Advertisement

ಜಿಪಂ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ

06:16 PM Apr 05, 2021 | Team Udayavani |

ಕೊಪ್ಪಳ: ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಜಿಪಂ ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದೆ.  ಈ ಬಾರಿ ಐದು ಹೊಸ ಜಿಪಂ ಕ್ಷೇತ್ರಗಳು ರಚನೆಯಾಗಿವೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಮೀಸಲಾತಿಯ ಕನವರಿಕೆ ಶುರುವಾಗಿದೆ.

Advertisement

ಯಾವ ಕ್ಷೇತ್ರಕ್ಕೆ ಯಾವ ಮೀಸಲು ಬರುತ್ತೋ ಎನ್ನುವ ಲೆಕ್ಕಾಚಾರ ಹಾಕುತ್ತಿದ್ದು,ರಾಜಕೀಯ ಪಕ್ಷಗಳಲ್ಲೂ ಈಗಾಗಲೇಚುನಾವಣೆ ತಯಾರಿ ನಡೆಸಿವೆ.ಈ ಮೊದಲು ಜಿಲ್ಲೆಯಲ್ಲಿ 29 ಜಿಪಂಕ್ಷೇತ್ರಗಳು ಇದ್ದವು. ಆದರೆ ಜಿಪಂ ಕ್ಷೇತ್ರಗಳ ಮರು ವಿಂಗಡಣೆಯ ವೇಳೆ 34ಕ್ಕೆ ಕ್ಷೇತ್ರಗಳಸಂಖ್ಯೆ ಏರಿಕೆ ಕಂಡಿದೆ. ಹಳೆ ಕ್ಷೇತ್ರಗಳುಸೇರಿದಂತೆ ಹೊಸ ಕ್ಷೇತ್ರದಲ್ಲಿ ಚುನಾವಣಾಕಾತುರವೂ ಹೆಚ್ಚಾಗಿದೆ. ಪ್ರಸ್ತುತ ಜಿಪಂ ಸದಸ್ಯರ ಅವಧಿ ಮುಗಿಯುತ್ತಾ ಬರುತ್ತಿದ್ದು,ರಾಜ್ಯ ಚುನಾವಣಾ ಆಯೋಗವು ಯಾವುದೇ ಸಂದರ್ಭದಲ್ಲಾದರೂ ಜಿಪಂ ಕ್ಷೇತ್ರಗಳ ಚುನಾವಣೆಯನ್ನು ಘೋಷಣೆಮಾಡುವ ಸಾಧ್ಯತೆಯಿದೆ. ಹಾಗಾಗಿ ಬಿಜೆಪಿ, ಕಾಂಗ್ರೆಸ್‌ ಸೇರಿ ಜೆಡಿಎಸ್‌ ಪಕ್ಷಗಳಲ್ಲಿಕ್ಷೇತ್ರಗಳ ಚುನಾವಣಾ ಲೆಕ್ಕಾಚಾರವೂ ಸದ್ದಿಲ್ಲದೇ ಆರಂಭವಾಗಿದೆ.

ಚುನಾವಣಾ ಆಯೋಗವು ಮೀಸಲಾತಿಯನ್ನು ಯಾವಾಗ ಪ್ರಕಟಿಸಲಿದೆಯೋ ಎಂದುಜಾತಕ ಪಕ್ಷಿಯಂತೆ ಆಕಾಂಕ್ಷಿತರುಕಾಯುತ್ತಿದ್ದಾರೆ. ಯಾವ ಕ್ಷೇತ್ರಕ್ಕೆ ಯಾವಮೀಸಲಾತಿ ಬರುತ್ತದೆ? ಹಿಂದೆ ಯಾವಮೀಸಲಾತಿ ಬಂದಿತ್ತು. ಈ ಬಾರಿ ನಿಯಮದಪ್ರಕಾರ ಯಾವ ಮೀಸಲಾತಿಯುಘೋಷಣೆಯಾಗಬಹುದು? ಇದಕ್ಕೆ ಪಕ್ಷದಿಂದ ಯಾರನ್ನು ಕಣಕ್ಕೆ ಇಳಿಸಬೇಕು.ಯಾರು ಸೂಕ್ತ ಅಭ್ಯರ್ಥಿ ಎನ್ನುವ ಲೆಕ್ಕಾಚಾರಗಳು ರಾಜಕೀಯ ಪಕ್ಷಗಳಲ್ಲಿ ಸದ್ದಿಲ್ಲದೇ ನಡೆದಿವೆ.

ಇನ್ನೂ ಜಿಲ್ಲೆಯಲ್ಲಿ ಮೂವರು ಬಿಜೆಪಿ, ಇಬ್ಬರು ಕಾಂಗ್ರೆಸ್‌ ಶಾಸಕರುಆಯ್ಕೆಯಾಗಿದ್ದಾರೆ. ಇಲ್ಲಿ ಶಾಸಕರಿಗೂಸಹ ಜಿಪಂ ಕ್ಷೇತ್ರಗಳ ಚುನಾವಣೆಯುತಮ್ಮ ಅಸ್ತಿತ್ವದ ಪ್ರಶ್ನೆಯಾಗಿವೆ. ಈಚೆಗೆನಡೆದ ಗ್ರಾಪಂ ಚುನಾವಣೆಗಳನ್ನೇ ಅತ್ಯಂತ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದ ಆಯಾಕ್ಷೇತ್ರಗಳ ಶಾಸಕರು, ಜಿಪಂ ಕ್ಷೇತ್ರಗಳು ಪಕ್ಷದಚಿಹ್ನೆಯ ಮೇಲೆ ನಡೆಯುವುದರಿಂದಇಲ್ಲಿ ಹಿನ್ನಡೆಯಾದರೆ ತಾವು ಮುಖಭಂಗಅನುಭವಿಸಬೇಕಾಗುತ್ತದೆ. ಜೊತೆಗೆಪಕ್ಷಕ್ಕೂ ಮುಜುಗುರವಾಗಲಿದೆ ಎನ್ನುವ ಉದ್ದೇಶದಿಂದಲೂ ಶಾಸಕರು ಸಹ ಜಿಪಂ ಕ್ಷೇತ್ರಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.

ಅನ್ಯ ಕ್ಷೇತ್ರಗಳತ್ತ ಚಿತ್ತ: ಈಗಾಗಲೇ ವಿವಿಧ ಜಿಪಂ ಕ್ಷೇತ್ರಗಳಿಗೆ ಸ್ಪರ್ಧಿಸಿಅಧಿಕಾರ ಅನುಭವಿಸಿರುವ ಸದಸ್ಯರು ತಮ್ಮ ಕ್ಷೇತ್ರದ ಮೀಸಲಾತಿ ಬದಲಾದರೆಅನಿವಾರ್ಯತೆಯಿಂದ ಕ್ಷೇತ್ರ ಬದಲಿಸಬೇಕಾಗುತ್ತದೆ. ಅದಕ್ಕೆ ನಮಗೆಸೂಕ್ತ ಕ್ಷೇತ್ರ ಯಾವುದು? ಯಾವಕ್ಷೇತ್ರಕ್ಕೆ ನಮ್ಮ ನಿರೀಕ್ಷೆಯಂತೆ ಮೀಸಲುಬರಬಹುದು? ಎನ್ನುವ ಲೆಕ್ಕಾಚಾರವನ್ನೂ ಹಾಕುತ್ತಿದ್ದಾರೆ. ಹಾಗಾಗಿ ಜಾತಿವಾರು,ಮತಗಳ ಲೆಕ್ಕಾಚಾರದಲ್ಲಿ ಆ ಕ್ಷೇತ್ರಗಳತ್ತ ಹಾಲಿ ಸದಸ್ಯರು ಕಣ್ಣಿಟ್ಟಿದ್ದು, ಆಯಾ ಕ್ಷೇತ್ರಗಳತ್ತಲೂ ಸುತ್ತಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ಹೊಸ ಹುರಿಯಾಳು: ಇನ್ನೂ ಜಿಲ್ಲೆಯಲ್ಲಿ ಐದು ಹೊಸ ಜಿಪಂ ಕ್ಷೇತ್ರಗಳುಉದಯವಾಗಿರುವ ಹಿನ್ನೆಲೆಯಲ್ಲಿ ಆಯಾಕ್ಷೇತ್ರಗಳಲ್ಲಿಯೇ ಆಕಾಂಕ್ಷಿತರು ಈ ಬಾರಿಜಿಪಂ ಚುನಾವಣೆಗೆ ಸ್ಪರ್ಧೆ ಮಾಡೋಣ ಎನ್ನುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ನಾವುಸ್ಪರ್ಧಿಸಿ ಗೆದ್ದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಬಹುದು. ಮುಂದೆ ರಾಜಕೀಯ ಭವಿಷ್ಯವೂ ನಮಗೆ ಲಭಿಸಲಿದೆ ಎನ್ನುವ ಲೆಕ್ಕಾಚಾರವನ್ನೂಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಜಿಪಂ ಕ್ಷೇತ್ರಗಳ ಮರುವಿಂಗಡಣೆಯಾಗಿದ್ದು, ಕೆಲವರು ಕ್ಷೇತ್ರಗಳಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾಆಯೋಗದ ಮೊರೆ ಹೋಗುತ್ತಿದ್ದರೆ,ಇನ್ನು ಕೆಲವರು ಮೀಸಲಾತಿ ಘೋಷಣೆಯಾವಾಗ ನಡೆಯಲಿದೆಯೋ ಎನ್ನುವ ಕನವರಿಕೆಯಲ್ಲಿ ತೊಡಗಿದ್ದಾರೆ. ಆದರೆ ಆಯೋಗವು ಕೋವಿಡ್‌-19 ಎರಡನೇ ಅಲೆಯ ಮಧ್ಯೆ ಚುನಾವಣೆ ಘೋಷಣೆ ಮಾಡಲಿದೆಯೋ ಅಥವಾಮುಂದೂಡುತ್ತೋ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಜಿಲ್ಲೆಯಲ್ಲಿ ಈಗಾಗಲೇಜಿಪಂ ಕ್ಷೇತ್ರಗಳನ್ನುಮರು ವಿಂಗಡಿಸಿ ಕ್ಷೇತ್ರಗಳನ್ನು ರಚಿಸಲಾಗಿದೆ. ಶೀಘ್ರದಲ್ಲಿಯೇ ಚುನಾವಣಾ ಆಯೋಗವು ಜಿಪಂಕ್ಷೇತ್ರಗಳ ಮೀಸಲಾಗಿ ಘೋಷಣೆಮಾಡಬಹುದು. ನಾವು ಚುನಾವಣೆಗೆಸರ್ವ ಸನ್ನದ್ಧರಾಗಿದ್ದೇವೆ. ಪಕ್ಷದಲ್ಲಿಚುನಾವಣೆ ತಯಾರಿ ಕುರಿತಂತೆಸಭೆಗಳು ನಡೆದಿವೆ. ಮೀಸಲಾತಿಘೋಷಣೆ ಬಳಿಕ ಎಲ್ಲ ಪ್ರಕ್ರಿಯೆನಡೆಯಲಿದೆ. -ದೊಡ್ಡನಗೌಡ ಪಾಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ, ಕೊಪ್ಪಳ

ನಾವು ಚುನಾವಣೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದೇವೆ.ಬ್ಲಾಕ್‌ ಹಂತದಲ್ಲೂ ಸಭೆನಡೆಸಿದ್ದೇವೆ. ಈಚೆಗೆ ಕಾರಟಗಿಹಾಗೂ ಕನಕಗಿರಿಯಎರಡೂ ತಾಲೂಕಿನಲ್ಲೂ ಸಭೆನಡೆಸಲಾಗಿದೆ. ಜಿಪಂ ಕ್ಷೇತ್ರಗಳಮೀಸಲಾತಿ ಪ್ರಕಟವಾಗುವುದನ್ನು ಕಾಯುತ್ತಿದ್ದೇವೆ. ಯಾವುದೇಸಂದರ್ಭದಲ್ಲಿ ಚುನಾವಣೆಘೋಷಣೆಯಾದರೂ ನಾವುತಯಾರಾಗಿರುತ್ತೇವೆ.-ಶಿವರಾಜ ತಂಗಡಗಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ಕೊಪ್ಪಳ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next