Advertisement
“ವೈಟ್ ವಿಮೆನ್: ಆನ್ಸರ್ ದ ಕಾಲ್’ ಎಂಬ ಝೂಮ್ ಕರೆಗೆ ಓಗೊಟ್ಟ 1.64 ಲಕ್ಷ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಇದು ಝೂಮ್‌ನಲ್ಲಿನ ದಾಖಲೆಯ ಕರೆಯಾಗಿದ್ದು, ಒಂದು ಹಂತದಲ್ಲಿ ಝೂಮ್ ಸಿಸ್ಟಮ್ ಕ್ರ್ಯಾಷ್ ಆಗಿದೆ. 90 ನಿಮಿಷದಲ್ಲೇ 20 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿದೆ.ಪ್ರಭಾವಿಗಳ ಬೆಂಬಲ: ಪಾಪ್ ಸ್ಟಾರ್ ಪಿಂಕ್, ನಟಿ ಕಾನಿ ಬ್ರಿಟನ್ ಸೇರಿದಂತೆ ಹಲವು ಪ್ರಭಾವಿ ಮಹಿಳೆಯರು ಭಾಗಿಯಾಗಿ ಕಮಲಾ ಹ್ಯಾರಿಸ್ ಪರ ಪ್ರಚಾರ ಮಾಡಿದರು.
ಕಮಲಾ ಯಹೂದಿಗಳ ವಿರೋಧಿ ಯಾಗಿದ್ದು ನವಜಾತ ಶಿಶುಗಳ ಮಾರಣ ಹೋಮಕ್ಕೆ ಯೋಜಿಸಿ ದ್ದಾರೆ ಎಂದು ಟ್ರಂಪ್ ಆರೋಪಿಸಿ ದ್ದಾರೆ. ಕಮಲಾ ಯಹೂದಿ ವ್ಯಕ್ತಿಯನ್ನು ಮದುವೆಯಾಗಿದ್ದು, ಟ್ರಂಪ್ ಅವರ ಆರೋಪ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.