Advertisement

ಕೇರಳದಲ್ಲಿ ಝೀಕಾ ವೈರಸ್‌:ಗಡಿಜಿಲ್ಲೆಗೆ ಎಚ್ಚರಿಕೆ ಗಂಟೆ

07:54 PM Jul 11, 2021 | Team Udayavani |

ಚಾಮರಾಜನಗರ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವಕೇರಳದಲ್ಲಿ ನಾಲ್ಕೈದು ದಿನಗಳ ಹಿಂದೆ ಸೊಳ್ಳೆಗಳಿಂದಹರಡುವ ಝೀಕಾ ವೈರಸ್‌ ಪತ್ತೆಯಾಗಿದ್ದು, ಅಂದಾಜು40ಜನರಿಗೆ ಹರಡಿದೆ.

Advertisement

ಇದು ನೆರೆಯಲ್ಲೇ ಇರುವ ಚಾಮರಾಜನಗರ ಜಿಲ್ಲೆಗೂ ಎಚ್ಚರಿಕೆ ಗಂಟೆಯಾಗಿದೆ.ಈ ಹಿಂದೆ ಡೆಂ à, ಚಿಕೂನ್‌ಗುನ್ಯ ಕಾಯಿಲೆಗಳಕಾರಣವಾಗಿದ್ದ ಈಡೀಸ್‌ ಈಜಿಪ್ಟಿ ಸೊಳ್ಳೆಗಳೇ ಝೀಕಾವೈರಸ್‌ಗೂ ಕಾರಣವಾಗಿವೆ.ಈಸೊÙಗಳ್ಳೆ ‌ು ಹಗಲು ಹಾಗೂಮುಸ್ಸಂಜೆ ಹೊತ್ತಿನಲ್ಲಿ ಸಕ್ರಿಯವಾಗಿರುತ್ತವೆ.

ಈ ಸೋಂಕು ತಗುಲಿದವರಿಗೆ ಜ್ವರ, ತಲೆನೋವು,ಮೈಕೈನೋವು, ಸುಸ್ತಿನ ಲಕ್ಷಣಗಳುಕಾಣಿಸಿಕೊಳ್ಳುತ್ತವೆ. ಇದುಗರ್ಭಿಣಿಯರಿಗೆ ತಗುಲಿದರೆಜನಿಸುವ ಶಿಶುವಿನ ಮೆದುಳಿನಬೆಳವಣಿಗೆಗೆ ತೊಂದರೆಯಾಗಬಹುದೆಂದು ತಜ್ಞರು ತಿಳಿಸಿದ್ದಾರೆ.

ಹಾಗಾಗಿಜನರು ಸೊಳ್ಳೆಗಳ ನಿಯಂತ್ರಣಕ್ಕೆಆದ್ಯತೆನೀಡಬೇಕಿದೆ. ನಗರ ಹಾಗೂ ಗ್ರಾಮಗಳ ಸ್ಥಳೀಯ ಸಂಸ್ಥೆಗಳು ಸೊಳ್ಳೆಗಳ ನಿಯಂತ್ರಣಕ್ಕೆವ್ಯಾಪಕಕ್ರಮಕೈಗೊಳ್ಳಬೇಕಾದಅಗತ್ಯವಿದೆ.ಸಾಮಾನ್ಯವಾಗಿ ಸೊಳ್ಳೆಗಳು ಮನೆಯೊಳಗೆ ಹೆಚ್ಚಿನಸಂಖ್ಯೆಯಲ್ಲಿ ಪ್ರವೇಶಿಸುವುದು ಮುಸ್ಸಂಜೆ ವೇಳೆಗೆ. ಸಂಜೆ6ಗಂಟೆಯಬಳಿಕಮನೆಯಕಿಟಕಿಹಾಗೂಬಾಗಿಲನ್ನುಮುಚ್ಚಿ,ರಾತ್ರಿ8ಗಂಟೆಯ ಬಳಿಕ ತೆರೆದರೆ ಸೊಳ್ಳೆಗಳು ಮನೆ ಯೊಳಗೆಹೆಚ್ಚಿನ ಸಂಖ್ಯೆಯಲ್ಲಿಬರುವುದನ್ನು ತಡೆಯಬಹುದಾಗಿದೆ.ಜಿಲ್ಲೆಯಲ್ಲೂ ಮುಂಜಾಗ್ರತೆ: ಜಿಲ್ಲೆಯ ಗಡಿಗೆ ಹೊಂದಿಕೊಂಡಂತೆ ಇರುವ ಕೇರಳದಲ್ಲಿ ಸೊಳ್ಳೆಗಳಿಂದ ‌ ಹರಡುವ ಝೀಕಾ ವೈರಸ್‌ ಸೋಂಕು ಪತ್ತೆಯಾಗಿರ ೆ¤ ುವ ಹಿನ್ನೆಲೆಯಲ್ಲಿಜಿಲ್ಲೆಯಲ್ಲೂ ಮುಂಜಾಗ್ರತೆ ವಹಿಸಲುಕ್ರಮಗಳನ್ನುಕೈಗೊಳ್ಳಲಾಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆಅ ರಣ್ಯ ಪ್ರದೇಶ ಕೇರಳ ಗಡಿಗೆ ಹೊಂದಿಕೊಂಡಿದೆ.

ಕೋವಿಡ್‌ಹಿನ್ನೆಲೆಯಲ್ಲಿ ಈಗಾಗಲೇ ಮೂಲೆಹೊಳೆ ಚೆಕ್‌ ಪೋಸ್ಟ್‌ನಲ್ಲಿಕೇರಳದಿಂದ ಬರುವವರು48 ಗಂಟೆಗಳೊಳಗಿನಕೋವಿಡ್‌ನೆಗೆಟಿವ್‌ ರಿಪೋರ್ಟ್‌ ತರುವುದುಕಡ್ಡಾಯವಾಗಿದೆ.ಪ್ರಮುಖವಾಗಿ, ಝೀಕಾ ವೈರಸ್‌ ಸೊಳ್ಳೆಗಳಿಂದಹರಡುವ ಕಾಯಿಲೆಯಾದ್ದರಿಂದ ಸೊಳ್ಳೆಗಳ ನಿರ್ಮೂಲನೆಗೆಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಜಿಲ್ಲಾಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

Advertisement

ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದಸೊಳ್ಳೆಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಣೆ,ಚರಂಡಿಗಳ Óತ್ಛತ್ವ ೆ, ಫಾಗಿಂಗ್‌ ಮಾಡುವ ಮೂಲಕ ಕ್ರಮಕೈಗೊಳ್ಳುವಂತೆ, ಗ್ರಾಪಂ, ಪಟ್ಟಣ ಪಂಚಾಯಿತಿ, ಪುರಸಭೆ,ನಗರಸಭೆ ಆಡಳಿತಗಳಿಗೆ ಸೂಚನೆ ನೀಡಲಾಗುತ್ತಿದೆ ಎಂದುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ ಉದಯವಾಣಿಗೆ ತಿಳಿಸಿದರು.ಮಲೇರಿಯಾ, ಡೆಂ à ಬಾರದಂತೆ ಸೊಳ್ಳೆಗಳ ನಿಯಂತ್ರಣಕ್ಕಾಗಿಈಗಾಗಲೇ ಕ್ರಮಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಈಗ ಝೀಕಾ ವೈರಸ್‌ ನೆರೆಯ ಕೇರಳ ರಾಜ್ಯದಲ್ಲೇ ಕಾಣಿಸಿಕೊಂಡಿರುವುದರಿಂದ ನಮ್ಮ ಜಿಲ್ಲೆಯಲ್ಲೂಸೊಳ್ಳೆಗಳ ನಿಯಂತ್ರಣಕ್ಕೆಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಝೀಕಾ ವೈರಸ್‌ ಈಡೀಸ್‌ ಈಜಿಪ್ಟಿ ಸೊಳ್ಳೆ ಳಿಂದಹರಡುವ ವೈರಸ್‌ ಆಗಿದ್ದು,ಈಸೊÙಗಳ್ಳೆ ‌ು ಹಗಲು ಹಾಗೂಮುಸ್ಸಂಜೆ ಹೊತ್ತಿನಲ್ಲಿ ಸಕ್ರಿಯವಾಗಿರುತ್ತವೆ. ಈಡಿಸ್‌ಸೊಳ್ಳೆಗಳು ನೀರಿನ ತೊಟ್ಟಿ, ಬಿಸಾಡಿದ ಖಾಲಿ ಎಳನೀರಿನಕರಟಗಳಲ್ಲಿ, ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಸಂಗ್ರಹವಾದ ನೀರಿನಲ್ಲಿಮೊಟ್ಟೆಗಳನ್ನು ಇಡುತ್ತವೆ. ಆದ್ದರಿಂದ ಜನರು ಇದಕ್ಕೆ ಆಸ್ಪದಕೊಡಬಾರದು. ಮನೆಯ ಮುಂದಿನ ಚರಂಡಿಗಳನ್ನುಸ್ವತ್ಛವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತಮುತ್ತಕಳೆಗಿಡಗಳನ್ನು ನಾಶ ಮಾಡಬೇಕು. ರಾತ್ರಿ ಮಲಗುವಾಗಸೊಳ್ಳೆಪರದೆ ಕಟ್ಟಿಕೊಳ್ಳಬೇಕು ಎಂದು ಡಿಎಚ್‌ಒ ಸಲಹೆ ನೀಡಿದರು.

ಕೆ.ಎಸ್‌.ಬನಶಂಕರಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next