Advertisement

ಐಪಿಎಲ್‌ಗೆ ಧೋನಿ ಮಗಳು ಜೀವಾ ಸಿದ್ಧತೆ!

10:45 AM Mar 18, 2017 | Team Udayavani |

ಹೊಸದಿಲ್ಲಿ: ಪ್ರತಿಷ್ಠಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ವಿವಿಧ ಫ್ರಾಂಚೈಸಿಗಳ ಆಟಗಾರರು ಸಿದ್ಧತೆ ನಡೆಸುತ್ತಿರುವುದು ಸಹಜ. ಆದರೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮಗಳು ಕೂಡ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾಳೆ ಎಂಬುದು ಅಚ್ಚರಿಯ ಸುದ್ದಿ!

Advertisement

ಧೋನಿ ಮಗಳು ಜೀವಾಗೆ ಈಗ 2 ವರ್ಷ 1 ತಿಂಗಳು. ಐಪಿಎಲ್‌ ಸಮಯದಲ್ಲಿ ಧೋನಿ ಜತೆ ಪತ್ನಿ ಸಾಕ್ಷಿ ಮತ್ತು ಮಗಳು ಜೀವಾ ಕೂಡ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ಜೀವಾಗೆ ಈಗಾಗಲೇ ದೇಶದ ವಿವಿಧ ನಗರಗಳ ಹೆಸರನ್ನು ಸಾಕ್ಷಿ ಹೇಳಿಸುತ್ತಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದರಲ್ಲಿ ಹೊಸದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರು, ಮುಂಬಯಿ ಮತ್ತು ಹೈದರಾಬಾದ್‌ ಹೆಸರನ್ನು ಜೀವಾ ಉಚ್ಚಾರ ಮಾಡಿದ್ದಾಳೆ. ಐಪಿಎಲ್‌ನಲ್ಲಿ ಧೋನಿ ತಂಡವನ್ನು ಬೆಂಬಲಿಸಲು ಸಾಕ್ಷಿ ತನ್ನ ಮಗಳಿಗೆ ವಿವಿಧ ನಗರಗಳ ಹೆಸರನ್ನು ಹೇಳಿ ಕೊಡುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next