ವಾಷಿಂಗ್ಟನ್: ಪ್ರಸಿದ್ಧ ಆರ್ಥಿಕ ತಜ್ಞ ಸ್ಟೀವ್ ಹಾಂಕೆ ಅವರ ಸಂಸ್ಥೆ ಬಿಡುಗಡೆ ಮಾಡಿರುವ ವಾರ್ಷಿಕ ದಾರಿದ್ರ್ಯ ಸೂಚ್ಯಂಕ (ಎಚ್ ಎಎಂಐ) ಪಟ್ಟಿಯ ಪ್ರಕಾರ ವಿಶ್ವದಲ್ಲಿಯೇ ಜಿಂಬಾಬ್ವೆ ಅತೀ ದಾರಿದ್ರ್ಯ ದೇಶವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:T-20 mode : ಭಾರತ-ಆಸ್ಟ್ರೇಲಿಯಾ ಬಾಂಧವ್ಯದ ಕುರಿತು ಪ್ರಧಾನಿ ಮೋದಿ ಬಣ್ಣನೆ
ಜಗತ್ತಿನಾದ್ಯಂತ ಒಟ್ಟು 157 ದೇಶಗಳ ಆರ್ಥಿಕ ಸ್ಥಿತಿಗತಿಯ ವಿಶ್ಲೇಷಣೆ ನಡೆಸಿ Ranking ನೀಡಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ ಪಟ್ಟಿಯಲ್ಲಿ ಜಿಂಬಾಬ್ವೆ ಮೊದಲ ಸ್ಥಾನದಲ್ಲಿದ್ದು, ಸ್ವಿಟ್ಜರ್ ಲ್ಯಾಂಡ್ 157ನೇ ಸ್ಥಾನದಲ್ಲಿದೆ.
ಅತೀ ದರಿದ್ರ ದೇಶಗಳ ಟಾಪ್ 15ರಲ್ಲಿ ವೆನಿಜುವೆಲಾ, ಸಿರಿಯಾ, ಲೆಬನಾನ್, ಸುಡಾನ್, ಅರ್ಜೈಂಟೀನಾ, ಯೆಮೆನ್, ಉಕ್ರೈನ್, ಕ್ಯೂಬಾ, ಟರ್ಕಿ, ಶ್ರೀಲಂಕಾ, ಹೈಟಿ, ಅಂಗೋಲಾ, ಟೋಂಗಾ ಮತ್ತು ಘಾನಾ ಸೇರಿವೆ.
ಸಂತೋಷದ ದೇಶಗಳ ಪಟ್ಟಿಯಲ್ಲಿ ಫಿನ್ ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದು, ಕುವೈಟ್ ಎರಡನೇ ಸ್ಥಾನದಲ್ಲಿದೆ. ನಂತರದಲ್ಲಿ ಐರ್ಲೆಂಡ್, ಜಪಾನ್, ಮಲೇಷ್ಯಾ, ತೈವಾನ್, ನೈಗರ್, ಥಾಯ್ ಲ್ಯಾಂಡ್, ಟೋಗೋ ಮತ್ತು ಮಾಲ್ಟಾ ದೇಶಗಳು ಸೇರಿವೆ.
ಹಾಂಕೆ ಬಿಡುಗಡೆಗೊಳಿಸಿರುವ ಸೂಚ್ಯಂಕಗಳ ಪಟ್ಟಿಯ ಪ್ರಕಾರ, ಭಾರತ 103ನೇ ಸ್ಥಾನದಲ್ಲಿದೆ. ಇದಕ್ಕೆ ಮುಖ್ಯ ಕಾರಣ ನಿರುದ್ಯೋಗ ಎಂದು ತಿಳಿಸಿದೆ. ವಿಶ್ವದ ದೊಡ್ಡಣ್ಣ ಅಮೆರಿಕ 134ನೇ Rankನಲ್ಲಿದೆ. ಸತತ ಆರು ವರ್ಷಗಳಿಂದ ಫಿನ್ ಲ್ಯಾಂಡ್ ಜಗತ್ತಿನ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ದಾರಿದ್ರ್ಯ ಸೂಚ್ಯಂಕ ಪಟ್ಟಿಯಲ್ಲಿ 109 ಸ್ಥಾನದಲ್ಲಿದೆ.