ನವದೆಹಲಿ: ಮೂರು ತಿಂಗಳುಗಳ ಸತತ ಪ್ರಯತ್ನದ ನಂತರ, ಸೋನಿ ಹಾಗೂ ಝೀ ಸಂಸ್ಥೆಗಳ ವಿಲೀನದ ಹಾದಿ ಸುಗಮವಾಗಿದೆ.
ಪ್ರಸ್ತಾವನೆಯ ಪ್ರಕಾರ, ಸೋನಿ ಕಾರ್ಪೊರೇಷನ್ ನ ಅಂಗ ಸಂಸ್ಥೆಯಾದ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಲಿಮಿಟೆಡ್ (ಎಸ್ ಪಿಎನ್) ಸಂಸ್ಥೆಯೊಂದಿಗೆ ಝೀ ಎಂಟರ್ ಟೈನ್ ಮೆಂಟ್ ಎಂಟರ್ ಪ್ರೈ ಸಸ್ (ಝೆಡ್ ಇಇ) ಸಂಸ್ಥೆ ವಿಲೀನಗೊಳ್ಳಲಿದೆ.
ಈ ಒಪ್ಪಂದದ ಪ್ರಕಾರ, ಝೀ ಕಂಪನಿಯ ಅತ್ಯಧಿಕ ಪ್ರಮಾಣದ ಷೇರುಗಳು ಸೋನಿ ಸಂಸ್ಥೆಯ ಪಾಲಾಗಲಿದ್ದು, ಝೀ ಕಂಪನಿ ಶೇ. 3.99ರಷ್ಟು ಷೇರುಗಳನ್ನು ಮಾತ್ರ ಹೊಂದಿರಲಿದೆ.
ಇದನ್ನೂ ಓದಿ:ಸ್ಮಾರ್ಟ್‌ಫೋನ್ ಖರೀದಿಸಿದ್ದಕ್ಕೆ ಅದ್ಧೂರಿ ಮೆರವಣಿಗೆ, ಭೂರಿ ಭೋಜನ : ವಿಡಿಯೋ ವೈರಲ್
ಆದರೆ, ಈ ಷೇರುಗಳ ಪ್ರಮಾಣವನ್ನು ಶೇ. 20ರವರೆಗೆ ಹೆಚ್ಚಿಸಿಕೊಳ್ಳಲು ಒಪ್ಪಂದದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.