ಕಲಬುರಗಿ: ಜಿ.ಪಂ., ತಾ.ಪಂ. ಚುನಾವಣೆ ಯನ್ನು ಒಬಿಸಿ ಮೀಸಲಾತಿ ಇಲ್ಲದೇ ನಡೆಸಬಾರದು ಎನ್ನುವ ಕುರಿತು ಸಿಎಂ ಹಾಗೂ ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗಿದೆ. ಆದರೆ ಯಾವಾಗ ಚುನಾವಣೆ ನಡೆಯುತ್ತದೆ ಎನ್ನುವುದನ್ನು ಈಗಲೇ ಹೇಳಲಿಕ್ಕೆ ಆಗದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ., ತಾ.ಪಂ. ಚುನಾವಣೆ ಸಂಬಂಧ ಈಗಾಗಲೇ ಹಲವು ಸುತ್ತು ಚರ್ಚಿಸಲಾಗಿದೆ. ಆದರೆ ಚುನಾವಣೆ ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ನಡೆಯಬಹುದು ಎನ್ನುವುದು ತಿಳಿಯುತ್ತಿಲ್ಲ.
ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್‌ನವರಿಗೆ ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ. ಅವರದ್ದೇ ಸರಕಾರ ಇದ್ದಾಗ ಯೋಜನೆ ಏಕೆ ಜಾರಿ ಮಾಡಲಿಲ್ಲ.
ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ರಾಜ್ಯದಲ್ಲಿ ಹಿಜಾಬ್, ಹಿಂದೂ-ಮುಸ್ಲಿಂ ಗಲಾಟೆ ಆಗಲು ಕಾಂಗ್ರೆಸ್ ಕಾರಣ. ಹಿಂದೂ- ಮುಸ್ಲಿಂ ದೂರ ದೂರವಾಗಬೇಕು ಎನ್ನುವ ನಿಟ್ಟಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ.
ಮುಸ್ಲಿಂ ಮತ ಬ್ಯಾಂಕ್‌ಗಾಗಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜಾತಿಗಳನ್ನು ಒಡೆದು ಅ ಧಿಕಾರ ಕಳೆದು ಕೊಂಡಿದೆ. ಇದೀಗ ಹಿಂದೂ-ಮುಸ್ಲಿಂ ವಿವಾದ ಹೆಚ್ಚಿಸಿ, ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿಕೊಳ್ಳುತ್ತಿದ್ದಾರೆ ಎಂದರು.