Advertisement

ಝೆನ್‌ನ ಹೊಸ ಮ್ಯಾಜಿಕಲ್‌- ಮ್ಯಾಕ್ಸ್‌ ಪ್ರೋ ಎಂ 2

12:30 AM Dec 31, 2018 | |

ಈ ಫೋನ್‌ನ ಕವಚ ಪ್ಲಾಸ್ಟಿಕ್‌ನದು ಎಂಬ ಒಂದು ತಕರಾರು ಬಿಟ್ಟರೆ ಇನ್ನೆಲ್ಲ ಸ್ಪೆಸಿಫಿಕೇಷನ್‌ ಉತ್ತಮವಾಗಿದೆ. ಮಧ್ಯಮ ದರ್ಜೆಯಲ್ಲಿ  ಉತ್ತಮ ಎನ್ನಬಹುದಾದ ಸ್ನಾಪ್‌ಡ್ರಾಗನ್‌ 660 ಎಂಟು ಕೋರ್‌ಗಳ ಪ್ರೊಸೆಸರ್‌ (2.2 ಗಿ.ಹ.) ಅನ್ನು ಈ ಮೊಬೈಲ್‌ ಹೊಂದಿದೆ. 3+32 ಜಿಬಿ, 4+64 ಜಿಬಿ ಹಾಗೂ 6+64 ಜಿಬಿಯ ಮೂರು ಆವೃತ್ತಿಗಳಿವೆ. 

Advertisement

ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನ ಹೊಂದಿರುವ ಬ್ರಾಂಡ್‌ ತೈವಾನ್‌ ಮೂಲದ ಆಸುಸ್‌.  ಆಸುಸ್‌ನ ಎಲ್ಲ ಮೊಬೈಲ್‌ ಫೋನ್‌ಗಳೂ ಒಂದೇ ವಿನ್ಯಾಸದಲ್ಲಿರುತ್ತವೆ, ಬೋರಿಂಗ್‌ ಅನ್ನೋ ಆರೋಪವೂ ಈ ಹಿಂದೆ ಇತ್ತು.  ಎಂಐ, ಒನ್‌ಪ್ಲಸ್‌,ಆನರ್‌, ರಿಯಲ್‌ಮಿ ಕಂಪೆನಿಗಳ ಅಬ್ಬರ ನೋಡಿ, ಆಸುಸ್‌ ಸಹ ಎಚ್ಚೆತ್ತುಕೊಂಡಿದೆ. ಆಸುಸ್‌ ಝೆನ್‌ಫೋನ್‌ ಮ್ಯಾಕ್ಸ್‌ ಪ್ರೊ ಎಂ1 ಎಂಬ ಮಧ್ಯಮ ದರ್ಜೆಯ ಫೋನಿನಲ್ಲಿ ಉತ್ತಮ ಕಾನ್ಫಿಗರೇಶನ್‌ ಮತ್ತು ತಕ್ಕ ಮಟ್ಟಿಗೆ ಉತ್ತಮ ವಿನ್ಯಾಸ ನೀಡಿ ಯಶಸ್ವಿಯಾಗಿತ್ತು.  ಅದರಿಂದ ಉತ್ತೇಜಿತವಾಗಿ ಇದೀಗ ಆಸುಸ್‌  ಝೆನ್‌ಫೋನ್‌ ಮ್ಯಾಕ್ಸ್‌ ಪ್ರೊ ಎಂ2  ಎಂಬ ಮಧ್ಯಮ ಕೆಟಗರಿಯ ಹೊಸ ಮಾಡೆಲ್‌ ಬಿಡುಗಡೆ ಮಾಡಿದೆ. 

ಈ ಫೋನ್‌ನ ಕವಚ ಪ್ಲಾಸ್ಟಿಕ್‌ನದು ಎಂಬ ಒಂದು ತಕರಾರು ಬಿಟ್ಟರೆ ಇನ್ನೆಲ್ಲ ಸ್ಪೆಸಿಫಿಕೇಷನ್‌ ಉತ್ತಮವಾಗಿದೆ. ಮಧ್ಯಮ ದರ್ಜೆಯಲ್ಲಿ  ಉತ್ತಮ ಎನ್ನಬಹುದಾದ ಸ್ನಾಪ್‌ಡ್ರಾಗನ್‌ 660 ಎಂಟು ಕೋರ್‌ಗಳ ಪ್ರೊಸೆಸರ್‌ (2.2 ಗಿ.ಹ.) ಅನ್ನು ಈ ಮೊಬೈಲ್‌ ಹೊಂದಿದೆ. 3+32 ಜಿಬಿ, 4+64 ಜಿಬಿ ಹಾಗೂ 6+64 ಜಿಬಿಯ ಮೂರು ಆವೃತ್ತಿಗಳಿವೆ. ಎರಡು ಸಿಮ್‌ ಹಾಕಿಕೊಂಡು  2 ಟಿಬಿವರೆಗೂ ಮೆಮೊರಿಕಾರ್ಡ್‌ ಹಾಕಿಕೊಳ್ಳುವ ಸೌಲಭ್ಯವೂ ಇದೆ.

ಒಂದು ಮಧ್ಯಮ ದರ್ಜೆಯ ಫೋನ್‌ನಲ್ಲಿ ಏನೆಲ್ಲ ಬೇಕೆಂದು ಕೇಳುತ್ತೇವೆಯೋ ಅದೆಲ್ಲವೂ ಈ ಮೊಬೈಲ್‌ನಲ್ಲಿ ಇರುವುದು ವಿಶೇಷ. ಬ್ಯಾಟರಿ ಚೆನ್ನಾಗಿರಬೇಕು ಎನ್ನುವವರಿಗಾಗಿ 5000 ಎಂಎಎಚ್‌ ಬ್ಯಾಟರಿ ಇದೆ. ಸ್ನಾಪ್‌ಡ್ರಾಗನ್‌ ಪ್ರೊಸೆಸರ್ರೆà ಇದೆ. 6.26 ಇಂದಿನ 2280*1080 ಪಿಕ್ಸಲ್‌ ಎಫ್ಎಚ್‌ಡಿಪ್ಲಸ್‌ ಐಪಿಎಸ್‌ ಡಿಸ್‌ಪ್ಲೇ ಇದೆ. ಪರದೆಯ ರಕ್ಷಣೆಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 6 ಇರುವುದು ವಿಶೇಷ. ಈ ದರ್ಜೆಯಲ್ಲಿ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 6 ರಕ್ಷಣೆ ನೀಡುತ್ತಿರುವುದು ಉತ್ತಮ ಅಂಶ.  12 ಮತ್ತು 5 ಮೆಗಾಪಿಕ್ಸಲ್‌ ಹಿಂದಿನ ಕ್ಯಾಮರಾ, 13 ಮೆಗಾಪಿಕ್ಸಲ್‌ ಸೆಲ್ಫಿà ಕ್ಯಾಮರಾ ಇದೆ. ಈ ಸೆಗ್‌ಮೆಂಟ್‌ನಲ್ಲಿ ಕ್ಯಾಮರಾ ಸ್ವಲ್ಪ ಕಡಿಮೆ ಎಂದೇ ಹೇಳಬೇಕು.

 ಫ‌ುಲ್‌ ವ್ಯೂ ನಾಚ್‌ ಡಿಸ್‌ಪ್ಲೇ ಇದೆ. ನಾಚ್‌ನ ಚಿಕ್ಕ ಜಾಗದಲ್ಲಿ ಎಲ್‌ಇಡಿ ಪ್ರಾಕ್ಸಿಮಿಟಿ ಸೆನ್ಸರ್‌ (ಫೋನನ್ನು ಕಿವಿಗಿಡುತ್ತಿದ್ದಂತೆ ಪರದೆ ಆಫ್ ಆಗುವ ತಂತ್ರಜ್ಞಾನ-ಪ್ರಾಕ್ಸಿಮಿಟಿ ಸೆನ್ಸರ್‌), ಎಲ್‌ಐಡಿ ಸೆಲ್ಫಿà ಫ್ಲಾಶ್‌, ಇಯರ್‌ಪೀಸ್‌, ನೊಟಿಫೀಕೇಷನ್‌ ಎಲ್‌ಇಡಿ ಮತ್ತು ಸೆಲ್ಫಿà ಕ್ಯಾಮರಾ ಇಷ್ಟನ್ನು ನಾಚ್‌ ಕಿಂಡಿಯೊಳಗೆ ಇರಿಸಲಾಗಿದೆ!

Advertisement

ಈ ಫೋನ್‌ನ ಮತ್ತೂಂದು ವಿಶೇಷವೆಂದರೆ, ಇದು ಪ್ಯೂರ್‌ ಅಂಡ್ರಾಯ್ಡ ಅಥವಾ ಸ್ಟಾಕ್‌ ಅಂಡ್ರಾಯ್ಡ. ಅಂದರೆ ಗೂಗಲ್‌ ತಯಾರಿಸಿ ಅಭಿವೃದ್ಧಿಪಡಿಸಿರುವ ಮೂಲ ಅಂಡ್ರಾಯ್ಡ ಇಂಟರ್‌ಫೇಸ್‌ ಬಿಟ್ಟರೆ, ಅದರ ಮೇಲೆ ಬೇರಾವುದೇ ಹೊದಿಕೆಯ ಬೆರಕೆ ಇರುವುದಿಲ್ಲ. ಉದಾಹರಣೆಗೆ, ಬಹುತೇಕ ಶಿಯೋಮಿ ಫೋನ್‌ಗಳಲ್ಲಿ ಅಂಡ್ರಾಯ್ಡ ಜೊತೆಗೆ ಶಿಯೋಮಿಯವರೇ ಅಭಿವೃದ್ಧಿ ಪಡಿಸಿರುವ ಎಂಐಯುಐ (ಯೂಸರ್‌ಇಂಟರ್‌ಫೇಸ್‌) ಇದ್ದರೆ, ಆನರ್‌,ಹುವಾವೇ ಫೋನ್‌ಗಳಲ್ಲಿ ಅಂಡ್ರಾಯ್ಡ ಜೊತೆಗೆ ಇಎಂಯುಐ ಇಂಟರ್‌ ಫೇಸ್‌ ಇರುತ್ತದೆ. ಮೂಲ ಅಂಡ್ರಾಯ್ಡ ಇಂಟರ್‌ಫೇಸ್‌ನಲ್ಲಿ ಇರದ ಹೆಚ್ಚುವರಿ ಅನುಕೂಲಗಳು ಇದರಲ್ಲಿರುತ್ತವೆ. ಆಸುಸ್‌ ಕೂಡ ಹಿಂದೆ ಝೆನ್‌ ಯುಐ ಬಳಸುತ್ತಿತ್ತು. ಅದು ಗ್ರಾಹಕರಿಗೆ ಅಷ್ಟೊಂದು ಇಷ್ಟವಾಗಲಿಲ್ಲ.   ಆದರೆ ಕೆಲವರು ಶುದ್ಧ ಅಂಡ್ರಾಯ್ಡ ಮಾತ್ರ ಬಯಸುತ್ತಾರೆ. ಅದಕ್ಕಾಗಿ ಆಸುಸ್‌ ಕಂಪೆನಿ ರಿಸ್ಕೇ ಬೇಡವೆಂದು ತನ್ನ ಝೆನ್‌ ಯುಐ ಕೈಬಿಟ್ಟು ಪ್ಯೂರ್‌ ಅಂಡ್ರಾಯ್ಡ ಅನ್ನು ಈ ಫೋನ್‌ನಲ್ಲಿ ಬಳಸಿದೆ. ಅಂಡ್ರಾಯ್ಡ ಓರಿಯೋ 8.1 ಆವೃತ್ತಿ ಹೊಂದಿದೆ. ಈಗಿನ ಸ್ಮಾರ್ಟ್‌ ಫೋನ್‌ಗಳು ಅಂಡ್ರಾಯ್ಡ ಪೈ 9.0 ಆವೃತ್ತಿಯೊಂದಿಗೆ ಬರುತ್ತಿವೆ. ಆಸುಸ್‌ ಬಾಕ್ಸ್‌ನೊಡನೆ ಪೈ ಆವೃತ್ತಿ ನೀಡಬಹುದಿತ್ತು. ಮುಂಬರುವ ಅಪ್‌ಡೇಟ್‌ನಲ್ಲಿ ಪೈ ದೊರಕುತ್ತದೆ ಎಂದು ಗ್ರಾಹಕರು ಸಮಾಧಾನಪಟ್ಟುಕೊಳ್ಳಬಹುದು.

ಈ ಫೋನ್‌ಗೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಇರುವುದಾಗಿ ಕಂಪೆನಿ ಹೇಳಿದೆ. ಆದರೆ ಮೈಕ್ರೋ ಯುಎಸ್‌ಬಿ ಪೋರ್ಟ್‌ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ಅನೇಕ ಗ್ರಾಹಕರು ಫಾಸ್ಟ್‌ ಚಾರ್ಜಿಂಗ್‌ ಇಲ್ಲ ಎಂದು ತಿಳಿಸಿದ್ದಾರೆ. ಸುರಕ್ಷತೆಗಾಗಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಇದ್ದು, ಅದು ಫೋನಿನ ಹಿಂಭಾಗದಲ್ಲಿದೆ. ಅಲ್ಲದೇ ಫೇಸ್‌ ಅನ್‌ ಲಾಕ್‌ ಕೂಡ ಇದೆ. ಆರಂಭದಲ್ಲಿ ಹೇಳಿದಂತೆ ಈ ಮೊದಲು ಆಸುಸ್‌ ಫೋನಿನ ವಿನ್ಯಾಸ ಆಕರ್ಷಕವಾಗಿರಲಿಲ್ಲ. ಆದರೆ ಈ ಮೊಬೈಲ್‌ ಫೋನಿನ ವಿನ್ಯಾಸ ಚೆನ್ನಾಗಿದೆ.

ಈ ಪೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ದೊರಕುತ್ತಿದೆ.
3+32 ಜಿಬಿ ಆವೃತ್ತಿಗೆ 13000 ರೂ., 4+64 ಜಿಬಿ ಆವೃತ್ತಿಗೆ 15000 ರೂ., 6+64 ಜಿಬಿ ಆವೃತ್ತಿಗೆ 17000 ರೂ. ದರವಿದೆ. ಖಂಡಿತ ಈ ಫೋನ್‌ ರೆಡ್‌ಮಿ ನೋಟ್‌ 6 ಪ್ರೊ, ರಿಯಲ್‌ಮಿ 2 ಪ್ರೊ,  ಆನರ್‌ 8ಎಕ್ಸ್‌ ಫೋನ್‌ಗಳಿಗೆ ಉತ್ತಮ ಸ್ಪರ್ಧೆ ನೀಡಲಿದೆ.

ಬೆಲೆ 13,000, 15000, 17000

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next