Advertisement

ಸ್ವಚ್ಛತಾ ಆ್ಯಪ್‌ ಬಳಕೆಯಲ್ಲಿ ಶೂನ್ಯ ಸಂಪಾದನೆ..!

12:14 PM Nov 23, 2021 | Team Udayavani |

ಬೆಂಗಳೂರು: ಐಟಿ-ಬಿಟಿ ರಾಜಧಾನಿ ಹಾಗೂ ಭಾರತದ ಸಿಲಿಕಾನ್‌ ವ್ಯಾಲಿ ಬೆಂಗಳೂರು, ಕೇಂದ್ರ ಸರ್ಕಾರವು ರೂಪಿಸಿದ “ಆ್ಯಪ್‌’ವೊಂದರ ಬಳಕೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಇದು ಮಹತ್ವಾಕಾಂಕ್ಷಿ ಸ್ವತ್ಛ ಸರ್ವೇಕ್ಷಣಾ ರ್‍ಯಾಂಕ್‌ ಪಟ್ಟಿಯಲ್ಲಿ 28ನೇ ರ್‍ಯಾಂಕ್‌ಗೆ ಕುಸಿಯಲು ಕಾರಣವಾಗಿದೆ.

Advertisement

ಕೇಂದ್ರ ಸರ್ಕಾರವು ಸ್ವತ್ಛ ಸರ್ವೇಕ್ಷಣಾ ರ್‍ಯಾಂಕಿಂಗ್‌ ವಿಧಿಸಿರುವ ಹಲವು ಮಾನದಂಡಗಳಲ್ಲಿ “ಸ್ವತ್ಛತಾ ಆ್ಯಪ್‌’ ಕೂಡ ಒಂದು. ಇದರಲ್ಲಿ ತ್ಯಾಜ್ಯ, ಸಾರ್ವಜನಿಕ ಶೌಚಾಲಯ, ನೀರು, ರಸ್ತೆ ಸ್ವತ್ಛತೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸಬಹುದು.

ಅವುಗಳನ್ನು ಆಯಾ ಸ್ಥಳೀಯ ನಗರ ಪಾಲಿಕೆಗಳು ಬಗೆಹರಿಸುತ್ತವೆ. ಇದರ ಪರಿಣಾಮಕಾರಿ ಬಳಕೆಯನ್ನು ಆಧರಿಸಿ ಪಾಲಿಕೆಗಳಿಗೆ ಅಂಕಗಳನ್ನು ನೀಡಲಾಗುತ್ತದೆ. ಈ ವಿಭಾಗದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಳಿಸಿದ ಅಂಕ ಶೂನ್ಯ. “ಸ್ವತ್ಛತಾ ಆ್ಯಪ್‌’ಗೆ 350 ಅಂಕ ನಿಗದಿಪಡಿಸಲಾಗಿದೆ. ಇದರ ಬಳಕೆಯನ್ನು ಆಧರಿಸಿ ವಿವಿಧ ನಗರ ಪಾಲಿಕೆಗಳು ಕನಿಷ್ಠ 200ರಿಂದ ಗರಿಷ್ಠ 300ಕ್ಕೂ ಅಧಿಕ ಅಂಕಗಳನ್ನು ಗಳಿಸಿವೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ವೈ.ಎಂ.ಸತೀಶ್ ಅವರು ನಾಮಪತ್ರ ಸಲ್ಲಿಕೆ  

ಆದರೆ, ಬಿಬಿಎಂಪಿಯು ಈಗಾಗಲೇ ತನ್ನದೇ ಆದ “ಸಹಾಯ’ ಆ್ಯಪ್‌ ಅನ್ನು ಹೊಂದಿದ್ದು, ಸಾರ್ವಜನಿಕ ಅಹವಾಲುಗಳು ಆ ಮೂಲಕವೇ ಸ್ವೀಕರಿಸಿ ಬಗೆಹರಿಸುತ್ತಿದೆ. ಹೀಗಾಗಿ, ಕೇಂದ್ರದ ಈ ಸ್ವತ್ಛತಾ ಆ್ಯಪ್‌ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಆದ್ದರಿಂದ ಜನರಿಗೆ ಇದರ ಬಳಕೆಗೆ ಅವಕಾಶವೇ ಸಿಕ್ಕಿಲ್ಲ. ಇದರ ಫ‌ಲವಾಗಿ ಅನಾಯಾಸವಾಗಿ ಪಾಲಿಕೆಯು 350 ಅಂಕಗಳನ್ನು ಕಳೆದುಕೊಂಡಿತು.

Advertisement

ಅಲ್ಲದೆ, ದೇಶದ ಟಾಪ್‌ 20 ನಗರಗಳಲ್ಲಿ ಬರುವ ಎಲ್ಲ ಅವಕಾಶಗಳನ್ನು ಕೈಚೆಲ್ಲಿತು. 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಒಟ್ಟಾರೆ 48 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ 3,585.56 ಅಂಕ ಗಳಿಸುವ ಮೂಲಕ ಬೆಂಗಳೂರು 28ನೇ ರ್‍ಯಾಂಕ್‌ ಪಡೆದಿದೆ. ಇದಕ್ಕಿಂತ ಮೇಲಿರುವ ಎಂಟು ಸ್ಥಳೀಯ ಸಂಸ್ಥೆಗಳು 100-300 ಅಂಕಗಳ ಅಂತರದಲ್ಲಿ ಮುಂದಿವೆ. ಹಾಗೊಂದು ವೇಳೆ ಈ ಆ್ಯಪ್‌ ಅನ್ನು ಸಮರ್ಪಕವಾಗಿ ಬಳಕೆ ಮಾಡಿದ್ದರೆ, ಸುಲಭವಾಗಿ ಟಾಪ್‌ 20ರ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆಯುತ್ತಿತ್ತು.

19ನೇ ಸ್ಥಾನದಲ್ಲಿರುವ ಮಹಾರಾಷ್ಟ್ರದ ಪಿಂಪ್ರಿಚಿಂಚವಾಡ ಗಳಿಸಿದ ಒಟ್ಟು ಅಂಕ 3,856.45 ಆಗಿದೆ. ತಂತ್ರಜ್ಞಾನ ಬಳಕೆಯಲ್ಲಿ ಬೆಂಗಳೂರಿಗರು ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಸ್ವತಃ ಬಿಬಿಎಂಪಿ ಪರಿಚಯಿಸಿರುವ ಸಹಾಯ ಆ್ಯಪ್‌ನಲ್ಲಿ ಕೂಡ ಅದನ್ನು ನೋಡಬಹುದಾಗಿದೆ. ಆದ್ದರಿಂದ ಸ್ವತ್ಛತಾ ಆ್ಯಪ್‌ ಬಳಕೆ ಪರಿಚಯಿಸಿ, ಪರಿ ಣಾಮಕಾರಿಯಾಗಿ ಜಾಗೃತಿ ಮೂಡಿಸಿದ್ದರೆ ನಗರ ಕೂಡ ಹಿಂದೆಬೀಳುತ್ತಿರಲಿಲ್ಲ. ಈ ನಿಟ್ಟಿನಲ್ಲಿ ನಾವು ನಗರದ ನಾಗರಿಕರನ್ನು ದೂಷಿಸುವ ಬದಲಿಗೆ ಬಿಬಿಎಂಪಿಯದ್ದೇ ಲೋಪ ಎಂದು ನಗರ ತಜ್ಞರೊಬ್ಬರು ತಿಳಿಸುತ್ತಾರೆ. ಸಹಾಯ ಆ್ಯಪ್‌ ಇದೆ;

ಸಮಜಾಯಿಷಿ: “ಪಾಲಿಕೆಯು ಈಗಾಗಲೇ ಸಹಾಯ ಆ್ಯಪ್‌ ಅನ್ನು ಬಳಕೆ ಮಾಡುತ್ತಿದ್ದು, ಅದು ಸ್ವತ್ಛತಾ ಆ್ಯಪ್‌ಗಿಂತ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆದರೆ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾನದಂಡಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ಅದು ಸೂಚಿಸಿದ ಆ್ಯಪ್‌ ಅನ್ನು ಬಳಕೆ ಮಾಡಬೇಕು.

ಅದೇನೇ ಇರಲಿ, ಮುಂಬರುವ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಾ.ಹರೀಶ್‌ ಕುಮಾರ್‌ ತಿಳಿಸುತ್ತಾರೆ. “ಸಹಾಯ ಆ್ಯಪ್‌ ಜತೆಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಬಿಬಿಎಂಪಿ ಮಾಡಿದೆ. ಅವೆಲ್ಲವೂ ಸ್ವತ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಉತ್ತಮ ರ್‍ಯಾಂಕ್‌ ಪಡೆಯಲು ಪೂರಕವಾಗಿವೆ. ಆದರೆ, ಸರಿಯಾದ ದಾಖಲೀಕರಣ ವ್ಯವಸ್ಥೆ ನಮ್ಮಲ್ಲಿ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಬರುವ ವರ್ಷದಿಂದ ಈ ಕಾರ್ಯಕ್ಕಾಗಿಯೇ ಪ್ರತ್ಯೇಕ ನಿಗಾ ಇಡಲಾಗುವುದು. ಪ್ರತಿಯೊಂದು ದಾಖಲೀಕರಣ ಆಗುವಂತೆ ಮಾಡಲಾಗುವುದು’ ಎಂದೂ ವಿಶೇಷ ಆಯುಕ್ತರು ಸ್ಪಷ್ಟಪಡಿಸಿದರು.

 ಸಹಾಯ ಆ್ಯಪ್‌ನಲ್ಲಿ ಏನಿದೆ?

ರಸ್ತೆ ಗುಂಡಿ, ತ್ಯಾಜ್ಯ ವಿಲೇವಾರಿ, ಕಾಮಗಾರಿ ವಿಳಂಬ, ಮರ ತೆರವು, ಮಳೆ ನೀರುಗಾಲುವೆ, ಬೀದಿನಾಯಿ ಹಾವಳಿ, ಸೊಳ್ಳೆ ಕಾಟ, ಬೀದಿ ದೀಪ, ಹಾವು ಮತ್ತಿತರ ಸಮಸ್ಯೆಗಳಿಗೆ ತ್ವರಿತವಾಗಿ ಸಹಾಯ ಆ್ಯಪ್‌ನಲ್ಲಿ ಪರಿಹಾರ ದೊರೆಯಲಿದೆ. ನಗರದ 198 ವಾರ್ಡ್‌ಗಳ ನಾಗರಿಕರ ಕುಂದುಕೊರತೆ ಆಲಿಸುವುದಕ್ಕೆ ದಿನದ 24 ಗಂಟೆ ನಿಯಂತ್ರಣ ಕೊಠಡಿ ಇದೆ. ಜತೆಗೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಇದಲ್ಲದೆ, ಸಹಾಯ ಆ್ಯಪ್‌ ಬಳಕೆ ಮಾಡಲಾಗುತ್ತಿ¨

 ಸ್ವಚ್ಛತಾ ಆ್ಯಪ್‌ನಲ್ಲಿ ಏನಿದೆ?

ತ್ಯಾಜ್ಯ ವಿಲೇವಾರಿ, ತ್ಯಾಜ್ಯ ವಾಹನ ಬಾರದಿರುವುದು, ಡಸ್‌ r ಬಿನ್‌ ಸ್ವತ್ಛವಾಗಿಲ್ಲದಿರುವುದು, ಮೃತಪಟ್ಟ ಪ್ರಾಣಿಗಳು, ಸಾರ್ವಜನಿಕ ಶೌಚಾಲಯ ಸ್ವತ್ಛವಾಗಿಲ್ಲದಿದ್ದರೆ, ನೀರು ಮತ್ತು ವಿದ್ಯುತ್‌ ಪೂರೈಕೆ ಇಲ್ಲದಿರುವುದು ಮತ್ತಿತರ ಸಮಸ್ಯೆಗಳನ್ನು ಈ ಆ್ಯಪ್‌ ಮೂಲಕ ಗಮನಕ್ಕೆ ತಂದು, ಪರಿಹಾರ ಕಂಡುಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next