ಥಿ ಬರೀ 288 ಮತಗಳಿಂದ ಸೋಲು ಅನುಭವಿಸಿದ್ದಾರೆ ಎಂದು ತಿಳಿಸಿದರು. ಕಳೆದ ಜಿಪಂ ಚುನಾವಣೆಯಲ್ಲಿ ಸಿದ್ರಾಮಪ್ಪ ಪಾಟೀಲ ಅವರು ಬಿಜೆಪಿಯ ಶಾಸಕರಾಗಿದ್ದರೂ ಮಂಗರೂಳ ಜಿಪಂ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಸಿದ್ರಾಮಪ್ಪ ಪಾಟೀಲ ಹಾಗೂ ಕಾಂಗ್ರೆಸ್‌ ಶಾಸಕ ಸಿದ್ದರಾಮ ಅವರು ಒಂದಾಗಿ ಚುನಾವಣೆ ಎದುರಿಸಿದ್ದರೂ ಈ ಭಾಗದ ಮತದಾರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.

Advertisement

ಅಕ್ಕಲಕೋಟ ತಾಲೂಕಿನಲ್ಲಿ ಬಿಜೆಪಿ ಪರಾಭವಗೊಳಿಸುವ ಸಲುವಾಗಿ ಪಾಟೀಲ ಹಾಗೂ  ಒಂದಾಗಿ ಜಿಪಂ ಚುನಾವಣೆ ಎದುರಿಸಿದ್ದರು. ಸಿದ್ರಾಮಪ್ಪ ಪಾಟೀಲ ಅವರು ಬಿಜೆಪಿಯಿಂದ ಶಾಸಕರಾಗಿದ್ದನ್ನು ಮರೆತಿದ್ದಾರೆ. ಪಾಟೀಲ ಅವರು ಬಿಜೆಪಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಶಹರ ಅಧ್ಯಕ್ಷ ಯಶವಂತ ಧೋಂಗಡೆ, ನಗರಸೇವಕ ಮಹೇಶ ಹಿಂಡೋಳೆ, ವಾಗರಿ ಜಿಪಂ ಸದಸ್ಯ ಆನಂದ ತಾನವಾಡೆ, ರಾಜಶೇಖರ ಮಸೂತಿ, ಮೋತಿಲಾಲ ರಾಠೊಡ, ಶಿವಲಾಲ ರಾಠೊಡ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next