Advertisement

ವೃತ್ತಿಪರ ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್- ಜಿಂಬಾಬ್ವೆ ಆಟಗಾರ ಗ್ಯಾರಿ ಬ್ಯಾಲೆನ್ಸ್

01:19 PM Apr 20, 2023 | Team Udayavani |

ಹರಾರೆ: ಇಂಗ್ಲೆಂಡ್ ಮತ್ತು ಜಿಂಬಾಬ್ವೆ ಪರ ಆಡಿದ ಗ್ಯಾರಿ ಬ್ಯಾಲೆನ್ಸ್ ಅವರು ವೃತ್ತಿಪರ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

Advertisement

ಈ ಹಿಂದೆ ಒಮ್ಮೆ ನಿವೃತ್ತಿ ಘೋಷಣೆ ಮಾಡಿದ್ದ ಗ್ಯಾರಿ ಬ್ಯಾಲೆನ್ಸ್ ಅವರು ಕೇವಲ ನಾಲ್ಕು ತಿಂಗಳ ಹಿಂದೆ ನಿವೃತ್ತಿ ಹಿಂಪಡೆದು ಜಿಂಬಾಬ್ವರ ಆಡಲು ಬಂದಿದ್ದರು. 2022 ರ ಡಿಸೆಂಬರ್ ನಲ್ಲಿ ಜಿಂಬಾಬ್ವೆ ಕ್ರಿಕೆಟ್‌ ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು ಆದರೆ ಇದೀಗ ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿಯ ನಿರ್ಧಾರದಿಂದ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.

ಕಳೆದ ಫೆಬ್ರವರಿ ಯಲ್ಲಿ ಜಿಂಬಾಬ್ವೆ ಪರವಾಡಿದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಲೆನ್ಸ್ ಶತಕವನ್ನು ಗಳಿಸಿದರು. 33 ವರ್ಷದ ಮಾಜಿ ಯಾರ್ಕ್‌ಷೈರ್ ಆಟಗಾರ ಜಿಂಬಾಬ್ವೆ ಕ್ರಿಕೆಟ್‌ ಗೆ ಹೊಸ ಸಂತೋಷವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

“ದೀರ್ಘ ಆಲೋಚನೆಯ ನಂತರ, ನಾನು ತಕ್ಷಣದ ಪರಿಣಾಮದೊಂದಿಗೆ ಎಲ್ಲಾ ಪ್ರಕಾರದ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಮರಳಲು ನನಗೆ ಅವಕಾಶವನ್ನು ಒದಗಿಸಿದ ಜಿಂಬಾಬ್ವೆ ಕ್ರಿಕೆಟ್‌ ಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ” ಎಂದು ಗ್ಯಾರಿ ಬ್ಯಾಲೆನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಖ್ಯಾತ ನಿರ್ಮಾಪಕ ಯಶ್‌‌ ಚೋಪ್ರಾ ಪತ್ನಿ ಪಮೇಲಾ ಚೋಪ್ರಾ ನಿಧನ

Advertisement

ಜಿಂಬಾಬ್ವೆ ಮೂಲದ ಕ್ರಿಕೆಟಿಗ ಬ್ಯಾಲೆನ್ಸ್  2013ರಲ್ಲಿ ಇಂಗ್ಲೆಂಡ್‌ ಪರವಾಗಿ ಪದಾರ್ಪಣೆ ಮಾಡಿದರು. 2014 ರಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಕೇವಲ ಹತ್ತು ಪಂದ್ಯಗಳಲ್ಲಿ ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ 1000 ರನ್ ಗಳಿಸಿದ್ದರು. ವೇಗವಾಗಿ ಈ ಸಾಧನೆ ಮಾಡಿದ ಮೂರನೇ ಆಟಗಾರರಾಗಿದ್ದರು.

ಬ್ಯಾಲೆನ್ಸ್ ಕೊನೆಯ ಬಾರಿಗೆ 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ ತಂಡದಲ್ಲಿ ಕಾಣಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next