Advertisement

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ಅಭಿಯಾನ

10:56 PM Jun 12, 2021 | Team Udayavani |

ಹೊಸದಿಲ್ಲಿ: ಕೊರೊನಾ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನತೆಗೆ ಅನೇಕ ಕ್ರೀಡಾಪಟುಗಳು ನೆರವು ನೀಡುತ್ತಿದ್ದಾರೆ. ಇದೀಗ ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಕೂಡ ಕೋವಿಡ್‌ ಪರಿಹಾರಕ್ಕೆ ಕೈ ಜೋಡಿಸಿದ್ದಾರೆ.

Advertisement

ಯುವರಾಜ್‌ ತಮ್ಮ “ಯುವಿಕ್ಯಾನ್‌’ ಚಾರಿಟಿ ಸಂಸ್ಥೆಯ ಮೂಲಕ “ಮಿಷನ್‌-1000 ಬೆಡ್‌’ ಎನ್ನುವ ನೆರವಿನ ಅಭಿಯಾನ ಆರಂಭಿಸಿದ್ದಾರೆ. ಭಾರತದಾದ್ಯಂತ ಆಸ್ಪತ್ರೆಗಳಲ್ಲಿ “ಕ್ರಿಟಿಕಲ್‌ ಕೇರ್‌’ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಯುವಿ ಟ್ವಿಟ್‌ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ.

“ಕ್ರಿಟಿಕಲ್‌ ಕೇರ್‌ ಬೆಡ್‌ ಮತ್ತು ಸಲಕರಣೆಗಳನ್ನು ಹೊತ್ತ ಟ್ರಕ್‌ ಹೊಸದಿಲ್ಲಿಯಿಂದ ಹಿಮಾಚಲ ಪ್ರದೇಶ ತಲುಪಿದೆ. ಭಾರತದಾದ್ಯಂತ ಆರೋಗ್ಯ ಸೌಲಭ್ಯ ಹೆಚ್ಚಿಸುವ ನಮ್ಮ ಪಯಣಕ್ಕೆ ನಿಮ್ಮ ಬೆಂಬಲ ಇರಲಿ’ ಎಂದು ಯುವಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಇಫ್ಕೋ ಕಂಪನಿಯಿಂದ ರಾಜ್ಯದಲ್ಲಿ ನ್ಯಾನೋ ಯೂರಿಯಾ ಘಟಕ : ಸಚಿವ ಡಿ.ವಿ. ಸದಾನಂದ ಗೌಡ

Advertisement

Udayavani is now on Telegram. Click here to join our channel and stay updated with the latest news.

Next