Advertisement

‘ಝೂ: ಕೇರ್ ಆಫ್ ‘ಡಿ’ಬಾಸ್’ : ಇದು ದರ್ಶನ್ ಅಭಿಮಾನಿಯ ಅಭಿಮಾನದ ಕಥೆ

03:43 PM Jul 25, 2021 | Team Udayavani |

‘ಝೂ: ಕೇರ್ ಆಫ್ ‘ಡಿ’ ಬಾಸ್’ ಚಿತ್ರದ ಮೋಷನ್ ಫಿಕ್ಚರ್ ಇಂದು ಬಿಡುಗಡೆಯಾಗಿದ್ದು, ಸಿನಿ ಪ್ರೇಮಿಗಳ ಅದರಲ್ಲೂ ದಚ್ಚು ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ.

Advertisement

‘ಝೂ’ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿಯಿಂದ ಪ್ರೇರಪಿತನಾದ ಅಭಿಮಾನಿಯ ಕಥೆ ಹೊಂದಿದೆ.  ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

ಗುರು ದೇಶಪಾಂಡೆ ಅವರ ಹುಟ್ಟುಹಬ್ಬದ ನಿಮಿತ್ತು ಈ ಚಿತ್ರ ಘೋಷಣೆಯಾಗಿದ್ದು, ಫಸ್ಟ್ ಲುಕ್ ಸಹ ರಿಲೀಸ್ ಮಾಡಲಾಗಿದೆ. ಈ ಚಿತ್ರಕ್ಕೆ ಕಥೆ ಕೂಡ ಗುರು ದೇಶಪಾಂಡೆ ಅವರೇ ಬರೆದಿದ್ದಾರೆ.

ಇನ್ನು ‘ಝೂ: ಕೇರ್ ಆಫ್ ‘ಡಿ’ ಬಾಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿಯೂ ದರ್ಶನ್ ಅವರ ಭಾವಚಿತ್ರ ನೋಡಬಹುದು. ಇದೊಂದು ಸ್ಫೂರ್ತಿದಾಯಕ ಕತೆಯಾಗಿದ್ದು, ಚಿತ್ರದಲ್ಲಿ ಬಾಲಕನೊಬ್ಬ ನಟ ದರ್ಶನ್ ಅವರ ಅಭಿಮಾನಿ.


ಇನ್ನುಳಿದಂತೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಅಭಿಲಾಷ್ ಕಲಾತಿ ಛಾಯಾಗ್ರಹಣ ಒಳಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next