Advertisement

ವೆಡ್ಡಿಂಗ್ ಫಿಲ್ಮ್ ರಿಲೀಸ್ ಮಾಡಿದ ಚಾಹಲ್ : ವಿಡಿಯೋ ನೋಡಿ

11:59 AM Apr 04, 2021 | Team Udayavani |

ನವದೆಹಲಿ : ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಿದ್ದು, ಇದೀಗ ತಮ್ಮ ಮದುವೆಯ ಸುಂದರ ಕ್ಷಣಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದಾರೆ. 2020ರ ಡಿಸೆಂಬರ್ ನಲ್ಲಿ ಧನಶ್ರೀ ಜೊತೆ ಚಾಹಲ್ ವಿವಾಹವಾಗಿದ್ದರು.

Advertisement

ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋ ಶೇರ್ ಮಾಡಿರುವ ಕ್ರಿಕೆಟಿಗ ಚಾಹಲ್, ಕೊನೆಗೂ ನಮ್ಮ ಮದುವೆ ಫಿಲ್ಮ್ ರಿಲೀಸ್ ಆಗಿದೆ. ಇಬ್ಬರ ಉಲ್ಲಾಸದ ಜೋಡಿ ಒಟ್ಟಿಗೆ ಬಂದಾಗ ಎಂದು ಬರದುಕೊಂಡಿದ್ದಾರೆ.

ಇತ್ತ ಚಾಹಲ್ ಪತ್ನಿ ಧನಶ್ರೀ ಕೂಡ ವಿಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದು, ಮದುವೆಯಾದ ಮೇಲೆ ಜೀವನ ರಿಸ್ಕಿಯಾಗಿದೆ ಎಂದಿದ್ದಾರೆ.

ಸದ್ಯ ಆರ್ ಸಿ ಬಿಯಲ್ಲಿರುವ ಚಾಹಲ್ ಐಪಿಎಲ್ ಕಡೆ ಗಮನ ಕೊಡುತ್ತಿದ್ದು, ಏಪ್ರಿಲ್ 5ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಾಡಲು ಸಿದ್ಧರಾಗುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next