Advertisement
ಇದನ್ನೂ ಓದಿ:Congress: ವಲಸೆ ಬಂದ ದತ್ತಾಗೆ ಇಲ್ಲ ಟಿಕೆಟ್: ಬಂಡಾಯದ ಕ್ಷೇತ್ರಗಳಿಗೆ ಕೈ ಹಾಕದ ಕೈ ಹೈಕಮಾಂಡ್
Related Articles
Advertisement
ಯಾರಿವರು ಕಾಮತ್ ಬ್ರದರ್ಸ್?
ನಿತಿನ್ ಮತ್ತು ನಿಖಿಲ್ ಕಾಮತ್ ಚಿಕ್ಕ ವಯಸ್ಸಿನಲ್ಲೇ ವ್ಯಾಪಾರ, ವಹಿವಾಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಬೆಂಗಳೂರಿನ ಬಸವನಗುಡಿ ನಿವಾಸಿಯಾದ ಕಾಮತ್ ಸಹೋದರರು ಶಿಕ್ಷಣಕ್ಕಿಂತ ಹೆಚ್ಚು ಟ್ರೇಡಿಂಗ್ ಕುರಿತು ಆಸಕ್ತಿ ಹೊಂದಿದ್ದರು. ಆರಂಭದಲ್ಲಿ Reliance Money ಮತ್ತು Way2Wealthನ ಸಬ್ ಬ್ರೋಕರ್ಸ್ ಆಗಿ ಕಾರ್ಯನಿರ್ವಹಿಸತೊಡಗಿದ್ದರು. ಈ ವಹಿವಾಟಿನ ಯಶಸ್ಸಿನ ಪರಿಣಾಮ ಕಾಮತ್ ಸಹೋದರರು ಝೆರೋದಾ ಕಂಪನಿ ಸ್ಥಾಪಿಸಲು ಕಾರಣವಾಯ್ತು.
ಷೇರು ಮಾರುಕಟ್ಟೆ ವಹಿವಾಟು ಪಾರದರ್ಶಕವಾಗಿಲ್ಲ ಎಂಬುದನ್ನು ಮನಗಂಡ ಕಾಮತ್ ಸಹೋದರರು ಷೇರುವಹಿವಾಟಿನ ದಲ್ಲಾಳಿ ಶುಲ್ಕ ಪಡೆಯಲು ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದ್ದರು. ಏತನ್ಮಧ್ಯೆ ಎನ್ ಎಸ್ ಇ (National Stock Exchange) ಮತ್ತು ಫೈನಾಶ್ಶಿಯಲ್ ಟೆಕ್ನಾಲಜೀಸ್ ನಡುವೆ ಜಟಾಪಟಿ ಆರಂಭವಾಗಿತ್ತು. ಹೀಗೆ 2008ರಲ್ಲಿ ಕಾಮತ್ ಸಹೋದರರು ಎನ್ ಎಸ್ ಇ ಸದಸ್ಯರಾಗಲು ಅವಕಾಶ ಸಿಕ್ಕಿತ್ತು. ಈ ಮೂಲಕ ದಲ್ಲಾಳಿಗಳು ಆ್ಯಪ್ ಅನ್ನು ಉಪಯೋಗಿಸಿ ವಹಿವಾಟು ನಡೆಸಲು ಅನುಮತಿ ನೀಡಿತ್ತು. ಇದರ ಪರಿಣಾಮ 2010ರಲ್ಲಿ ಎಲ್ಲಾ ಷೇರು ವಹಿವಾಟುದಾರರು ಝೆರೋದಾ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ವಹಿವಾಟು ಆರಂಭಿಸಿದ್ದರು.
ಪ್ರತಿ ವಹಿವಾಟಿಗೆ ಟ್ರೇಡರ್ಸ್ 20 ರೂಪಾಯಿ ಶುಲ್ಕ ಪಾವತಿಸಬೇಕು. ಆರಂಭಿಕ ವರ್ಷದಲ್ಲಿ 10,000 ಗ್ರಾಹಕರು ಝೆರೋದಾ ಆ್ಯಪ್ ಬಳಸಿದ್ದರು. ಯಾವುದೇ ಜಾಹೀರಾತು ಇಲ್ಲದೇ, ಕೇವಲ ಮೌಖಿಕವಾಗಿಯೇ ಝೆರೋದಾ ಆ್ಯಪ್ ಜನಪ್ರಿಯತೆ ಪಡೆಯುವ ಮೂಲಕ ಇಂದು ಲಕ್ಷಾಂತರ ಷೇರು ವಹಿವಾಟುದಾರರು ಆ್ಯಪ್ ಬಳಸುತ್ತಿದ್ದಾರೆ.