ಇದೀಗ ಸೊನ್ನೆಯ ಆವಿಷ್ಕಾರದ ಕಾಲಘಟ್ಟದ ಬಗ್ಗೆ ಹೊಸ ಜಿಜ್ಞಾಸೆ ಮೂಡಿದೆ. ಆದರೆ ಈ ಸೊನ್ನೆ ಮೂರು ಅಥವಾ ನಾಲ್ಕನೇ ಶತಮಾನದ ಆದಿಯಲ್ಲಿ ಭಾರತೀಯ ಗ್ರಂಥವೊಂದರಲ್ಲಿ ಬಳಕೆಯಾಗಿತ್ತು ಎಂದು ಆಕ್ಸ್‌ಫರ್ಡ್ ವಿವಿ ಹೇಳಿದೆ. ಅದರೆ ಪ್ರಸ್ತುತ ಎಲ್ಲರೂ ಇಷ್ಟುದಿನ ಹೇಳುತ್ತಿದ್ದ ಕಾಲಕ್ಕಿಂತ ಐದು ಶತಮಾನಗಳಷ್ಟು ಹಿಂದೆಯೇ ಅಂದರೆ, ಹಿಂದೆಯೇ ಸೊನ್ನೆಯನ್ನು ಭಾರತೀಯರು ಆವಿಷ್ಕರಿಸಿದ್ದರು ಎಂದು ವಿವಿಯು ಸಾಕ್ಷಿಸಹಿತ ಹೇಳಿದೆ. ವಿವಿ ನಡೆಸಿದ ಕಾರ್ಬನ್ ಡೇಟಿಂಗ್ ಪರೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ.
Advertisement
ವಿವಿ ಹೇಳಿರುವ ಪ್ರಕಾರ 1881ರಲ್ಲಿ ಪೇಶಾವರ ಸಮೀಪದ ಬಕಾÏಲಿಯಲ್ಲಿ ದೊರೆ ತಿದ್ದ ಮನುಸ್ಮತಿ ಪುಸ್ತಕದಲ್ಲಿ ನೂರಾರು ಬಾರಿ ಸೊನ್ನೆಯನ್ನು ಬಳಸಲಾಗಿದೆ. ಅಲ್ಲದೆ 3 ಅಥವಾ 4ನೇ ಶತಮಾನದ ಅವಧಿಯಲ್ಲೇ ಭಾರತದಲ್ಲಿ ಸೊನ್ನೆ ಬಳಕೆಯಲ್ಲಿತ್ತು ಎಂಬುದು ಈ ಕೃತಿಯಿಂದ ತಿಳಿದುಬಂದಿದೆ. 9ನೇ ಶತಮಾನದಲ್ಲಿ ಸೊನ್ನೆಯ ಆವಿಷ್ಕಾರವಾಗಿರಬಹುದು ಎಂದು ಈ ಹಿಂದೆ ಇತಿಹಾಸ ತಜ್ಞರು ಹೇಳಿದ್ದರು. ಆದರೆ ಅವರು ಹೇಳಿದ ಅವಧಿಗಿಂತಲೂ ಐದು ಶತಮಾನಗಳಷ್ಟು ಹಿಂದೆಯೇ ಸೊನ್ನೆಯ ಆವಿಷ್ಕಾರವಾಗಿದೆ ಎಂದು ಆಕ್ಸ್‌ಫರ್ಡ್ ವಿವಿ ಹೇಳಿದೆ. 1881ರಲ್ಲಿ ದೊರೆತಿದ್ದ ಮನುಸ್ಮತಿ 1902ರಿಂದಲೂ ಆಕ್ಸ್‌ಫರ್ಡ್‌ನ ಬೋಡ್ಲಿಯನ್ ಲೈಬ್ರರಿಯಲ್ಲಿದ್ದು, ಸುಮಾರು ಮೂರನೇ ಶತಮಾನದಲ್ಲಿ ರಚಿಸಿರುವ ಈ ಪುಸ್ತಕದಲ್ಲಿ 10, 100, 1000 ಎಂಬ ಅಂಕಿಗಳನ್ನು ಬಳಸಲಾಗಿದೆ ಎಂದು ಆಕ್ಸ್ ಫರ್ಡ್ ವಿವಿ ಹೇಳಿದೆ.