Advertisement

ಸೆ.20 ರಿಂದ ಯುವರತ್ನ ಸಾಂಗ್‌ ಶೂಟ್‌

06:11 PM Sep 07, 2020 | Suhan S |

ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಯುವರತ್ನ’ ಚಿತ್ರದ ಕುರಿತಾದ ಸುದ್ದಿಯೊಂದು ಹೊರಬಿದ್ದಿದೆ. ಅದು ಹಾಡಿನ ಕುರಿತು. ಹೌದು, ಲಾಕ್‌ಡೌನ್‌ನಿಂದಾಗಿ “ಯುವರತ್ನ’ ಚಿತ್ರದ ಹಾಡುಗಳ ಚಿತ್ರೀಕರಣ ಬಾಕಿ ಇತ್ತು. ಈಗ ಚಿತ್ರತಂಡ ಹಾಡಿನ ಚಿತ್ರೀಕರಣಕ್ಕೆ ಮುಂದಾಗಿದೆ.

Advertisement

ಸೆಪ್ಟೆಂಬರ್‌ 20 ರಿಂದ “ಯುವರತ್ನ’ ಚಿತ್ರದ ಇಂಟ್ರೋಡಕ್ಷನ್‌ ಹಾಡನ್ನು ಚಿತ್ರೀಕರಿಸಲು ಚಿತ್ರತಂಡ ಮುಂದಾಗಿದೆ. ಜಾನಿ ಮಾಸ್ಟರ್‌ ಈ ಹಾಡಿನ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ “ಯುವರತ್ನ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ ಲಾಕ್‌ಡೌನ್‌ ನಿಂದಾಗಿ ಚಿತ್ರೀಕರಣ ಸ್ಥಗಿತವಾದ ಕಾರಣ, ಈಗ ಒಂದೊಂದೇ ಚಿತ್ರಗಳು ಚಿತ್ರೀಕರಣದತ್ತ ಸಿದ್ಧವಾಗುತ್ತಿವೆ. ಇದರಲ್ಲಿ “ಯುವರತ್ನ’ ಕೂಡಾ ಒಂದು.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ನಿರೀಕ್ಷೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇನ್ನೇನಿದ್ದರೂ, “ಯುವರತ್ನ’ ದರ್ಶನ ಆಗುವುದು ಯಾವಾಗ ಎಂದು ಪುನೀತ್‌ರಾಜಕುಮಾರ್‌ ಅವರ ಅಪಾರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. “ರಾಜಕುಮಾರ’ ಸಿನಿಮಾದ ಯಶಸ್ಸಿನ ಬಳಿಕ ಸಂತೋಷ್‌ ಆನಂದರಾಮ್‌ ಪುನಃ ಪುನೀತ್‌ರಾಜಕುಮಾರ್‌ ಅವರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಇನ್ನು, ವಿಜಯಕುಮಾರ್‌ ಕಿರಗಂದೂರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.  ಸಯೇಷಾ ಸೈಗಲ್‌ ಎನ್ನುವ ಈ ಚೆಲುವೆ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ.

ಹೌದು, ಸಯೇಷಾ ಸೈಗಲ್‌ ಶೀಘ್ರದಲ್ಲಿಯೇ “ಯುವರತ್ನ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಸಯೇಷಾ ಸೈಗಲ್‌, ಕನ್ನಡ ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next