Advertisement

ಶಿರ್ವ: ಗ್ರಾಮ‌ ಪಂಚಾಯತ್ ಚುನಾವಣೆ ಗೆದ್ದ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೋಡ್ರಿಗಸ್

01:47 PM Dec 30, 2020 | Team Udayavani |

ಕಾಪು: ಶಿರ್ವ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಕಾಂಗ್ರೆಸ್ ಬೆಂಬಲಿತರಾದ ವಿಲ್ಸನ್‌ ರೋಡ್ರಿಗಸ್ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 5 ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

Advertisement

ಶಿರ್ವ ಗ್ರಾಮ ಪಂಚಾಯತ್ ನ 9ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಅವರು ಪ್ರತಿಸ್ಪರ್ಧಿ ಶೈಲೇಶ್ ಅವರ ವಿರುದ್ಧ 39 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ‌. ಅವರದ್ದೇ ಕ್ಷೇತ್ರದಲ್ಲಿ ಫಾರೂಕ್ ಜಯ ಸಾಧಿಸಿದ್ದಾರೆ.

ಎರಡು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ 6 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ನ ಬಣ ರಾಜಕೀಯದ ಅಭ್ಯರ್ಥಿಗಳು ಇಲ್ಲಿ ಕಣದಲ್ಲಿದ್ದರು.‌

ಇದನ್ನೂ ಓದಿ:ಮತ ಎಣಿಕೆ ಸ್ವಾರಸ್ಯ: ಮತವನ್ನು ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ!

ವಿಲ್ಸನ್ ರೋಡ್ರಿಗಸ್ ಅವರು ಐದನೇ ಬಾರಿಗೆ ಗ್ರಾಮ‌ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗೆಲುವಿನ‌ ಮಂದಹಾಸ ಬೀರಿದ್ದಾರೆ. ಹಿಂದಿನ ಬಾರಿ ಗ್ರಾಮ‌ ಪಂಚಾಯತ್ ಸದಸ್ಯರಾಗಿದ್ದ ಅವರು, ಜಿಲ್ಲಾ ಪಂಚಾಯತ್ ಚುನಾವಣೆಗಾಗಿ ಸ್ಥಾನ ತೊರೆದಿದ್ದರು.

Advertisement

ಈ ಬಾರಿ ಮತ್ತೆ ಗ್ರಾಮ‌ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next