Advertisement

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

04:18 PM Mar 22, 2024 | Team Udayavani |

ವರನಟ ಡಾ. ರಾಜಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ನಟ ಯುವ (ಗುರು) ರಾಜಕುಮಾರ್‌ “ಯುವ’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಅಡಿಯಿಡಲು ತಯಾರಾಗಿದ್ದಾರೆ. ಇದೇ ಮಾ. 29ರಂದು “ಯುವ’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇದೇ ವೇಳೆ ಮಾತಿಗೆ ಸಿಕ್ಕ ಯುವ ರಾಜಕುಮಾರ್‌ ಅಭಿನಯದ ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

Advertisement

ನಟನಾಗಬೇಕು ಎಂಬ ಕನಸು, ಯೋಚನೆ ಬಂದಿದ್ದು ಯಾವಾಗ?

ಎಲ್ಲರಿಗೂ ಗೊತ್ತಿರುವಂತೆ, ನಮ್ಮ ಮನೆಯಲ್ಲಿ ಮೊದಲಿನಿಂದಲೂ ಸಿನಿಮಾದ ವಾತಾವರಣವಿತ್ತು. ಚಿಕ್ಕವಯಸ್ಸಿನಿಂದಲೂ ನಮ್ಮ ತಾತ, ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ ಹೀಗೆ ಎಲ್ಲರೂ ನಟರಾಗಿ ಗುರುತಿಸಿಕೊಂಡಿದ್ದರಿಂದ, ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ನಾನು. ನನಗೇ ಗೊತ್ತಿಲ್ಲದಂತೆ, ಚಿಕ್ಕ ವಯಸ್ಸಿನಿಂದಲೇ ಸಿನಿಮಾ ನಟನಾಗಬೇಕು ಎಂಬ ಆಸೆ ಶುರುವಾಯಿತು. ಆದರೆ ಒಂದಷ್ಟು ವಿದ್ಯಾಭ್ಯಾಸ ಮುಗಿಸಿ ನಂತರ ಸಿನಿಮಾ ನಟನಾಗುವ ಯೋಚನೆ ಮಾಡಿದೆ.

“ಯುವ’ ಸಿನಿಮಾ ನಿಮಗೆ ಸಿಕ್ಕಿದ್ದು ಹೇಗೆ?

ನನಗೆ ನಿರ್ದೇಶಕ ಸಂತೋಷ್‌ ಆನಂದ್‌ ಅವರ ಸಿನಿಮಾ ಮೇಕಿಂಗ್‌, ಅವರ ವರ್ಕ್‌ ಸ್ಟೈಲ್‌ ಎಲ್ಲವೂ ಇಷ್ಟ. ಹಾಗಾಗಿ ನನ್ನ ಮೊದಲ ಸಿನಿಮಾ ಅವರ ಜೊತೆ ಮಾಡಬೇಕು ಎಂಬ ಆಸೆಯಿತ್ತು. ಅವರು ಸಿಕ್ಕಾಗಲೆಲ್ಲ, “ಯಾವುದಾದರೂ ಒಳ್ಳೆಯ ಸಬೆjಕ್ಟ್ ಇದ್ದರೆ, ನಾವೊಂದು ಸಿನಿಮಾ ಮಾಡೋಣ ಸರ್‌’ ಎನ್ನುತ್ತಿದ್ದೆ. ಕೊನೆಗೂ ನಾವು ಅಂದುಕೊಳ್ಳುತ್ತಿದ್ದ ಸಬ್ಜೆಕ್ಟ್ “ಯುವ’ ಸಿನಿಮಾದಲ್ಲಿ ಸಿಕ್ಕಿತ್ತು. ಹೀಗೆ ಸಿನಿಮಾ ಶುರುವಾಯ್ತು.

Advertisement

“ಯುವ’ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?

“ಯುವ’ ಸಿನಿಮಾದಲ್ಲಿ ನಾನು ಮಧ್ಯಮ ಕುಟುಂಬದ ಹುಡುಗನಾಗಿ ಕಾಣಿಸಿ ಕೊಂಡಿದ್ದೇನೆ. ಸಿನಿಮಾದ ಫ‌ಸ್ಟ್ ಹಾಫ್ನಲ್ಲಿ ಕಾಲೇಜ್‌ ಹುಡುಗನಾಗಿ, ಸೆಕೆಂಡ್‌ ಹಾಫ್ನಲ್ಲಿ ಡೆಲಿವರಿ ಬಾಯ್‌ ಆಗಿ ಕಾಣಿಸಿಕೊಂಡಿದ್ದೇನೆ. ಸ್ವಲ್ಪ ಮುಂಗೋಪಿಯಾಗಿರುವ, ರಗಡ್‌ ಲುಕ್‌ನಲ್ಲಿ ಇರುವಂಥ, ರಫ್ ಮ್ಯಾನರಿಸಂ ಇರುವಂಥ ಪಾತ್ರ ದಾಗಿದೆ.

ಸಿನಿಮಾದ ಶೂಟಿಂಗ್‌ ಅನುಭವ ಹೇಗಿತ್ತು?

ನಿರ್ದೇಶಕ ಸಂತೋಷ್‌ ಆನಂದರಾಮ್‌ ಮತ್ತು ನಿರ್ಮಾಪಕ ವಿಜಯ್‌ ಕಿರಗಂದೂರು ಇಬ್ಬರೂ ತುಂಬ ವೃತ್ತಿಪರರು. ಸಿನಿಮಾಕ್ಕೆ ಏನು ಬೇಕೋ ಅದೆಲ್ಲ ಎಫ‌ರ್ಟ್‌ ಹಾಕಿ ಸಿನಿಮಾ ಮಾಡಿದ್ದಾರೆ. ಅಂದುಕೊಂಡ ಸಮಯಕ್ಕೆ ಸರಿಯಾಗಿ “ಹೊಂಬಾಳೆ ಫಿಲಂಸ್‌’ನವರು ತುಂಬ ಪ್ರೊಫೆಷನಲ್‌ ಆಗಿ ಸಿನಿಮಾ ಮಾಡಿ ಮುಗಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಇಂಥದ್ದೊಂದು ವೃತ್ತಿಪರ ಟೀಮ್‌ ಜೊತೆ ಕೆಲಸ ಮಾಡಿದ್ದರಿಂದ ಸಾಕಷ್ಟು ವಿಷಯಗಳನ್ನು ಕಲಿತುಕೊಳ್ಳುವಂತಾಯಿತು.

ಸಿನಿಮಾಕ್ಕೆ ನೀವು ಏನೆಲ್ಲ ತಯಾರಿ ಮಾಡಿಕೊಳ್ಳಬೇಕಾಯ್ತು?

ಈ ಸಿನಿಮಾಕ್ಕೆ ಸುಮಾರು ಎಂಟು-ಹತ್ತು ತಿಂಗಳು ಸ್ಕ್ರಿಪ್ಟ್ಗೆ ಸಮಯ ತೆಗೆದು ಕೊಂಡಿತ್ತು. ಅದಾದ ನಂತರ ಸಿನಿಮಾದ ಕ್ಯಾರೆಕ್ಟರ್‌ಗೆ ತಕ್ಕಂತೆ ಒಂದಷ್ಟು ಹೋಮ್‌ ವರ್ಕ್‌ ಮಾಡಿಕೊಳ್ಳ ಬೇಕಾಗಿತ್ತು. ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರ ಸೂಚನೆಯಂತೆ ಆ್ಯಕ್ಷನ್‌, ಡ್ಯಾನ್ಸ್‌, ಕ್ಯಾರೆಕ್ಟರ್‌ ಪ್ರಸೆಂಟೇಷನ್‌ಗೆ ಸುಮಾರು ಐದಾರು ತಿಂಗಳು ತರಬೇತಿ ಪಡೆದುಕೊಂಡು ತಯಾರಿ ಮಾಡಿ ಕೊಳ್ಳಬೇಕಾಯಿತು.

ನಿಮ್ಮ ಪ್ರಕಾರ “ಯುವ’ ಸಿನಿಮಾವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಸಿನಿಮಾ. ಒಂದು ಸಿನಿಮಾ ದಲ್ಲಿ ಇರಬೇಕಾದ ಎಲ್ಲ ಥರದ ಎಂಟರ್‌ ಟೈನ್ಮೆಂಟ್‌ ಎಲಿಮೆಂಟ್ಸ್‌ “ಯುವ’ ಸಿನಿಮಾದಲ್ಲಿ. ಒಳ್ಳೆಯ ಕಥೆ, ಸಾಂಗ್ಸ್‌, ಡ್ಯಾನ್ಸ್‌, ಆ್ಯಕ್ಷನ್‌, ಡೈಲಾಗ್ಸ್‌, ಕಾಮಿಡಿ, ಎಮೋಶನ್ಸ್‌, ರಿಚ್‌ ಮೇಕಿಂಗ್‌, ಬಿಗ್‌ ಸ್ಟಾರ್‌ ಕಾಸ್ಟಿಂಗ್‌ ಹೀಗೆ ಆಡಿಯನ್ಸ್‌ ಏನೇನು ನಿರೀಕ್ಷಿಸುತ್ತಾರೋ, ಅದೆಲ್ಲವೂ ಇರುವಂಥ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ “ಯುವ’ ಸಿನಿಮಾದಲ್ಲಿದೆ.

“ಯುವ’ ಸಿನಿಮಾದ ಮೇಲೆ ನಿಮ್ಮ ನಿರೀಕ್ಷೆ ಹೇಗಿದೆ?

“ಯುವ’ ನನ್ನ ಮೊದಲ ಸಿನಿಮಾವಾಗಿದ್ದರಿಂದ, ಸಹಜವಾಗಿಯೇ ಸಿನಿಮಾದ ಮೇಲೆ ತುಂಬ ನಿರೀಕ್ಷೆಯಿದೆ. ಒಂದು ಒಳ್ಳೆಯ ಸಬ್ಜೆಕ್ಟ್ ಇಟ್ಟುಕೊಂಡು ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ಈಗಾಗಲೇ ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. “ಯುವ’ ಥಿಯೇಟರಿನಲ್ಲೂ ಆಡಿಯನ್ಸ್‌ಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆಯಿದೆ.

 ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next