Advertisement

Panaji: ಬಿಜೆಪಿ ಸರ್ಕಾರ ಯುವಜನರನ್ನು ಮೂರ್ಖರನ್ನಾಗಿಸುವ ಕೆಲಸ ಮಾಡುತ್ತಿದೆ: ಅಲೆಮಾವ್

09:55 AM Jun 29, 2023 | Team Udayavani |

ಪಣಜಿ: ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಹಾದಾಯಿ, ಗಣಿಗಾರಿಕೆ, ಕಾನೂನು ಮತ್ತು ಸುವ್ಯವಸ್ಥೆ, ಹಣದುಬ್ಬರ ಮತ್ತು ನಿರುದ್ಯೋಗವು ಆಡಳಿತ ಪಕ್ಷಕ್ಕೆ ಪ್ರಮುಖ ಸಮಸ್ಯೆಗಳಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವ್ ಹೇಳಿದ್ದಾರೆ.

Advertisement

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಅಲೆಮಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಭರವಸೆಯನ್ನು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ನೀಡಿತ್ತು. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಕುತಂತ್ರವನ್ನು  ಬಯಲಿಗೆಳೆಯಲು  ಮತ್ತು ನಮ್ಮ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲು ನಾವು ಎಲ್ಲಾ ಏಳು ಪ್ರತಿಪಕ್ಷಗಳ ಶಾಸಕರೊಂದಿಗೆ ಸಭೆ ನಡೆಸಲಿದ್ದೇವೆ. ಬಿಜೆಪಿಯು ರಾಜ್ಯವನ್ನು ದಿವಾಳಿ ತನಕ್ಕೆ ತಳ್ಳಿದೆ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈ ಸಂವೇದನಾಶೀಲ ಸರ್ಕಾರ ಕಾರ್ಯಕ್ರಮ ನಿರ್ವಹಣೆ ಮತ್ತು ಪ್ರಚಾರಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ.  ಬಿಜೆಪಿ ಸರ್ಕಾರವು ಯುವಜನರನ್ನು ಮೂರ್ಖರನ್ನಾಗಿಸುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾಂವ ಆರೋಪಿಸಿದರು.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗೋವಾದಲ್ಲಿ ಕೋಮು ಉದ್ವಿಗ್ನತೆಯನ್ನು ಹರಡುವ ಬಿಜೆಪಿಯ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದು ಎಂದು ಯೂರಿ ಅಲೆಮಾಂವ ಹೇಳಿದರು.  ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕರು ಹಾಗೂ ರಾಜ್ಯಾಧ್ಯಕ್ಷರು ಬಿಜೆಪಿ ಸರ್ಕಾರದ ವೈಫಲ್ಯವನ್ನು ಟೀಕಿಸಿದರು.

ಉದ್ಯೊಗ ಇಲಾಖೆ ಮೂಲಕ ತರಬೇತಿ ಪೂರ್ಣಗೊಳಿಸಿದ ಯುವಕರಿಗೆ ನಿಗದಿತ ಉದ್ಯೊಗ ಸಿಗಲಿದ್ದು, ಕನಿಷ್ಠ 15 ಸಾವಿರ ರೂ.ವೇತನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ ನಂತರ ಜೂನ್ 12 ರಂದು ಪ್ರಧಾನ ಮಂತ್ರಿಗಳ ತರಬೇತಿ ಕಾರ್ಯಕ್ರಮದಡಿ 8,000 ರಿಂದ 10,000 ರೂ.ವರೆಗೆ ಉದ್ಯೋಗ ನೀಡುವುದಾಗಿ ಘೋಷಿಸಿದರು. ಬಿಜೆಪಿ ಸರ್ಕಾರ ಯುವಜನರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವ್ ಆರೋಪಿಸಿದರು. ಈ ಸಂದರ್ಭದಲ್ಲಿ  ಶಾಸಕ ಕಾರ್ಲೋಸ್ ಫೆರೇರಾ, ಎಲ್ಟನ್ ಡಿಕೋಸ್ಟಾ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಪಾಟ್ಕರ್ ಉಪಸ್ಥಿತರಿದ್ದರು.

ಇದನ್ನೂ ಓದಿ: Indian economy ಘನ ಚೇತರಿಕೆ ಹೊಂದಿದೆ: ಆರ್‌ಬಿಐ ಗವರ್ನರ್ ದಾಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next