Advertisement
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ ನಿಗದಿತ 20 ಓವರ್‌ನಲ್ಲಿ 173 ರನ್ ಬಾರಿಸಿತ್ತು. ತಂಡದ ಪರ ರಿಕ್ಕಿ ಭುಯಿ (50) ಅರ್ಧಶತಕ ದಾಖಲಿಸಿದರೆ, ವಿಜಯ್ ಶಂಕರ್ (34), ಮಾಯಾಂಕ್ ಅಗರ್ವಾಲ್ (32) ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ದೊಡ್ಡ ಮೊತ್ತವನ್ನು ಬೆನ್ನು ಹತ್ತಿದ ಉತ್ತರ ವಲಯಕ್ಕೆ ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 103 ರನ್ ಜೊತೆಯಾಟ ಆಡಿ ಭದ್ರ ಅಡಿಪಾಯ ಹಾಕಿದರು. ರಿಷಭ್ ಪಂತ್ ಕೂಡ ಅಜೇಯ 33 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ದಕ್ಷಿಣ ವಲಯ 20 ಓವರ್‌ಗಳಲ್ಲಿ 5 ವಿಕೆಟಿಗೆ 173 (ರಿಕ್ಕಿ ಭುಯಿ 50, ವಿಜಯ್ ಶಂಕರ್ 34, ದಂಗರ್ 31ಕ್ಕೆ 2), ಉತ್ತರ ವಲಯ 18.4 ಓವರ್‌ಗಳಲ್ಲಿ ಎರಡು ವಿಕೆಟಿಗೆ 176 (ಗಂಭೀರ್ 81, ಧವನ್ 50, ಎಂ.ಅಶ್ವಿನ್ 23ಕ್ಕೆ 1).