Advertisement

ವಿರಾಟ್‌ ಕೊಹ್ಲಿಗೆ ಯುವಿ ಗೋಲ್ಡನ್‌ ಶೂ ಉಡುಗೊರೆ

10:54 PM Feb 22, 2022 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾ ಆಲ್‌ರೌಂಡರ್‌ ಆಗಿದ್ದ ಯುವರಾಜ್‌ ಸಿಂಗ್‌ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ಗೋಲ್ಡನ್‌ ಶೂ ಉಡುಗೊರೆ ಯೊಂದನ್ನು ನೀಡಿ ಆತ್ಮೀಯ ಪತ್ರವೊಂದನ್ನು ಬರೆದಿದ್ದಾರೆ.

Advertisement

“ದಿಲ್ಲಿಯ ಪುಟ್ಟ ಹುಡುಗ ವಿರಾಟ್‌ ಕೊಹ್ಲಿ, ನಿಮಗಾಗಿ ಈ ವಿಶೇಷ ಗೋಲ್ಡನ್‌ ಶೂ ಉಡುಗೊರೆಯಾಗಿ ನೀಡುತ್ತಿದ್ದೇನೆ. ವಿಶ್ವದಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳಲ್ಲಿ ಮಂದಹಾಸ ಮೂಡುವಂತೆ ಮಾಡಿದ ನಿಮ್ಮ ನಾಯಕತ್ವವನ್ನು ಸಂಭ್ರಮಿಸುವ ಸಲುವಾಗಿ ಈ ವಿಶೇಷ ಉಡುಗೊರೆ. ತನ್ನತನವನ್ನು ನೀವು ಕಾಯ್ದುಕೊಳ್ಳುತ್ತೀರಿ ಎಂಬ ಆಶಾಭಾವ ಇದೆ. ದೇಶಕ್ಕೆ ಹೆಮ್ಮೆ ತರುವ ರೀತಿಯಲ್ಲಿ ನಿಮ್ಮ ಆಟವನ್ನು ಮುಂದುವರಿಸಿ’ ಎಂದು ಯುವರಾಜ್‌ ಪತ್ರ ಬರೆದಿದ್ದಾರೆ.

“ವಿರಾಟ್‌, ನೀವು ಕ್ರಿಕೆಟರ್‌ ಆಗಿ ಮತ್ತು ಒಬ್ಬ ಅತ್ಯುತ್ತಮ ವ್ಯಕ್ತಿಯಾಗಿ ಬೆಳೆದು ಬಂದ ಹಾದಿಯನ್ನು ನಾನು ಕಂಡಿದ್ದೇನೆ. ಭಾರತ ತಂಡದ ದಿಗ್ಗಜ ಆಟಗಾರರ ಎದುರು ತಿರುಗಾಡುತ್ತಿದ್ದ ನೀವೀಗ ಸ್ವತಃ ದಿಗ್ಗಜನಾಗಿ ಬೆಳೆದು ಯುವ ಆಟಗಾರರಿಗೆ ಮಾದರಿಯಾಗಿರುವುದು ಅದ್ಭುತವೇ ಸರಿ. ಕ್ರಿಕೆಟ್‌ ಲೋಕಕ್ಕೆ ನೀವು ಕಿಂಗ್‌ ಕೊಹ್ಲಿ, ಆದರೆ ನನಗೆ ನೀನು ಎಂದಿಗೂ “ಚೀಕು’ ಆಗಿಯೇ ಇರುವೆ’ ಎಂದಿದ್ದಾರೆ ಯುವರಾಜ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next