Advertisement
ಪ್ರತಿ ವರ್ಷ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಜನಾಕರ್ಷಣೆಯಾಗಿ ಗಮನ ಸೆಳೆಯುವ ಯುವ ದಸರಾವನ್ನು(Yuva Dasara) ಈ ಬಾರಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬದಲಿಗೆ ನಗರದ ಹೊರವಲಯದಲ್ಲಿ ನಡೆಯಲಿದೆ.
Related Articles
Advertisement
ಅಕ್ಟೋಬರ್ 6: ಅಕ್ಟೋಬರ್ 6 ರಂದು ಯುವ ದಸರಾ ವೇದಿಕೆಯಲ್ಲಿ ಖ್ಯಾತ ಬಾಲಿವುಡ್ ಗಾಯಕಿಯಾಗಿರುವ ಶ್ರೇಯಾ ಘೋಷಾಲ್ ಅವರು ತನ್ನ ಮ್ಯೂಸಿಕಲ್ ಪರ್ಫಮೆನ್ಸ್ ನೀಡಲಿದ್ದಾರೆ.
ಅಕ್ಟೋಬರ್ 7: ಈ ದಿನ ಖ್ಯಾತ ಸಂಗೀತ ನಿರ್ದೇಶಕ- ಸಂಯೋಜಕ ಕನ್ನಡದ ಅಪ್ಪಟ ಪ್ರತಿಭೆ ರವಿ ಬಸ್ರೂರು ಮತ್ತವರ ತಂಡದಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 8: ಈ ಸಂಜೆ ಬಾಲಿವುಡ್‌ನ ಖ್ಯಾತ ಗಾಯಕ ಹಾಗೂ ರ್‍ಯಾಪರ್ ಆಗಿರುವ ಬಾದ್‌ಷಾ ಅವರು ಸಾವಿರಾರು ಮಂದಿ ದಸರಾ ಪ್ರೇಕ್ಷಕರನ್ನು ಬಾಲಿವುಡ್ ಹಾಡುಗಳ ಮೂಲಕ ರಂಜಿಸಲಿದ್ದಾರೆ.
ಅಕ್ಟೋಬರ್ 9: ಭಾರತದ ಖ್ಯಾತ ಗಾಯಕರು ಹಾಗೂ ಸಂಗೀತ ಸಂಯೋಕರಾಗಿರುವ ಎ.ಆರ್.ರೆಹಮಾನ್ ಅವರು ಕರುನಾಡಿನ ದಸರಾ ಹಬ್ಬಕ್ಕೆ ತನ್ನ ಹಾಡುಗಳ ಮೂಲಕ ಮೆರಗನ್ನು ನೀಡಿ ರಂಜಿಸಲಿದ್ದಾರೆ.
ಅಕ್ಟೋಬರ್ 10: ಯುವ ದಸರಾದ ಅಂತಿಮ ದಿನದಂದು ದಿಗ್ಗಜ ಮ್ಯೂಸಿಕ್ ಡೈರೆಕ್ಟರ್ ಇಳಯರಾಜ ಅವರು ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.