ಮುಂಬೈ: ಭಾರತದ ಶ್ರೇಷ್ಠ ಏಕದಿನ ಆಟಗಾರರಲ್ಲಿ ಯುವರಾಜ್ ಸಿಂಗೂ ಕೂಡಾ ಒಬ್ಬರು. ಅದೆಷ್ಟೋ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಯುವರಾಜ್ ಸಿಂಗ್ ಭಾರತವನ್ನು ಗೆಲ್ಲಿಸಿದ ಕೀರ್ತಿ ಯುವರಾಜ್ ಸಿಂಗ್ ಗೆ ಸಲ್ಲುತ್ತದೆ. ಒಂದು ಕಾಲದಲ್ಲಿ ಭಾರತ ತಂಡದ ಉಪ ನಾಯಕನಾಗಿದ್ದ ಯುವರಾಜ್ ಸಿಂಗ್, ಮುಂದೆ ನಾಯಕನಾಗುವ ನಿರೀಕ್ಷೆ ಮೂಡಿಸಿದ್ದರು. ಸ್ವತಃ ಅವರೂ ಆ ನಿರೀಕ್ಷೆ ಹೊಂದಿದ್ದರು.
ಈ ಬಗ್ಗೆ ಸ್ವತಃ ಯುವರಾಜ್ ಸಿಂಗ್ ಹೇಳಿಕೊಂಡಿದ್ದರು. ಗೌರವ್ ಕಪೂರ್ ಜೊತೆ ಮಾತನಾಡುತ್ತಾ ಯುವರಾಜ್ ತನ್ನ ಈಡೇರದ ಆಕಾಂಕ್ಷೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ಕತ್ರಿನಾ ಕೈಫ್? ಈ ನಟಿಯ ಜೊತೆ ಡೇಟಿಂಗ್ ನಲ್ಲಿರುವ ನಟ ಯಾರು ?
2007ರಲ್ಲಿ ಭಾರತ ಏಕದಿನ ವಿಶ್ವಕಪ್ ನಲ್ಲಿ ಸೋಲನುಭವಿಸಿತ್ತು. ನಂತರ ಭಾರತ ಎರಡು ತಿಂಗಳು ಇಂಗ್ಲೆಂಡ್ ಸರಣಿಗೆ ತೆರಳಿತ್ತು. ಒಂದು ತಿಂಗಳು ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಗೆ ಸರಣಿ ಆಡಲು ತೆರಳಿದ್ದವು. ಮತ್ತೆ ಒಂದು ತಿಂಗಳು ಟಿ20 ವಿಶ್ವಕಪ್ ಗೆ ತೆರಳಬೇಕಿತ್ತು. ಹಾಗಾಗಿ ಹಿರಿಯ ಆಟಗಾರರು ಟಿ20 ವಿಶ್ವಕಪ್ ಬಗ್ಗೆ ಅಷ್ಟೇನೂ ಒಲವು ತೋರಿರಲಿಲ್ಲ. ಹೀಗಾಗಿ ಟಿ20 ತಂಡದ ನಾಯಕತ್ವಕ್ಕೆ ನಾನು ಉತ್ಸುಕನಾಗಿದ್ದೆ. ನನ್ನ ಹೆಸರನ್ನು ಪರಿಗಣಿಸಬಹುದು ಎಂದುಕೊಂಡಿದ್ದೆ. ಆದರೆ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕನನ್ನಾಗಿ ಮಾಡಿದರು ಎಂದು ಯುವಿ ಹೇಳಿದ್ದಾರೆ.
2007ರ ಚೊಚ್ಚಲ ವಿಶ್ವಕಪ್ ಗೆಲುವಿಗೆ ಯುವರಾಜ್ ಸಿಂಗ್ ಪ್ರಮುಖ ಕಾರಣರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಒಂದು ಓವರ್ ನ ಆರು ಸಿಕ್ಸ್, ಆಸೀಸ್ ವಿರುದ್ಧ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದರು. ಮುಂದೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 2011 ರ ಏಕದಿನ ವಿಶ್ವಕಪ್ ಗೆಲುವಿನಲ್ಲೂ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.